ಪುನೀತ್ ರಾಜ್ ಕುಮಾರ್ ದೇವರ ಪಾತ್ರದಲ್ಲಿ ನಟಿಸಿರುವ ‘ಲಕ್ಕಿ ಮ್ಯಾನ್’ ಸಿನಿಮಾ ಸೆ.2 ಕ್ಕೆ ರಿಲೀಸ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಲಕ್ಕಿಮ್ಯಾನ್ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಅಪ್ಪುನನ್ನು ಮತ್ತೊಮ್ಮೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪುನೀತ್ ನಿಧನಕ್ಕೂ ಮೊದಲು ನಟಿಸಿದ್ದ ಕೆಲವು ರಿಲೀಸ್ ಆಗದ ಸಿನಿಮಾಗಳು ಇದೀಗ ಬಿಡುಗಡೆಯಾಗುತ್ತಿವೆ. ಅದರಲ್ಲಿ ಲಕ್ಕಿ ಮ್ಯಾನ್ ಸಿನಿಮಾ ಕೂಡ ಒಂದು. ಲಕ್ಕಿ ಮ್ಯಾನ್ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. ಮುಂಚಿತವಾಗಿ ಸಿನಿಮಾತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಅಪ್ಪುನೆ ಹೈಟೆಲ್. ಪ್ರಭುದೇವ ಸಹೋದರ ‘ಚಿತ್ರ’ ಖ್ಯಾತಿಯ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರವು ಆಗಸ್ಟ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲು ಹೇಳಲಾಗಿತ್ತು. ಮೂಲಗಳ ಪ್ರಕಾರ, ಸೆ.02ರಂದು ‘ಲಕ್ಕಿ ಮ್ಯಾನ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅಂದಹಾಗೆ ಲಕ್ಕಿ ಮ್ಯಾನ್ ನಲ್ಲಿ ನಟಿ ಡಾರ್ಲಿಂಗ್ ಕೃಷ್ಣ ಮತ್ತು 777 ಚಾರ್ಲಿ ಖ್ಯಾತಿಯ ನಟಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’, ಅ. 28ಕ್ಕೆ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಈಗ ಪುನೀತ್ ಅಭಿನಯದ ಇನ್ನೊಂದು ಚಿತ್ರದ ಬಿಡುಗಡೆ ‘ಲಕ್ಕಿ ಮ್ಯಾನ್’ ಪಕ್ಕಾ ಆಗಿದೆ. ‘ಲಕ್ಕಿ ಮ್ಯಾನ್’, ತಮಿಳಿನ ‘ಓ ಮೈ ಕಡುವುಳೇ’ ಚಿತ್ರದ ರೀಮೇಕ್. ಈ ಚಿತ್ರದಲ್ಲಿ ಪುನೀತ್ ಅವರಿಗೆ ಒಂದು ಹಾಡು ಸಹ ಇದ್ದು, ಪ್ರಭುದೇವ ಜತೆಗೆ ಪುನೀತ್ ಹೆಜ್ಜೆ ಹಾಕಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಹೇಳಿರುವ ಡೈಲಾಗ್ ವೈರಲ್ ಆಗಿದೆ. ‘ನಿನ್ನ ಲೈಫ್‌ನಲ್ಲಿ ಆಗಿರುವ ಮಿಸ್ಟೇಕ್‌ಗಳನ್ನು ಸರಿಮಾಡಿಕೊಳ್ಳಲು ನಿನಗೆ ಸೆಕೆಂಡ್ ಚಾನ್ಸ್ ಕೊಡ್ತೀನಿ’ ಎಂದು ಹೇಳಿರುವ ಡೈಲಾಗ್ ಅಭಿಮಾನಿಗಳ ಹೃದಯ ಗೆದ್ದಿದೆ. ಲಕ್ಕಿ ಮ್ಯಾನ್ ಟೀಸರ್ ರಿಲೀಸ್ ಆಗುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಹೆಸರ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಅಭಿಮಾನಿಗಳು ಲಕ್ಕಿಮ್ಯಾನ್ ಟೀಸರ್ ಶೇರ್ ಮಾಡಿ ದೇವರು ತನ್ನದೇ ಸ್ಟೈಲ್‌ನಲ್ಲಿ ಬರ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನಿಜಕ್ಕೂ ದೇವರು ಬಂದಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

error: Content is protected !!
Scroll to Top
%d bloggers like this: