ತೆಂಗು ಕೃಷಿಕರೇ ನಿಮಗೊಂದು ಸಿಹಿ ಸುದ್ದಿ | ತೆಂಗಿನ ಚಿಪ್ಪಿಗೆ ಬಂತು ಭಾರೀ ಬೇಡಿಕೆ| ಅಷ್ಟಕ್ಕೂ ಈ ದಿಢೀರ್ ಬೇಡಿಕೆಗೆ ಕಾರಣವಾದರೂ ಏನು ? ಇಲ್ಲಿದೆ ಉತ್ತರ

ಇತ್ತೀಚೆಗೆ ಕೇರಳದಲ್ಲಿ ತೆಂಗಿನಕಾಯಿ ಗೆರಟೆಗೆ ಭಾರೀ ಬೆಲೆ ಇದೆ. ಹೌದು. ಇದು ತೆಂಗು ಕೃಷಿಕರಿಗೆ ಭರ್ಜರಿ ಸಿಹಿ ಸುದ್ದಿ ಎಂದೇ ಹೇಳಬಹುದು. ಹೇಳಿ ಕೇಳಿ ಕೇರಳ ತೆಂಗಿನೆಣ್ಣೆ, ತೆಂಗಿನಮರ ಕ್ಕೆ ಫೇಮಸ್. ಅಂತಿಪ್ಪ ಈ ದೇವರನಾಡಲ್ಲಿ ತೆಂಗಿನ ತೋಟ, ಮನೆ ಪರಿಸರದಲ್ಲಿ ಹೇರಳವಾಗಿ ದೊರೆಯುವ ಗೆರಟೆಗೆ (ತೆಂಗಿನಕಾಯಿ ಚಿಪ್ಪು) ಈಗ ಭಾರೀ ಬೆಲೆ ಕಟ್ಟಲಾಗುತ್ತಿದೆ.

ಗುಜರಿ ವಸ್ತುಗಳನ್ನು ಕೇಳಿಕೊಂಡು ಮನೆ ಮನೆಗೆ ಬರುವವರು ಈಗ ಹೆಚ್ಚಾಗಿ ಕೇಳುವುದು ಗೆರಟೆಯನ್ನು. ಯಸ್, ಈ ಗೆರಟೆ ಈಗ ಉದ್ಯಮವಾಗಿ ಬೆಳೆದಿದೆ. ಹಾಗಾಗಿ ಗೆರಟೆಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಒಂದು ಕಿಲೋಗ್ರಾಂ ಗೆರಟೆಗೆ 12 ರೂ.ವರೆಗೆ ಬೆಲೆ ಲಭಿಸುತ್ತಿದೆ. ಇಷ್ಟೊಂದು ಬೇಡಿಕೆಯಿರುವ ಈ ಗೆರಟೆಯನ್ನು ಪ್ರಧಾನವಾಗಿ ಕೇರಳದಿಂದ ತಮಿಳುನಾಡಿಗೆ ಕಳುಹಿಸಲಾಗುತ್ತದೆ. ಪ್ರತಿ ಏಜೆನ್ಸಿಯಿಂದ ಒಂದೋ ಎರಡೋ ತಿಂಗಳಿಗೊಂದು ಬಾರಿ ಘನ ಲಾರಿಗಳಲ್ಲಿ ಗೆರಟೆಗಳನ್ನು ಹೇರಿಕೊಂಡು ತಮಿಳುನಾಡಿಗೆ ತಲುಪಿಸಲಾಗುತ್ತದೆ.

ತಮಿಳುನಾಡಿಗೆ ಯಾಕೆ ಕಳುಹಿಸಲಾಗುತ್ತದೆ ? ಗೆರಟೆಯಿಂದ ಇದ್ದಿಲನ್ನು ತಯಾರಿಸುವ 40 ಕಂಪನಿಗಳು ತಮಿಳುನಾಡಿನಲ್ಲಿ ಮಾತ್ರ ಇವೆ. ಈ ಗೆರಟೆಯ ಇದ್ದಿಲಿನಿಂದ ಕಾರ್ಬನ್ ಉತ್ಪಾದಿಸಲಾಗುತ್ತದೆ. ವಿಕಿರಣಗಳನ್ನು ಪ್ರತಿರೋಧಿಸಲು ಕಾರ್ಬನ್‌ಗೆ ಸಾಮರ್ಥ್ಯ ಇದೆ ಎಂಬುದು ಗೆರಟೆಯ ಬೇಡಿಕೆ ಹೆಚ್ಚಿಸಿದೆ. ನೀರು, ಸಕ್ಕರೆ ಮೊದಲಾದವುಗಳನ್ನು ಶುದ್ದೀಕರಿಸಲು ಹಾಗೂ ಸೌಂದರ್ಯವರ್ಧಕ ವಸ್ತುಗಳ ತಯಾರಿಗೆ, ಕರಕುಶಲ ವಸ್ತುಗಳ ಉತ್ಪಾದನೆಗೆ ಗೆರಟೆ ಹುಡಿ ಉಪಯೋಗಿಸುವುದು ಕೈಗಾರಿಕಾ ಸಾಧ್ಯತೆಯಾಗಿ ಮಾರ್ಪಾಡುಗೊಂಡಿದೆ.

ತಮಿಳುನಾಡಿಗಾಗಿ ಗೆರಟೆ ಸಂಗ್ರಹಿಸಿ ಹಸ್ತಾಂತರಿಸಲು ರಾಜ್ಯದ ವಿವಿಧೆಡೆ ಹಲವಾರು ಏಜೆನ್ಸಿಗಳಿದ್ದಾರೆ. ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲಿ ಕೂಡ ಗೆರಟೆಗೆ ಭಾರಿ ಬೇಡಿಕೆ ಇದೆ.

Leave A Reply

Your email address will not be published.