ಖ್ಯಾತ ಕನ್ನಡದ ಕಿರುತೆರೆ ನಟ ಚಂದನ್ ಗೆ ಕಪಾಳಮೋಕ್ಷ | ನಟ ಮಾಡಿದ ಕಿರಿಕ್ ಆದ್ರೂ ಏನು?

ಕನ್ನಡ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಎಲ್ಲರಿಗೂ ತಿಳಿದೇ ಇದೆ. ರಿಯಾಲಿಟಿ ಶೋ ಮೂಲಕ ತೆರೆಗೆ ಬಂದ ಈ ನಟ ನಂತರ ಹಿರಿತೆರೆಯಲ್ಲೂ ಮಿಂಚಿ ಅವಕಾಶ ಸಿಗದೆ ಈಗ ವಾಪಾಸು ಕಿರುತೆರೆಯಲ್ಲಿ ನಟನೆಗೆ ಬಂದಿದ್ದರು. ಮೊದಲಿಗೆ ಕನ್ನಡದಲ್ಲಿ ಮಾತ್ರ ನಟಿಸುತ್ತಿದ್ದ ಈ ನಟ, ಈಗ ತೆಲುಗು ಧಾರವಾಹಿಗಳಲ್ಲೂ ಮಿಂಚಿ ಹೆಸರು ಮಾಡಿದ್ದಾರೆ. ತೆಲುಗು ಧಾರಾವಾಹಿಗಳಲ್ಲೂ ನಟಿಸುತ್ತಾ ಆಂಧ್ರ ಪ್ರದೇಶ ತೆಲಂಗಾಣ ಜನರ ಮನ ಗೆದ್ದಿದ್ದ ಈ ನಟ ಈಗ ಕಿರಿಕ್ ಮಾಡಿಕೊಂಡಿದ್ದಾರೆ.

 

ತೆಲುಗು ಧಾರಾವಾಹಿಯೊಂದರ ಚಿತ್ರೀಕರಣದ ವೇಳೆ ಚಂದನ್ ಮೇಲೆ ಹಲ್ಲೆ ನಡೆಸಲಾಗಿದೆ. ತೆಲುಗಿನ ಜನಪ್ರಿಯ ಧಾರಾವಾಹಿ ಸಾವಿತ್ರಮ್ಮಗಾರು ಅಬ್ಬಾಯಿ ಶೂಟಿಂಗ್ ಸೆಟ್‌ನಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಹಲ್ಲೆ ನಡೆದಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ.

ಹೈದ್ರಾಬಾದ್‌ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ನಡೆಯುತ್ತ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಜನಮನ ಸೆಳೆದ ಈ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವೇ ಮುಖ್ಯ ಪಾತ್ರ ನಿರ್ವಹಿಸುತ್ತಾ ಇದ್ದರು. ಶೂಟಿಂಗ್ ವೇಳೆ ಅಲ್ಲಿನ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಧಾರಾವಾಹಿ ಸೆಟ್‌ನಲ್ಲಿ ಚಂದನ್ ಕುಮಾರ್ ಅವರೇ ಕ್ಯಾಮೆರಾ ಅಸಿಸ್ಟೆಂಟ್ ಮೇಲೆ ಮೊದಲು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಈ ವೇಳೆ ತಂತ್ರಜ್ಞರು ಮಾತಿಗೆ ಮಾತು ಬೆಳೆಸಿದ್ದು, ತಂತ್ರಜ್ಞರೊಬ್ಬರು ಚಂದನ್‌ಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಚಂದನ್ ಈ ಹಿಂದೆಯೂ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದೇ ಕ್ಯಾಮರಾಮೆನ್ ಅಸ್ಟಿಸ್ಟೆಂಟ್ ಜೊತೆ ಕಿತ್ತಾಡಿಕೊಂಡು, ಹೊಡೆದಿದ್ದರು ಎನ್ನಲಾಗುತ್ತಿದೆ. ಅದೇ ವಿಚಾರಕ್ಕೆ ಮತ್ತೆ ಗಲಾಟೆ ನಡೆದು ಚಂದನ್ ಮೇಲೆ ಹಲ್ಲೆ ನಡೆದಿದೆ ಅಂತ ಹೇಳಲಾಗುತ್ತಿದೆ. ಈ ಘಟನೆ ಹೈದ್ರಾಬಾದ್‌ನಲ್ಲಿ ಶೂಟಿಂಗ್ ವೇಳೆ ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ವೈರಲ್ ಆಗಿದೆ.

ಚಂದನ್ ಕಿರುತೆರೆ ಹಿರಿತೆರೆಯಲ್ಲಿ ಮಿಂಚುವ ಮೊದಲು ರಿಯಾಲಿಟಿ ಶೋ ನಲ್ಲಿ ಕೂಡಾ ಅಕುಲ್ ಬಾಲಾಜಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಅಷ್ಟು ಮಾತ್ರವಲ್ಲದೇ ಸಿನಿಮಾ ಸಂದರ್ಭದಲ್ಲಿ ಕೂಡಾ ಕಿರಿಕ್ ಮಾಡಿದ ಘಟನೆಗಳು ವರದಿಯಾಗಿದ್ದವು. ಈಗ ಇದಕ್ಕೆ ಇನ್ನೊಂದು ಸೇರ್ಪಡೆಯಾಗಿದೆ.

Leave A Reply

Your email address will not be published.