ಭಾರತೀಯ ಸ್ಪರ್ಧಿಗಳು ಬರ್ಮಿಂಗ್ಲಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುನ್ನಡೆಯುತ್ತಿದ್ದಾರೆ. ಭಾರತ ಈಗಾಗಲೇ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದೆ. ಪದಕಗಳ ಪಟ್ಟಿ ಗಮನಿಸುತ್ತಾ ಹೋದರೆ ಭಾರತ 6ನೇ ಸ್ಥಾನದಲ್ಲಿದೆ.
ಒಳ್ಳೆಯ ಸ್ಪರ್ಧೆ ನೀಡುತ್ತಿರು ಬೆನ್ನಲ್ಲೇ ಸೋಮವಾರದಂದು ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಿ ಅಪಘಾತಕ್ಕೀಡಾಗಿದ್ದಾರೆ. ಹೆಚ್ಚು ಹಾನಿ ಸಂಭವಿಸಿಲ್ಲ. ಮಹಿಳೆಯರ 10 ಕಿಮೀ ಸ್ಕಾಚ್ ರೇಸ್ ವೇಳೆ ಈ ಅವಘಡ ನಡೆದಿದೆ.
ಸ್ಪರ್ಧಿ ಮೀನಾಕ್ಷಿ ಅವರು ನಿಯಂತ್ರಣ ಕಳೆದುಕೊಂಡು ತಮ್ಮ ಸೈಕಲ್ ನಿಂದ ಬಿದ್ದಿದ್ದಾರೆ. ಇದೆ ವೇಳೆ ಅವರ ಹಿಂದೆ ಬರುತ್ತಿದ್ದ ನ್ಯೂಜಿಲ್ಯಾಂಡ್ ನ ಬ್ರೂಯಾನಿ ಬೋಥಾ ಅವರಿದ್ದ ಸೈಕಲ್ ನೇರವಾಗಿ ಮೀನಾಕ್ಷಿಯವರ ಮೇಲೆ ಹರಿದಿದೆ. ಬಳಿಕ ಬೋಥಾ ಕೂಡಾ ಕೆಳಗೆ ಬಿದ್ದಿದ್ದಾರೆ.
ಈ ಅವಘಡ ಸಂಭವಿಸುತ್ತಿದ್ದಂತೆ ತುರ್ತು ವೈದ್ಯಕೀಯ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿ ಅವರನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದೆ. ಈ ಅಪಘಾತದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
You must log in to post a comment.