ಕುಕ್ಕೇ ಸುಬ್ರಹ್ಮಣ್ಯ: ಭೀಕರ ಮಳೆಗೆ ಮನೆ ಹಿಂಬದಿಯ ಗುಡ್ಡ ಕುಸಿತ | 2 ಮಕ್ಕಳು ಸೇರಿ ಮಣ್ಣಿನಡಿ ಸಿಲುಕಿದ ಮೂವರು
ಕುಕ್ಕೇ ಸುಬ್ರಹ್ಮಣ್ಯ: ಸುಳ್ಯ-ಕಡಬ ಉಭಯ ತಾಲೂಕುಗಳಲ್ಲಿ ಇಂದು ಸುರಿದ ಭೀಕರ ಮಳೆಗೆ ನಾಗ ಕ್ಷೇತ್ರ ಕುಕ್ಕೇ ಸುಬ್ರಮಣ್ಯ ಸಂಪೂರ್ಣ ಮುಳುಗಡೆಯಾಗಿದ್ದು, ಇಲ್ಲಿನ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿದ ಘಟನೆಯೊಂದು ಬೆಳಕಿಗೆ ಬಂದಿದೆ.
ವರುಣನ ಆರ್ಭಟಕ್ಕೆ ಕುಕ್ಕೆಯ ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿನ ಕುಶಾಲಪ್ಪ ಗೌಡ ಎಂಬವರ ಮನೆ ಹಿಂಬದಿಯ ಗುಡ್ಡ ಏಕಾಏಕಿ ಮನೆಯ ಮೇಲೆ ಜರಿದಿದ್ದು, ಪರಿಣಾಮ ಮನೆಯೊಳಗಿದ್ದ ಓರ್ವ ವೃದ್ಧೆ, ಮಕ್ಕಳು ಸಹಿತ ನಾಲ್ಕು ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ಸದ್ಯ ಶೋಧ ಕಾರ್ಯ ಮುಂದುವರಿದಿದ್ದು, ಸ್ಥಳಕ್ಕೆ ಪೊಲೀಸರು, ಸ್ಥಳೀಯಾಡಳಿತ ಅಧಿಕಾರಿಗಳು ಆಗಮಿಸಿದ್ದು,ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳಾದ ಶ್ರುತಿ (11) ಹಾಗೂ ಜ್ಞಾನ ಶ್ರೀ (6) ಅವರ ಮೃತದೇಹವನ್ನು ರಕ್ಷಣಾ ಕಾರ್ಯಚರಣೆ ಮೂಲಕ ಹೊರತೆಗೆಯಲಾಯಿತು.
M