ಹಾಡೊಂದಕ್ಕೆ ಭರ್ಜರಿ ಡ್ಯಾನ್ಸ್ ಮಾಡುತ್ತಾ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ !!!

ಚಂದನವನದ ಒಂದು ಕಾಲದ ಬಹುಬೇಡಿಕೆಯ ನಟಿ ರಾಧಿಕಾ ಕುಮಾರಸ್ವಾಮಿ. ಈ ಬಣ್ಣದ ಲೋಕಕ್ಕೆ ಕಾಲಿಟ್ಟು ಎರಡು ದಶಕಗಳೇ ಕಳೆದರೂ, ರಾಧಿಕಾ ಅವರ ಬ್ಯೂಟಿ ಮಾತ್ರ ಒಂದು ಚೂರೂ ಮಾಸಿಲ್ಲ. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಅವರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೆಲವೊಂದು ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದಾರೆ. ನಟನೆಯಿಂದ ರಾಧಿಕಾ ಕುಮಾರಸ್ವಾಮಿ ದೂರ ಉಳಿದುಕೊಂಡಿದ್ದರೂ ಕೂಡ ಅವರ ಮೇಲೆ ಅಭಿಮಾನಿಗಳು ಹೊಂದಿರುವ ಪ್ರೀತಿ ಕಿಂಚಿತ್ತೂ ಕಡಿಮೆ ಆಗಿಲ್ಲ. ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಕೆಲವೊಂದು ವೀಡಿಯೋ ವೈರಲ್ ಆಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದೇ ಹೇಳಬಹುದು.

ರಾಧಿಕಾ ಕುಮಾರಸ್ವಾಮಿ ಅವರು ಸೂಪರ್ ಡ್ಯಾನ್ಸರ್. ಇದು ಎಲ್ಲರಿಗೂ ತಿಳಿದೇ ಇದೆ. ಅವರು ಡ್ಯಾನ್ಸ್ ಮಾಡಿರೋ ವೀಡಿಯೋ ಎಲ್ಲರೂ ನೋಡಿರಬಹುದು. ಸದ್ಯ ವೈರಲ್ ಆಗಿರುವ ಈ ವೀಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ಕಲಿಯುತ್ತಿರುವ ದೃಶ್ಯ ಇದೆ. ತುಂಬಾ ಚೆನ್ನಾಗಿಯೇ ಅವರು ಹೆಜ್ಜೆ ಹಾಕಿದ್ದಾರೆ. ಆದರೆ ಕೊನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್ ಮಾಡುತ್ತ ಜಾರಿ ಬಿದ್ದಿರುವ ಒಂದು ವಿಡಿಯೋ ಈಗ ವೈರಲ್ ಆಗಿದೆ. ಅವರ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ನೆಟ್ಟಿಗರ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿಗಳ ಫ್ಯಾನ್ ಪೇಜ್‌ಗಳಲ್ಲಿ ವಿಡಿಯೋವನ್ನು ಮಾತ್ರ ಹಂಚಿಕೊಳ್ಳಲಾಗಿದೆಯೇ ಹೊರತು ಹೆಚ್ಚಿನ ಮಾಹಿತಿ ನೀಡಿಲ್ಲ. ಇದು ಯಾವ ಸಂದರ್ಭದ ವಿಡಿಯೋ ಎಂಬುದು ಕೂಡ ತಿಳಿದಿಲ್ಲ.

https://www.instagram.com/reel/CgozTOcFxOx/?utm_source=ig_web_copy_link
Leave A Reply

Your email address will not be published.