ದೇಶದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿ!
ನವದೆಹಲಿ: ದೇಶದಲ್ಲಿ ಕಂಡು ಬಂದ ಮೊದಲ ಮಂಕಿಪಾಕ್ಸ್ ಸೊಂಕೀತ ವ್ಯಕ್ತಿ ಗುಣಮುಖರಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯನ್ನು ಪಡೆದಿದೆ.
ಹೌದು. ಭಾರತಕ್ಕೆ ದುಬೈನಿಂದ ಬಂದಿದ್ದಂತ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ದೃಢಪಟ್ಟಿತ್ತು.ಈ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ದೇಶದಲ್ಲಿ ಮೊದಲ ಬಲಿ ಪಡೆದಿದೆ ಎಂದು ಕೇರಳ ಆರೋಗ್ಯ ಸಚಿವರು ದೃಢಪಡಿಸಿದ್ದಾರೆ.
ದುಂಬೈನಿಂದ ವಾಪಾಸ್ ಆಗಿದ್ದ 22 ವರ್ಷದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಸೋಂಕು ತಗುಲಿರೋದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ವ್ಯಕ್ತಿ ಇಂದು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚುತ್ತಲ್ಲೇ ಇದ್ದು, ಅದೆಷ್ಟೇ ಕ್ರಮ ತೆಗೆದುಕೊಂಡರೂ ಇಳಿಕೆ ಆಗದೇ ಇರುವುದು ದೇಶದ ಜನತೆಗೆ ಆತಂಕ ತಂದೊಡ್ಡಿದ್ದೆ. ಅದರ ನಡುವೆ ಮೊದಲ ಬಲಿ ಮತ್ತಷ್ಟು ಭಯಕ್ಕೆ ಎಡವು ಮಾಡಿಕೊಟ್ಟಿದೆ.