ಮಳೆಯ ಆರ್ಭಟಕ್ಕೆ ತೇಲಿಹೋದ ಬಿರಿಯಾನಿ ಪಾತ್ರೆಗಳು| ವೈರಲಾದ ವೀಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಸಾಕಷ್ಟು ದೃಶ್ಯಗಳು ತಟ್ಟನೆ ನಮ್ಮಲ್ಲಿ ನಗುವುಕ್ಕುವಂತೆ ಮಾಡುತ್ತವೆ. ಕೆಲವು ದೃಶ್ಯಗಳು ನಗುವರಳಿಸುವ ಜತೆಗೆ ತದೇಕಚಿತ್ತದಿಂದ ನೋಡುವಂತೆಯೂ ಮಾಡುತ್ತವೆ. ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನು ಸ್ಮಾಲ್ ಮಾಡುತ್ತಾ ಹೋದಾಗ ಪ್ರತಿದಿನ ಇಂತಹ ಒಂದಲ್ಲ ಒಂದು ದೃಶ್ಯಗಳು ನಮಗೆ ಕಾಣಸಿಗುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ವೈರಲ್ ಆಗುತ್ತಿದೆ.

ಒಂದು ವಾರದಿಂದ ಸುಮ್ಮನಿದ್ದ ಮಳೆರಾಯ, ಈಗ ಭಾರೀ ಆರ್ಭಟದೊಂದಿಗೆ ಎಂಟ್ರಿ ಕೊಟ್ಟಿದ್ದಾನೆ. ಹೌದು ಈ ಮಳೆಯಿಂದಾಗುವ ಆವಾಂತರ ಒಂದಲ್ಲ ಎರಡಲ್ಲ‌. ಈ ಅವಾಂತರಗಳು ಕೆಲವೊಮ್ಮೆ ಮನುಷ್ಯ ವರ್ಗವನ್ನೇ ಬೆಚ್ಚಿ ಬೀಳಿಸುತ್ತೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಹೈದರಾಬಾದ್‌ನ ಹೋಟೆಲ್ ಒಂದರ ಮುಂಭಾಗ ನಡೆದ ಈ ದೃಶ್ಯ ಈಗ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಭಾರೀ ಮಳೆಯಿಂದ ಜಲಾವೃತವಾಗಿರುವ ರಸ್ತೆಯಲ್ಲಿ, ಹೋಟೆಲೊಂದರ ಬಿರಿಯಾನಿ ಪಾತ್ರೆಗಳು ತೇಲಿಕೊಂಡು ಹೋಗುತ್ತಿದೆ. ಸದ್ಯ ವೈರಲ್ ಆಗುತ್ತಿರುವ ಈ ಕ್ಲಿಪ್‌ನಲ್ಲಿ ಅದಿಬಾ ಎಂಬ ಹೆಸರಿನ ಹೋಟೆಲ್ ಕಾಣಿಸುತ್ತದೆ. ಭಾರೀ ಮಳೆಯ ಕಾರಣದಿಂದ ಈ ಹೋಟೆಲ್ ಒಳಗೂ ನೀರು ನುಗ್ಗಿತ್ತು. ಅಷ್ಟು ಮಾತ್ರವಲ್ಲದೇ, ಎರಡು ಬಿರಿಯಾನಿ ಪಾತ್ರೆಗಳು ನೀರಿನ ರಭಸಕ್ಕೆ ತೇಲಿಕೊಂಡು ರಸ್ತೆಯಲ್ಲಿ ಹೋಗಿದ್ದವು. ಇದನ್ನು ನೋಡಿ ಬಹುಶಃ ಬಿರಿಯಾನಿ ಪ್ರಿಯರಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಮೆಂಟ್ ಕೂಡಾ ಮಾಡಿದ್ದಾರೆ.

ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಒಂದಷ್ಟು ಬಿರಿಯಾನಿ ಪ್ರಿಯರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಇನ್ನೊಂದಷ್ಟು ಮಂದಿ ತಮಾಷೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮತ್ತೊಂದಷ್ಟು ಮಂದಿ ಹೋಟೆಲ್‌ನವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು `ಧಮ್ ಬಿರಿಯಾನಿಯಂತೆಯೇ ತೇಲುವ ಬಿರಿಯಾನಿ’ ಎಂದು ತಮಾಷೆ ಮಾಡಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯದಲ್ಲಿ ಭಾರೀ ವೇಗವಾಗಿ ಹರಿದಾಡುತ್ತಿದೆ. ಈ ದೃಶ್ಯ ಕಂಡ ಬಹುತೇಕರು ಬಲು ತಮಾಷೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.

error: Content is protected !!
Scroll to Top
%d bloggers like this: