ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಉದ್ಯೋಗವಕಾಶ | ನೇರ ಸಂದರ್ಶನ ಆ.5

ಹೈದರಾಬಾದ್‌ನ ಸಿಎಸ್‌ಐಆರ್-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಈ ನೇಮಕಾತಿಯು ನೇರ ಸಂದರ್ಶನದ ಮೂಲಕ ನಡೆಯಲಿದೆ. ಈ ಉದ್ಯೋಗಾವಕಾಶದ ಬಗ್ಗೆಗಿನ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

 

ಹುದ್ದೆಗಳ ವಿವರಗಳು:

ಒಟ್ಟು ಹುದ್ದೆ : 07 ಹುದ್ದೆ
ಹುದ್ದೆ : ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ (01), ಪ್ರಾಜೆಕ್ಟ್ ಅಸೋಸಿಯೇಟ್-2 (02), ಪ್ರಾಜೆಕ್ಟ್ ಅಸೋಸಿಯೇಟ್-1 (03), ಪ್ರಾಜೆಕ್ಟ್ ಅಸಿಸ್ಟೆಂಟ್ (01)
ವಿದ್ಯಾರ್ಹತೆ :
ಅಭ್ಯರ್ಥಿಗಳು ಬಿ.ಟೆಕ್ (ಕೆಮಿಕಲ್ ಇಂಜಿನಿಯರಿಂಗ್/ಕೆಮಿಕಲ್/ಸಿವಿಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಸೇಫ್ಟಿ/ಫೈರ್ ಇಂಜಿನಿಯರಿಂಗ್/ಬಯೋಟೆಕ್ನಾಲಜಿ), ಡಿಪ್ಲೊಮಾ (ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ) ತೇರ್ಗಡೆಯಾಗಿರಬೇಕು.

ವೇತನ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳ ಆಧಾರದ ಮೇಲೆ ರೂ. 20,000 ರಿಂದ ರೂ. 40,000 ವೇತನವಾಗಿ ಪಾವತಿಸಲಾಗುತ್ತದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನದಲ್ಲಿ ತೋರಿದ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಂದರ್ಶನ ನಡೆಯುವ ದಿನಾಂಕ ಮತ್ತು ಸ್ಥಳ :
05-08-2022 ರಂದು ಮಧ್ಯಾಹ್ನ 1 ಗಂಟೆಯಿಂದ ಸಂದರ್ಶನ ನಡೆಯಲಿದೆ. ಸಂದರ್ಶನವನ್ನು ಉಪ್ಪಲ್ ರಸ್ತೆ, ಐಐಸಿಟಿ ಕಾಲೋನಿ, ತಾರ್ನಾಕ, ಹೈದರಾಬಾದ್​ನಲ್ಲಿ ನಡೆಸಲಾಗುತ್ತದೆ.

1 Comment
  1. testing@example.com says

    555

Leave A Reply

Your email address will not be published.