ಕೇವಲ 24 ಗಂಟೆಗಳ ಕಾಲ ಕೋಟ್ಯಾಧಿಪತಿಯಾದ ಕಾರ್ಮಿಕ!
ಕಾರ್ಮಿಕನೊಬ್ಬ ಕೇವಲ 24 ಗಂಟೆಗಳ ಕಾಲ ಕೋಟ್ಯಾಧಿಪತಿಯಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಬಿಹಾರಿ ಲಾಲ್ ಭಟ್ಟ ಕೂಲಿ ಕಾರ್ಮಿಕನಾಗಿದ್ದು, ಕುಡಿತದ ಚಟ ಹೊಂದಿದ್ದ. ಅಷ್ಟಕ್ಕೂ ಈತ ಕೇವಲ ಒಂದು ದಿನಕ್ಕೆ ಶ್ರೀಮಂತನಾಗಲು ಹೇಗೆ ಕಾರಣ? ಇದರ ಹಿಂದಿರುವ ಕತೆ ಏನೆಂದು ಮುಂದೆ ಓದಿ..
ಸೋಮವಾರ ಲಾಲ್ ಭಟ್ಟಗೆ ಮದ್ಯ ಸೇವಿಸುವ ಮನಸ್ಸಾಗಿದೆ. ಆದರೆ ಈ ವೇಳೆ ಆತನ ಜೇಬಿನಲ್ಲಿ ಹಣ ಇರಲಿಲ್ಲ. ಬ್ಯಾಂಕಿನಲ್ಲಿದ್ದ ಹಣವನ್ನು ತೆಗೆದು ಮದ್ಯ ಸೇವಿಸಲು ಯೋಚಿಸದ್ದಾನೆ. ಈ ವೇಳೆ, ಖಾತೆಗೆ ಜಮೆಯಾದ ಹಣದ ಬಗ್ಗೆ ತಿಳಿಯಲು ಗ್ರಾಮದ ಮಿನಿ ಶಾಖೆಗೆ ತೆರಳಿ ಬಾಕಿ ಹಣ ಪರಿಶೀಲಿಸಿದ್ದಾನೆ.
ಆದರೆ, ಆಗ ಆತನಿಗೆ ಕಾದಿತ್ತು ದೊಡ್ಡ ಶಾಕ್!. ಹೌದು. ಅವರ ಖಾತೆಯಲ್ಲಿ 31 ಬಿಲಿಯನ್ 7 ಕೋಟಿ ರೂಪಾಯಿಗೂ ಹೆಚ್ಚು ಹಣ ಇರುವುದು ಪತ್ತೆಯಾಗಿದೆ. ಇದನ್ನು ನೋಡಿ ಬ್ಯಾಂಕ್ ಆಪರೇಟರ್ ಮತ್ತು ಬಿಹಾರಿ ಲಾಲ್ ಇಬ್ಬರೂ ಬೆಚ್ಚಿಬಿದ್ದಿದ್ದಾರೆ. ಬಳಿಕ, ಕಂಪ್ಯೂಟರ್ನಲ್ಲಿ ನೋಡಿದ ಮೊತ್ತವನ್ನು ನಮೂದಿಸಲು ಅವರು ಶಾಖೆಯನ್ನು ತಲುಪಿದರು, ಆದರೆ ಅಲ್ಲಿ ಹೆಚ್ಚಿನ ಜನರು ಇದ್ದಿದ್ದರಿಂದ ನಾಳೆ ಬರುವ ಎಂದು ಹಿಂತಿರುಗಿದ್ದಾರೆ.
ಆದ್ರೆ, ತಾನು ಕೋಟ್ಯಧಿಪತಿಯಾದ ಸುದ್ದಿ ಕುಡುಕನ ಬಾಯಲ್ಲಿ ನಿಲ್ಲಬೇಕೆ. ಹಾಗಾಗಿ, ಅಷ್ಟರಲ್ಲೇ ಕುಡುಕ ಬಿಹಾರಿ ಲಾಲ್ ತನ್ನ ಖಾತೆಯಲ್ಲಿರುವ ಕೋಟ್ಯಂತರ ರೂಪಾಯಿಯ ಮಾಹಿತಿಯನ್ನು ಇಡೀ ಗ್ರಾಮಕ್ಕೇ ಹೇಳಿದ್ದಾನೆ. ಬಳಿಕ ಶ್ರೀಮಂತನಾಗುವ ಕನಸನ್ನು ಕಣ್ಣಲ್ಲಿ ತುಂಬಿಕೊಂಡು ನಿದ್ದೆಗೆ ಜಾರಿದ್ದ. ಆದರೆ ಮಂಗಳವಾರ ಎದ್ದು ಅವಸರ ಅವಸರವಾಗಿ ಹಣ ತೆಗೆಯಲು ಬ್ಯಾಂಕ್ಗೆ ತಲುಪಿದಾಗ ಆತನಿಗೆ ಎದುರಾಗಿದ್ದೆ ಸಂಕಷ್ಟ. ಯಾಕಂದ್ರೆ ಒಂದು ರೂಪಾಯಿ ಕೂಡ ಡ್ರಾ ಮಾಡಲು ಆಗಲಿಲ್ಲ. ಅಲ್ಲದೇ ಆತನ ಖಾತೆಯಲ್ಲಿ ಹಿಂದಿನ ದಿನವಿದ್ದ ಬೃಹತ್ ಮೊತ್ತ ಕೂಡ ಮಾಯವಾಗಿತ್ತು.
24 ಗಂಟೆಗಳಲ್ಲಿ ಕೋಟ್ಯಧಿಪತಿಯಾಗುವ ಕನಸು ಕಂಡಿದ್ದಾತನಿಗೆ ನಿರಾಸೆಯಾಗಿದೆ.ಈ ವೇಳೆ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿ ಬಿ.ಸಿ.ಲಾಲ್ ಅವರನ್ನು ಮಾತನಾಡಿಸಿದಾಗ ಕಾರ್ಮಿಕರ ಖಾತೆಗೆ ಇಷ್ಟೊಂದು ಹಣ ಬಂದಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಗ್ಯಾಸ್ ಸಿಲಿಂಡರ್ನ ಸಬ್ಸಿಡಿ ಮಾತ್ರ ಖಾತೆಗೆ ಬಂದಿದ್ದು, ಈ ಮೊತ್ತವೂ ಖಾತೆಯಲ್ಲಿ ಕಾಣಿಸುತ್ತಿಲ್ಲ. ಇದರಲ್ಲಿ ಏನಾದರೂ ಅವ್ಯವಹಾರ ನಡೆದಿರಬೇಕು ಎಂದಿದ್ದಾರೆ.
ಒಟ್ಟಾರೆ, ಈ ಕಾರ್ಮಿಕನ ಒಂದು ದಿನದ ಶ್ರೀಮಂತಿಕೆಯ ಖುಷಿ, ಕನಸು ಅಂದಿಗೆ ಸೀಮಿತವಾಯಿತು…