ಕಾ…ಕಾ… ಕಾಟಕ್ಕೆ ಬೇಸತ್ತ ಹಳ್ಳಿ ಮಹಿಳೆ…ಮನೆ ಹೊರಗೆ ಬಂದರೆ‌ ಸಾಕು ತಲೆಗೆ ಕುಕ್ಕೋ ಕಾಗೆ | ಅಷ್ಟಕ್ಕೂ ಈಕೆ ಮಾಡಿದ್ದಾದರೂ ಏನು ಗೊತ್ತೇ?

ನಮಗೆಲ್ಲ ಗೊತ್ತಿರುವ ಹಾಗೇ ಹಾವಿಗೆ ಮಾತ್ರ ದ್ವೇಷ ಇದೆ ಎಂದು. ಆದರೆ ಇತ್ತೀಚೆಗೆ ಕಾಣುವ ಬೆಳವಣಿಗೆಯಲ್ಲಿ ಹಾವು ಮಾತ್ರ ಅಲ್ಲಾ ಪ್ರಾಣಿ ಪಕ್ಷಿಗಳು ಮನುಷ್ಯನ ವಿರುದ್ಧ ತಿರುಗಿ ಬೀಳುತ್ತಿದೆ. ಹೌದು ಇಲ್ಲಿ ಈಗ ನಾವು ಹೇಳ ಹೊರಟಿರೋದು ಕಾಗೆಯ ದ್ವೇಷ.

ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆಯ ಎಸ್‌ಟಿ ಕಾಲೋನಿಯಲ್ಲಿ ಬಸಮ್ಮ ಎನ್ನುವ ಮಹಿಳೆಯ ಮೇಲೆ ಈ ಕಾಗೆಗಳ ದ್ವೇಷದ ಪ್ರಹಾರ ನಡೆಯುತ್ತಿದೆ. ಈ ಕಾಗೆಗಳ ಕಾಟಕ್ಕೆ ಸಾಕಾಗಿ ಹೋಗಿದ್ದಾರೆ. ಏಕೆಂದರೆ ಬಸಮ್ಮ ಎಲ್ಲೇ ಹೋದರೂ ಕಾಗೆಗಳು ಹಿಂಬಾಲಿಸಿಕೊಂಡು ಬರುತ್ತದೆ. ಸುಮಾರು 10 ದಿನಗಳಿಂದ ಕಾಗೆಗಳು ಬೆಂಬಿಡದೆ ಕಾಡುತ್ತಿದೆ. ಬಸಮ್ಮಳಿಗೆ ಜೀವನವೇ ಬೇಡ ಅನ್ನುವ ಮಟ್ಟಿಗೆ ಪರಿಸ್ಥಿತಿ ತಂದಿದೆ ಈ ಕಾಗೆಗಳು. ಕಾಗೆಗಳು ಈ ರೀತಿಯ ದ್ವೇಷ ಸಾಧಿಸುತ್ತಿರುವಿದಾದರೂ ಯಾಕೆ ಅಂತೀರಾ ? ಒಂದು ವಾರದ ಹಿಂದೆ ಬಸಮ್ಮ ಅವರ ಮನೆಯ ಮುಂದಿನ ಕಂಬದ ಮೇಲೆ ಕಾಗೆಯೊಂದು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿತ್ತು. ಇದನ್ನು ಗಮನಿಸಿದ ಅವರು ಸತ್ತ ಕಾಗೆಯನ್ನು ಮನೆ ಅಂಗಳದಲ್ಲಿ ಬಿಡದೆ ಬೇರೊಂದು ಕಡೆ ಹಾಕಿ ಬಂದಿದ್ದರು. ಅಂದಿನಿಂದ ಇಲ್ಲಿಯವರೆಗೂ ಕಾಗೆಗಳು ಬೆನ್ನು ಬಿಡದೆ ಉಪದ್ರ ನೀಡುತ್ತಲೇ ಇದೆ.

ಬಸಮ್ಮ ಮನೆಯಿಂದ ಹೊರ ಬಂದರೆ ಸಾಕು ಹಾರಿ ತಲೆಯ ಮೇಲೆ ಬಂದು ಕೂತು ಕುಕ್ಕುತ್ತವೆ. ಎಲ್ಲಾದರೂ ಹೋದರೆ ಹಿಂಬಾಲಿಸಿಕೊಂಡು ಹೋಗುತ್ತವೆ. ಇದರಿಂದ ಮನನೊಂದ ಬಸಮ್ಮ ಮನೆ ಬಿಟ್ಟು ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರಾದ ನಾವು ಕುರಿ, ಮೇಕೆ ಸಾಕಣಿಕೆ ಮಾಡುತ್ತಿದ್ದು, ಅವುಗಳ ಆರೈಕೆಗೆ ದಿನ ಬೆಳಗಾದರೆ ಹೊರ ಬರಬೇಕು. ಕೈಯಲ್ಲಿ ಕೋಲು ಹಿಡಿದು ಹೊರ ಬರುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ನಾನು ಪಕ್ಷಿಗಳನ್ನು ಕೊಲ್ಲುವ ಕಟುಕಿಯಲ್ಲ ಎಂದು ಬಸಮ್ಮ ಕಣ್ಣೀರು ಹಾಕುತ್ತಾ ತಮ್ಮ‌ ವೇದನೆ ಹೇಳುತ್ತಾರೆ. ಕಾಗೆಗಳ
ಕಾಟದಿಂದ ಮುಕ್ತಿ ಸಿಗದೆ ಪ್ರಯೋಜನವಾಗದೆ ಮಾನಸಿಕವಾಗಿ ಭಾವನಾತ್ಮಕವಾಗಿ ಮರುಗುತ್ತಿದ್ದಾರೆ. ಬಸಮ್ಮ ಕಾಗೆಗಳ ಕಾಟ ತಪ್ಪಿಸಿಕೊಳ್ಳಲು ಆಂಧ್ರದ ಗಡಿ ಭಾಗದಲ್ಲಿರುವ ಪಾವಗಡದ ಶನಿಮಹಾತ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.

‘ನಮ್ಮ ಮನೆಯ ಮುಂದೆ ಕರೆಂಟ್ ಕಂಬಗಳಿದ್ದು,ಆ ಕಂಬಕ್ಕೆ ತಾಗಿ ಕಾಗೆಗಳು ಕರೆಂಟ್ ಶಾಕ್‌ನಿಂದ ಸತ್ತು ಬಿದ್ದಿವೆ. ಸತ್ತ ಕಾಗೆಗಳನ್ನು ಅಲ್ಲಿಯೇ ಬಿಡದೆ ಬೇರೆ ಕಡೆಗೆ ಹೋಗಿ ನಾನೇ ಬಿಸಾಕಿ ಬರುತ್ತಿದೆ. ಅಲ್ಲಿಂದ ಬರುವ ವೇಳೆಗೆ ಆ ಕಾಗೆಯನ್ನು ನಾನೇ ಸಾಯಿಸಿದ್ದೇನೆ ಎಂದು ತಲೆಯ ಸುತ್ತ ಕಾಗೆಗಳು ಸುತ್ತುಗಟ್ಟಿ ಕುಕ್ಕಿದವು. ಎಲ್ಲಿ ಹೋದರೂ ಹಿಂಬಾಲಿಸುತ್ತಿವೆ. ಇದರಿಂದ ಮುಕ್ತಿ ಸಿಕ್ಕರೆ ಸಾಕು ಅನಿಸಿದೆ’ ಎಂದು ಬಸಮ್ಮ ಅಳಲು.

Leave A Reply