ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ : ದಾಖಲೆ ಸಹಿತ ಚಿನ್ನ ಗೆದ್ದ ಮೀರಾಬಾಯಿ ಚಾನು

ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು 88 ಕೆಜಿ ಲಿಫ್ಟ್ ಎತ್ತುವುದರೊಂದಿಗೆ ಚಿನ್ನದ ಪದಕ ಗಳಿಸಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಹೌದು, ಮೀರಾಬಾಯಿ ಚಾನು ಮಹಿಳೆಯರ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ಭಾರತಕ್ಕೆ ಒಂದೇ ದಿನದಲ್ಲಿ ಮೂರು ಪದಕಗಳು ಬಂದಿವೆ. ಅದು ಕೂಡಾ ವೇಟ್ ಲಿಫ್ಟಿಂಗ್ನಲ್ಲೇ ಮೂರು ಪದಕಗಳನ್ನು ಭಾರತ ಗಳಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅಂದ ಹಾಗೇ, ಕಾಮನ್ ವೆಲ್ತ್ ಕ್ರೀಡಾಕೂಟದ 61 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕನ್ನಡಿಗ ಪಿ ಗುರುರಾಜ ಕಂಚಿನ ಪದಕ ಜಯಿಸಿದ್ದು, ಹಾಗೂ ಪುರುಷರ 55 ಕೆಜಿ ವಿಭಾಗದಲ್ಲಿ ಭಾರತದ ವೇಟ್ ಲಿಪ್ಟರ್ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದು, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟು ಉತ್ತಮ ಶುಭಾರಂಭ ನೀಡಿದ್ದಾರೆ.

ಸಂಕೇತ್ ಮಹಾದೇವ್ ಸರ್ಗರ್

ಇದಕ್ಕೂ ಮೊದಲು 55 ಕೆಜಿ ವಿಭಾಗದ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ 248 ಕೆಜಿ ಭಾರ ಎತ್ತುವ ಮೂಲಕ 21 ವರ್ಷದ ಸಂಕೇತ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಮೊದಲ ಸ್ಥಾನದಲ್ಲಿದ್ದ ಸಂಕೇತ್‌ ನಂತರ ಗಾಯಗೊಂಡಿದ್ದರಿಂದ ಎರಡನೇ ಸುತ್ತಿನಲ್ಲಿ ಹೆಚ್ಚು ಭಾರ ಎತ್ತಲು ಸಾಧ್ಯವಾಗದೆ ಇದ್ದಿದ್ದೂ ಚಿನ್ನದ ಪದಕ ಕೈತಪ್ಪಲು ಕಾರಣವಾಯಿತು.

ಪಿ.ಗುರುರಾಜ

ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ 61 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಭಾರತ ಇಂದು ಎರಡನೇ ಪದಕ ಜಯಿಸಿದೆ. ಪುರುಷರ 61 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆ.ಜಿ. ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸಿದರು. ಈ ಮೊದಲು 2018ರಲ್ಲಿ ನಡೆದ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ ಪೂಜಾರಿ ಬೆಳ್ಳಿ ಪದಕ ಜಯಿಸಿದ್ದರು.

ಗುರುರಾಜ್ ಪೂಜಾರಿ ಸ್ನಾಚ್ ನಲ್ಲಿ ಮೊದಲ ಪ್ರಯತ್ನದಲ್ಲಿ 115 ಕೆ.ಜಿ ಭಾರ ಎತ್ತಿದ್ದರು. ಎರಡನೇ ಪ್ರಯತ್ನದಲ್ಲಿ 118 ಕೆಜಿ ಭಾರ ಎತ್ತಿದರು. ಆದರೆ ಮೂರನೆ ಯತ್ನದಲ್ಲಿ 120 ಕೆ.ಜಿ. ಭಾರ ಎತ್ತಲು ವಿಫಲವಾದರು. ಇನ್ನು ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಗುರುರಾಜ ಪೂಜಾರಿ ಮೊದಲ ಪ್ರಯತ್ನದಲ್ಲಿ 144, ಎರಡನೇ ಪ್ರಯತ್ನದಲ್ಲಿ 148 ಹಾಗೂ ಮೂರನೇ ಪ್ರಯತ್ನದಲ್ಲಿ 151 ಕೆಜಿ ಭಾರ ಎತ್ತುವ ಕಂಚಿನ ಪದಕ ಜಯಿಸಿದರು.

error: Content is protected !!
Scroll to Top
%d bloggers like this: