ಸಮಾಧಿ ಮೇಲೆ ಬೃಹತ್ ಆಕಾರದ “ಶಿಶ್ನ” ನಿರ್ಮಿಸಿದ ಕುಟಂಬಸ್ಥರು | ಅಜ್ಜಿಯ ವಿಚಿತ್ರ ಆಸೆ ಈಡೇರಿಸಿದ ಮನೆಮಂದಿ

ಎಷ್ಟೋ ಜನರಿಗೆ ಎಷ್ಟೋ ಆಸೆಗಳಿರುತ್ತದೆ. ಏನೇನೋ ಸಾಧಿಸಬೇಕು ಹೀಗೆ…ಬೆಳೆತಾನೇ ಹೋಗುತ್ತೆ ಪಟ್ಟಿ. ಆದರೆ ಕೆಲವರು ಸಾಯುವ ಮೊದಲು ಕೆಲವೊಂದು ಆಸೆಗಳನ್ನು ಹೇಳುತ್ತಾರೆ. ಹಾಗಾಗಿ ಕುಟುಂಬದ ಮಂದಿಯೆಲ್ಲಾ ಅದನ್ನು ಈಡೇರಿಸೋಕೆ ಶತಪ್ರಯತ್ನ ಮಾಡುತ್ತಾರೆ. ಅಂತಹುದೇ ಒಂದು ಆಸೆ ಇಲ್ಲೊಂದು ಅಜ್ಜಿಗೆ ಆಗಿತ್ತು. ಆದರೆ ಈ ಅಜ್ಜಿಗೆ ಆಗಿದ್ದು, ಅಂತಿಂಥ ಆಸೆಯಲ್ಲ. ಈ ಅಜ್ಜಿಗೆ ತನ್ನ ಸಮಾಧಿ ಮೇಲೆ ಐದೂವರೆ ಅಡಿ ಎತ್ತರದ ಶಿಶ್ನದ ಪ್ರತಿಮೆ ನಿರ್ಮಿಸಲು ತನ್ನ ಮನೆ ಮಂದಿಗೆ ಹೇಳಿದ್ದಾಳೆ.

ಮನೆ ಮಂದಿ ಈ ವಿಚಿತ್ರ ಆಸೆಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಆಕೆಯ ನಿಧನದ ನಂತರ ಆಕೆಯ ಈ ಆಸೆಯನ್ನೆಲ್ಲಾ ಆಕೆಯ ಮನೆ ಮಂದಿ ಈಡೇರಿಸಿದ್ದಾರೆ.

ಹೌದು, ಮೆಕ್ಸಿಕೋದಲ್ಲಿ ವೃದ್ಧೆಯೊಬ್ಬಳ ಕೊನೆಯ ಆಸೆಯಂತೆ ಸಮಾಧಿ ಮೇಲೆ ಐದೂವರೆ ಅಡಿ ಎತ್ತರದ ಶಿಶ್ನದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕ್ಯಾಟರಿನಾ ಒರ್ಡುನಾ ಪೆರೆಜ್ ಅವರ ಕುಟುಂಬ ಅಜ್ಜಿಯ ಆಸೆಯನ್ನು ಈಡೇರಿಸಿದೆ. ಪ್ರೀತಿ ಮತ್ತು ಜೀವನದ ಸಂತೋಷವನ್ನು ಗುರುತಿಸಿ ಸ್ಮಾರಕ ನಿರ್ಮಿಸಿದೆ.

ಮೊಮ್ಮಗ ಅಲ್ವಾರೋ ಮೋಟಾ ಲಿಮಾನ್ ಈ ಮಾತನ್ನು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ತನ್ನ ಸಮಾಧಿಯ ಮೇಲೆ ಶಿಶ್ನದ ಪ್ರತಿಮೆಯನ್ನು ನಿರ್ಮಿಸಬೇಕೆಂದು ಆಗಾಗ ಹೇಳುತ್ತಿದ್ದರು. ಆದರೆ, ಆಕೆಯ ಮರಣ ಸಮೀಪಿಸುವವರೆಗೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿಧನದ ನಂತರ ಕುಟುಂಬದವರೆಲ್ಲರೂ ಸೇರಿ ಅಜ್ಜಿಯ ಕನಸನ್ನು ನನಸಾಗಿಸಲು ನಿರ್ಧರಿಸಿದೆವು ಎಂದು ಮೋಟಾ ಲಿಮಾನ್ ಹೇಳಿದ್ದಾರೆ.

ಪ್ರತಿಮೆಯನ್ನು ನಿರ್ಮಿಸಿದ ಇಂಜಿನಿಯರ್ ಇಸಿದ್ರೂ ಲಾವೊಗ್ನೆಟ್ ಅವರು, ಮೊದಲಿಗೆ ಇದು ತಮಾಷೆ ಎಂದು ನಾನು ಭಾವಿಸಿದ್ದೆ. ಈ ರೀತಿಯ ಶಿಲ್ಪ ಅಥವಾ ಸ್ಮಾರಕಗಳನ್ನು ನೋಡುವುದು ಸಾಮಾನ್ಯವಲ್ಲ. ಆದರೆ, ಐದೂವರೆ ಅಡಿ ಎತ್ತರದ 600 ಪೌಂಡ್ ನ ಪ್ರತಿಮೆ ನಿರ್ಮಿಸಿ ಜುಲೈ 23ರಂದು ಅನಾವರಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.

Leave A Reply