ಹುಡುಗಿಯರೇ ನಿಮಗೆ ಅಲ್ಲಿ ಮಚ್ಚೆ ಇದೆಯಾ ? ಹಾಗಾದರೆ ನೀವು ಅದೃಷ್ಟವಂತರು ಬಿಡಿ!!!

ದೇಹದ ವಿವಿಧ ಭಾಗಗಳಲ್ಲಿ ಹುಟ್ಟಿದಾಗಲೇ ಕೆಲವೊಂದು ಮಚ್ಚೆಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವೊಂದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅವು ಯಾವುವು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಕೆಲವು ಮಚ್ಚೆಗಳು ಹುಡುಗಿಯರ ದೇಹದಲ್ಲಿದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅವು ಯಾವುದೆಂದು ಈ ಕೆಳಗೆ ನೀಡಲಾಗಿದೆ.

ಕಿವಿಯಲ್ಲಿ ಮಚ್ಚೆ : ಸಾಮುದ್ರಶಾಸ್ತ್ರದ ಪ್ರಕಾರ, ಕಿವಿಯಲ್ಲಿ ಮಚ್ಚೆ ಇರುವ ಮಹಿಳೆಯರು ಅದೃಷ್ಟವಂತರಂತೆ. ಜೀವನದಲ್ಲಿ ಎಲ್ಲವನ್ನೂ ಪಡೆಯುವ ಇವರು ಎಲ್ಲರಿಗೂ ಸುಖದ ಜೀವನವನ್ನು ಕೊಡುತ್ತಾರೆ.

ಹೊಕ್ಕುಳ ಸುತ್ತ ಮಚ್ಚೆ : ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹುಡುಗಿಗೆ ಹೊಕ್ಕುಳ ಅಥವಾ ಹೊಕ್ಕುಳಿನ ಸುತ್ತಲೂ ಮಚ್ಚೆ ಅಥವಾ ನರೂಲಿ ಇದ್ದವರು, ಮಾತ್ರವಲ್ಲದೆ ಇಂತವರು ಇಡೀ ಕುಟುಂಬಕ್ಕೆ ಅದೃಷ್ಟಶಾಲಿ ಎಂದು ಹೇಳಲಾಗುತ್ತದೆ. ಇದಲ್ಲದೇ ಹೊಟ್ಟೆಯ ಎಡಭಾಗದಲ್ಲಿ ಹುಟ್ಟು ಮಚ್ಚೆ ಇದ್ದವರನ್ನು ಅದೃಷ್ಟವಂತರು ಜೊತೆಗೆ ಜೀವನದಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ ಅಷ್ಟು ಮಾತ್ರವಲ್ಲದೇ ಜೀವನದಲ್ಲಿ ಬಯಸಿದ ಎಲ್ಲವನ್ನೂ ಅವರು ಸುಲಭವಾಗಿ ಪಡೆಯುತ್ತಾರೆ.

ತ್ರಿಕೋನ ಮಚ್ಚೆ : ಇದು ಪ್ರತಿಯೊಬ್ಬರ ಪಾದದ ಕೆಳಗೆ ಇರುವುದಿಲ್ಲ. ಈ ರೀತಿಯ ಚಿಹ್ನೆ ಹುಡುಗಿಯರ ಕಾಲುಗಳ ಮೇಲೆ ತ್ರಿಕೋನ ಚಿಹ್ನೆ ಇದ್ದರೆ, ಅವರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಈ ರೀತಿ ಮಚ್ಚೆ ಇರುವ ಹುಡುಗಿಯರು ಕುಟುಂಬದಲ್ಲಿನ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾರೆ. ಇವರು ತುಂಬಾ ಬುದ್ಧಿವಂತರು, ಸ್ನೇಹಪರಳು ಮತ್ತು ಯಾವಾಗಲೂ ಇತರರಿಗೆ ಸಹಾಯ ಮಾಡುತ್ತಾರೆ.

ಪಾದದಲ್ಲಿ : ಹುಡುಗಿಯರ ಪಾದದ ಅಡಿಭಾಗದಲ್ಲಿ ಶಂಖ, ಕಮಲ ಅಥವಾ ಚಕ್ರದ ಗುರುತು ಹೊಂದಿರುವವರು, ಮದುವೆಯಾದ ನಂತರ ತಮ್ಮ ಸಂಗಾತಿಗೆ ಅದೃಷ್ಟವನ್ನು ಉನ್ನತ ಹುದ್ದೆಯನ್ನು ಪಡೆಯುವ ಮೂಲಕ ಉತ್ತಮ ಸ್ಥಾನಮಾನ ಗಳಿಸುತ್ತಾರೆ. ಹಾಗೆಯೇ ಅವಳ ಸಂಗಾತಿಯೂ ಸಹ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ.

ಪಾದದ ಅಡಿಯಲ್ಲಿ ಶಂಖದ ಆಕಾರದ ಮಚ್ಚೆ : ಪಾದದ ಅಡಿಯಲ್ಲಿ ಶಂಖದ ಆಕಾರದ ಮಚ್ಚೆ ಇರುವವರು ತಮ್ಮ ಕುಟುಂಬಕ್ಕೆ ಅದೃಷ್ಟಶಾಲಿಯಾಗಿರುತ್ತಾರೆ. ಜೊತೆಗೆ ಜೀವನದಲ್ಲಿ ದೊಡ್ಡ ಸ್ಥಾನಮಾನವನ್ನು ಪಡೆಯುತ್ತಾರೆ. ಇಂತವರಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಎಂದೂ ಕೊರತೆಯಿರುವುದಿಲ್ಲ.

ಜಿಂಕೆಯ ಕಣ್ಣು : ಕೆಲವು ಹುಡುಗಿಯರ ಕಣ್ಣುಗಳು ಜಿಂಕೆಯಂತಿರುತ್ತವೆ ಮತ್ತು ನೋಡಲು ಆಕರ್ಷಣೀಯವಾಗಿರುತ್ತದೆ. ಇವರನ್ನು ಸಾಮುದ್ರಿಕಾ ಶಾಸ್ತ್ರದಲ್ಲಿ ಅದೃಷ್ಟವಂತರು ಎಂದು ಹೇಳಲಾಗುತ್ತದೆ, ಇದರ ಪ್ರಕಾರ ಇವರುಗಳೆಲ್ಲಾ, ಜೀವನದಲ್ಲಿ ಅವರು ಬಯಸಿದ ಎಲ್ಲವನ್ನೂ ಪಡೆಯುತ್ತಾರೆ. ಸಂತೋಷ ಇವರ ಕಾಲಬುಡದಲ್ಲಿ ಇರುತ್ತದೆ.

ತುಟಿಯ ಮೇಲೆ ಮಚ್ಚೆ : ಹೆಣ್ಣುಮಕ್ಕಳಿಗೆ ತುಟಿಯ ಮೇಲೆ ಮಚ್ಚೆ ಇದ್ದರೆ ಹಸಿವು ಹೆಚ್ಚಂತೆ. ಇವರು ದೊಡ್ಡವರಾದ ಮೇಲೆ ಅದೃಷ್ಟವಂತರಾಗುತ್ತಾರೆ ಎನ್ನಲಾಗಿದೆ. ಇನ್ನು ಗಂಡಸರಿಗೆ ಎರಡು ಹುಬ್ಬುಗಳ ನಡುವೆ ಮಚ್ಚೆ ಇದ್ದರೆ ಒಳ್ಳೆಯದು, ಅದರಲ್ಲೂ ಬಲಗಣ್ಣಿನ ಮೇಲೆ ಕಪ್ಪು ಮಚ್ಚೆ ಇದ್ದರೆ ಧನವಂತರಾಗುತ್ತಾರಂತೆ.

ಎದೆಯಲ್ಲಿರುವ ಮಚ್ಚೆ: ಕೆಲವರಿಗೆ ಎದೆಯ ಮೇಲ್ಭಾಗದಲ್ಲಿ ಮಚ್ಚೆ ಇರುತ್ತದೆ. ಆದರೆ ಎದೆಯ ಎಡಭಾಗದಲ್ಲಿ ಮಚ್ಚೆ ಇದ್ದವರಿಗೆ ಹೃದಯ ಸಂಬಂಧಿ ರೋಗಗಳು ಬಾಧಿಸುವ ಸಾಧ್ಯತೆ ಇರುತ್ತಂತೆ. ಅಷ್ಟು ಮಾತ್ರವಲ್ಲದೆ ಇವರು ಕಾಮಸಕ್ತರಾಗಿರುತ್ತಾರೆ. ಇನ್ನು ಬಲಭಾಗದಲ್ಲಿದ್ದರೆ ಅಂಥವರು ಶ್ರೀಮಂತರಾಗಿರುತ್ತಾರೆ.

ಇನ್ನು ಉಳಿದಂತೆ, ಮೂಗಿನ ಬಲ ಭಾಗಕ್ಕೆ ಮಚ್ಚೆ ಇದ್ದರೆ ಧನ ಸಂಪತ್ತು ಹಾಗು ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದವರು ಪರಿಶ್ರಮಿಗಳು ಹಾಗು ಸಫಲತೆಯನ್ನು ಅನುಭವಿಸುತ್ತಾರೆ ಎಂದು ತಿಳಿದು ಬಂದಿದೆ.

ಪಾದದ ಮೇಲೆ ಸಣ್ಣದಾಗಿ ಕಪ್ಪು ಬೊಟ್ಟು ಇದ್ರೆ ಆ ವ್ಯಕ್ತಿಯು ಸದಾ ಪ್ರಯಾಣ ಮಾಡೋಕೆ ಇಷ್ಟ ಪಡ್ತಾನಂತೆ. ಆಗಾಗ ಪ್ರವಾಸ ಅಂತ ಸುತ್ತುತ್ತಾರೆ.

ನಿಮಗೆ ಏನಾದರು ಅಂಗೈ ಮೇಲೆ ಮಚ್ಚೆ ಇದ್ದರೆ, ಇದು ನೀವ್ ಮುಟ್ಟಿದ್ದೆಲ್ಲ ಬಂಗಾರ ಆಗುವ ಅದೃಷ್ಟದ ಸಂಕೇತ ಅಂತೆ. ಹಾಗೆನೆ ಕೈಗೆ ಸಂಬಂಧ ಪಟ್ಟಿರೋ ಯಾವುದೊ ಪ್ರತಿಭೆ, ನಿಪುಣತೆ ನಿಮ್ಮಲ್ಲಿದೆ ಅಂತ ತೋರಿಸುತ್ತದೆ ಅಂತೆ.

Leave A Reply