ಪುತ್ರನ ಲಗ್ನಪತ್ರಿಕೆಯಲ್ಲಿ ಮೂಡಿ ಬಂದಿದೆ ರವಿಚಂದ್ರನ್ ಕಲಾಕೃತಿ | ವೈರಲ್ ಆಗಿರುವ ಕಾರ್ಡ್ ಬೆಲೆ ಎಷ್ಟು ಗೊತ್ತಾ?
ರಸಿಕರ ರಾಜ ಕ್ರೇಜಿ ಸ್ಟಾರ್’ ರವಿಚಂದ್ರನ್ ಮನೆಯಲ್ಲಿ ಈಗ ಮತ್ತೊಮ್ಮೆ ಮಂಗಳವಾದ್ಯ ಮೊಳಗಲಿದೆ. ಮೂರು ವರ್ಷದ ಹಿಂದೆ ಕ್ರೇಜಿ ಸ್ಟಾರ್ ಅವರ ಮನೆಯಲ್ಲಿ ಪುತ್ರಿ ಗೀತಾಂಜಲಿ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಮಗಳ ಮದುವೆ ನಂತರ ಈಗ ರವಿಚಂದ್ರನ್ ಅವರು ಮಗನ ಮದುವೆ ಮಾಡಲು ಸಜ್ಜಾಗಿದ್ದಾರೆ.
ಹೌದು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಆದಂತಹ ಮನೋರಂಜನ್ ಅವರು ಮುಂದಿನ ತಿಂಗಳು ಆಗಸ್ಟ್ 20 ಮತ್ತು 21ಕ್ಕೆ ಸಂಗೀತ ದೀಪಕ್ ಎಂಬ ಯುವತಿಯನ್ನು ಮದುವೆಯಾಗಲಿದ್ದಾರೆ. ಇವರ ಮದುವೆಗೆ ಈಗಾಗಲೇ ಅದ್ದೂರಿ ತಯಾರಿ ನಡೆಯುತ್ತಿದೆ.
ರವಿಚಂದ್ರ ಅದ್ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ, ಅಲ್ಲಿ ಸಕ್ಸಸ್ ಅನ್ನುವುದಕ್ಕಿಂತಲೂ ಡಿಫರೆಂಟ್ ಆಗಿ ಎದ್ದು ಕಾಣೋದರಲ್ಲಿ ಡೌಟ್ ಇರಲ್ಲ. ಹಾಗಾಗಿ ಅವರ ಫಿಲ್ಮ್ ಗೆ ಬೇರೇನೇ ಫ್ಯಾನ್ಸ್ ಇದ್ದಾರೆ. ಇಷ್ಟೆಲ್ಲ ಕ್ರಿಯೇಟಿವಿಟಿ ಇರೋ ರವಿಚಂದ್ರನ್, ಅಪ್ಪನ ಪಾತ್ರದಲ್ಲಿ ನಿಂತು ಮಗನ ಮದುವೆ ಬಗ್ಗೆ ಗ್ರಾಂಡ್ ಆಗಿ ಯೋಚಿಸದೆ ಇರಲು ಸಾಧ್ಯವೇ? ಚಾನ್ಸ್ ಯೇ ಇಲ್ಲ.
ಹೌದು. ರವಿಚಂದ್ರನ್ ಮಗ ಮನೋರಂಜನ್ ಅವರ ಮದುವೆಯನ್ನೂ ಅದ್ದೂರಿಯಾಗಿ ನೆರವೇರಿಸಲು ಸಿದ್ಧತೆ ನಡೆಸಿದ್ದು, ಆಮಂತ್ರಣ ಪತ್ರಿಕೆಯ ವಿನ್ಯಾಸವನ್ನು ಕೂಡ ಮಾಡಿದ್ದಾರೆ. ಈ ಮದುವೆಯ ಆಮಂತ್ರ ಪತ್ರದ ಡಿಸೈನ್ ಮತ್ತು ಇದರ ಬೆಲೆ ಕೇಳಿದರೆ ‘ಅಬ್ಬಾ’ ಅನ್ನದೆ ಇರಲು ಸಾಧ್ಯವಿಲ್ಲ. ಅಷ್ಟಕ್ಕೂ ಆಮಂತ್ರಣ ಪತ್ರ ಹೇಗಿದೆ? ಎಷ್ಟು ಬೆಲೆ ಎಂಬ ಕುತೂಹಲ ಇರೋರು ಮುಂದೆ ಓದಿ.
ಈ ಪತ್ರಿಕೆ ಮದುವೆ ಕಾರ್ಡ್ ತರ ಇರದೇ, ಒಂದು ಫಿಲ್ಮ್ ಪೋಸ್ಟರ್ ರೀತಿ ಇದೆ. ಕಾರ್ಡ್ ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ರಾರಾಜಿಸುತ್ತಿದ್ದಾರೆ. ಹೃದಯದ ಸಿಂಹಾಸನ ಇರುವ ವಿನ್ಯಾಸದ ಮೇಲೆ ರವಿಚಂದ್ರನ್ ಕುಳಿತಿರುವ ಫೋಟೋವನ್ನು ಕೆತ್ತಲಾಗಿದೆ.
ಸಿಂಹಾಸದನ ಮೇಲೆ ರವಿಚಂದ್ರನ್ ಕುಳಿತರೆ, ಹೃದಯದ ವಿನ್ಯಾಸದಲ್ಲಿ ಮಧುಮಗ-ಮಧಮಗಳ ಹೆಸರು ಮತ್ತು ಮದುವೆಯ ಬಗ್ಗೆ ಮಾಹಿತಿ ಇದೆ. ಈ ಪತ್ರಿಕೆಯ ಪ್ರಕಾರ ಆಗಸ್ಟ್ 20 ಮತ್ತು 21ರಂದು ಮದುವೆ ನಡೆಯಲಿದೆ. ಪತ್ರಿಕೆಯ ಕೆಳಭಾಗದಲ್ಲಿ ರವಿಚಂದ್ರನ್ ಅವರ ಧರ್ಮಪತ್ನಿ, ಸುಮತಿ ಹಾಗೂ ರವಿಚಂದ್ರನ್ ಎಂಬ ಹೆಸರನ್ನು ಕೂಡ ಪ್ರಕಟಿಸಲಾಗಿದೆ.
ಕೇವಲ ಒಂದು ಲಗ್ನ ಪತ್ರಿಕೆಯ ಬೆಲೆ ಬರೋಬ್ಬರಿ 3000. ಹೌದು ನಿಮಗೆ ಆಶ್ಚರ್ಯ ಅನಿಸಿದರೂ ಕೂಡ ಇದು ಸತ್ಯ. ಕೇವಲ ಲಗ್ನ ಪತ್ರಿಕೆಗೆ ಇಷ್ಟು ಖರ್ಚು ಮಾಡುತ್ತಿರುವ ರವಿಚಂದ್ರನ್, ಇನ್ನೂ ಮಗನ ಮದುವೆಯನ್ನು ಇನ್ನೆಷ್ಟು ಅದ್ದೂರಿಯಾಗಿ ಮಾಡಬಹುದು ಎಂಬುದು ಎಲ್ಲಾ ಅಭಿಮಾನಿಗಳಿಗೆ ಪ್ರಶ್ನೆಯಾಗಿಯೇ ಉಳಿದಿದೆ..
ಅಂದಹಾಗೆ, ಮನೋರಂಜನ್ ಅವರ ಕೈ ಹಿಡಿಯಲಿರುವ ಸಂಗೀತ ಅವರು ಮೂಲತಃ ವೈದ್ಯಕೀಯ ವೃತ್ತಿಯಲ್ಲಿ ಇದ್ದು, ಬೆಂಗಳೂರಿನ ವಿಲ್ಸನ್ ಗಾರ್ಡನ್ನ ಇವರ ಮೂಲ ನಿವಾಸವಾಗಿದೆ. ಈ ಮದುವೆ ಲವ್ ಅಥವಾ ಅರೆಂಜ್ ಆ ಎಂಬ ಗೊಂದಲದ ನಡುವೆ ಇರೋರಿಗೆ ಉತ್ತರ ಸಿಕ್ಕಿದ್ದು, ಇದೊಂದು ಪಕ್ಕ ಅರೇಂಜ್ ಮ್ಯಾರೇಜ್ ಆಗಿದೆ.