ಪುತ್ತೂರು ದೇವಾಲಯದ ಮೂಲನಾಗನ ಸನ್ನಿಧಿಯಲ್ಲಿ ತಂಬಿಲ ಮತ್ತು ಪೂಜೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.2ರಂದು ನಾಗರ ಪಂಚಮಿ ಉತ್ಸವ ನಡೆದಿದ್ದು, ಸಂಪ್ರದಾಯದ ಪ್ರಕಾರ ದೇವಳದ ಮೂಲನಾಗ ಸನ್ನಿಧಿ ಮತ್ತು ವಾಸುಕೀ ನಾಗರಾಜ ಸನ್ನಿಧಿಯಲ್ಲಿ ಬೆಳಿಗ್ಗೆ ಯಿಂದ ಅಭಿಷೇಕಾದಿಗಳು ಜರುಗಿದೆ.
ಮೂಲನಾಗ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದ ಹಾಲಿನ ಮತ್ತು ಸೀಯಾಳ ಅಭಿಷೇಕ ನಡೆದಿದ್ದು, ನಂತರ ನಾಗತಂಬಿಲ ಸೇವೆ ನಡೆದಿದೆ. ಭಕ್ತರು ನಾಗತಂಬಿಲ ಸೇವೆಯನ್ನು ಭಯ ಭಕ್ತಿಯಿಂದ ನಾಗದೇವರಿಗೆ ಸಲ್ಲಿಸಿದ್ದಾರೆ. ವಾಸುಕಿ ನಾಗರಾಜ ಸನ್ನಿಧಿಯಲ್ಲೂ ಹಾಲಿನ ಮತ್ತು ಸೀಯಾಳಾಭಿಷೇಕ ಸಂಪನ್ನವಾಗಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ನಾಗತಂಬಿಲ ಸೇವೆ, ನಾಗಪೂಜೆ, ಪಂಚಾಮೃತಾಭಿಷೇಕ, ಸಂಜೆ ಸಾಮೂಹಿಕ ಆಶ್ಲೇಷ ಬಲಿ ನಡೆಯಲಿದೆ.