ಅನ್ಯ ಯುವಕನ ಸಹವಾಸ ಮಾಡಿದ ಝಂಬಾ ಟ್ರೈನರ್ | ಒಳ್ಳೆಯ ಹೆಂಡತಿ, ಮಗುವಿಗೆ ಒಳ್ಳೆಯ ತಾಯಿಯಾಗದ ಈಕೆ, ನಂತರ ಆಗಿದ್ದೇನು?

ಆಕೆ ಯಾವುದೇ ಸಿನಿಮಾ ಹೀರೋಯಿನ್ ಗಿಂತ ಕಮ್ಮಿ ಇಲ್ಲ. ಅಷ್ಟು ಮಾತ್ರವಲ್ಲ ಆಕೆ ಜಿಮ್ ಟ್ರೇನರ್ ಕೂಡಾ. ಆಕೆಗೆ ಮದುವೆಯಾಗಿ ಮುದ್ದಾದ ಮಗುವಿದ್ದಾಕೆ. ಸುಂದರ ಸಂಸಾರದ ಹೊಣೆ ಹೊತ್ತವಳು. ಸಂಸಾರ ಅಷ್ಟೇ ಚೆನ್ನಾಗಿಯೇ ಇತ್ತು. ಅದೇನೋ ಹೇಳ್ತಾರಲ್ಲ ಸ್ವರ್ಗಕ್ಕೆ ಕಿಚ್ಚು ಹಚ್ಚೋದು ಅಂತ, ಆ ರೀತಿಯ ಸಂಸಾರ ಈಕೆಯದ್ದು. ಇಷ್ಟರಲ್ಲೇ ಸಂತೋಷವಾಗಿರಬೇಕಿತ್ತು ಈಕೆ.
ಆದರೆ ಏನೋ ಮಾಡಲು ಹೋಗಿ ಏನೋ ಮಾಡಿದೆ ಅನ್ನೋತರದ ಒಂದು ಕೆಲಸ ಮಾಡಿದ್ದಾಳೆ ಈಕೆ. ಏನು ಗೊತ್ತೇ ? ಮದುವೆಯಾಗಿದ್ದರೂ ಮತ್ತೊಬ್ಬನ ಪ್ರೇಮಪಾಶಕ್ಕೆ ಒಳಗಾಗಿದ್ದಳು. ಈ ಪ್ರಿಯಕರನಿಗೋಸ್ಕರ ಗಂಡನಿಗೆ ವಿಚ್ಛೇದನ ಕೂಡಾ ನೀಡಿದ್ದಳು. ಆದರೆ ಪ್ರಿಯತಮನ ಮದುವೆಯಾಗುವ ಯೋಜನೆಯಲ್ಲಿದ್ದ ಆಕೆ ಈಗ ನೇಣಿಗೆ ಶರಣಾಗಿದ್ದಾಳೆ.

ಝುಂಬಾ ಡ್ಯಾನ್ಸ್ ಕ್ಲಾಸ್ ಹೇಳಿ ಕೊಡ್ತಾ ಇದ್ದ ಈ ಚೆಲುವೆಯ ಹೆಸರು ನಾಜೀಯಾ ಭಾನು. ಬಳ್ಳಾರಿಯ ಕೂಲ್ ಕಾರ್ನರ್ ಬಳಿಯ ನ್ಯೂ ಎನರ್ಜಿ ಫಿಟ್ಟೆಸ್ ಸೆಂಟರ್ ನಲ್ಲಿ ಝುಂಬಾ ಡಾನ್ಸ್ ಕೋಚ್ ಆಗಿದ್ದ ಈಕೆ ಬಳ್ಳಾರಿಯ ಬಹುತೇಕ ಮಹಿಳೆಯರಿಗೆ ಝುಂಬಾ ಡ್ಯಾನ್ಸ್ ತರಬೇತಿ ನೀಡುತ್ತಿದ್ದಳು.

ಈಕೆ ಕಳೆದ ಮೂರು ದಿನದ ಹಿಂದೆ ತರಬೇತಿ ನೀಡುತ್ತಿದ್ದ ಝುಂಬಾ ಸೆಂಟರ್‌ನಲ್ಲಿಯೇ ನೇಣು ಬಿಗಿದುಕೊಂಡು ನಾಜೀಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಡೆತ್ ನೋಟ್ ಬರೆದಿಟ್ಟಿರುವ ಈಕೆ, ನಾನು ನನ್ನ ಮಗುವಿಗೆ ತಾಯಿಯೂ ಆಗಲಿಲ್ಲ. ಒಳ್ಳೆಯ ಮಗಳು ಆಗಲಿಲ್ಲ. ಐ ಆಮ್ ಮ್ಯಾಡ್ ಅಂತಾ ಡೆತ್ ನೋಟ್ ನಲ್ಲಿ ನೋವು ತೋಡಿಕೊಂಡಿದ್ದಾಳೆ. ಪ್ರಿಯಕರನ ಮದುವೆಯಾಗೋ ಯೋಚನೆಯಲ್ಲಿದ್ದ ನಾಜಿಯಾ ಸಾವಿಗೆ ಶರಣಾಗಿದ್ದು ಏಕೆ ಎಂಬ ಬಗ್ಗೆ ಬಳ್ಳಾರಿ ಎಸ್ಪಿ ಸೈದುಲು ಅದಾವತ್ ವಿವರಿಸಿದ್ದಾರೆ.

ಫೇಸ್ಬುಕ್ ಫ್ರೆಂಡ್ ಆಗಿದ್ದ ಮಂಜುನಾಥ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಮಗು, ಗಂಡನನ್ನು ಬಿಟ್ಟು ಕಳೆದ 2-3 ವರ್ಷಗಳಿಂದ ಈ ಮಂಜುನಾಥನ ಜೊತೆ ಓಡಾಡುತ್ತಿದ್ದ ನಾಜೀಯಾ ಮತ್ತು ಮಂಜುನಾಥ ಮದುವೆಯಾಗೋ ಫ್ಲ್ಯಾನ್ ಮಾಡಿದ್ದರು ಕೂಡಾ. ಆದರೆ ಒಂದು ವೈಮನಸ್ಸು ಪ್ರೇಮಿಗಳಿಬ್ಬರ ನಡುವೆ ನಡೆದಿದೆ. ಈ ಸಣ್ಣ ಬಿರುಕು ನಾಜಿಯಾ ನೇಣಿಗೆ ಕೊರಳೊಡ್ಡುವಂತೆ ಮಾಡಿದೆ.

ಈ ಪ್ರೇಮಿಗಳಿಬ್ಬರ ಮಧ್ಯೆ ನಡೆದ ಸಣ್ಣ ಜಗಳ, ಅನಂತರ ಪ್ರಿಯಕರ ಮಂಜುನಾಥ ನಾಜಿಯಾಳ ಪೋನ್ ರಿಸೀವ್ ಮಾಡದೇ ಇದ್ದಿದ್ದಕ್ಕೆ ಝುಂಬಾ ಸೆಂಟರ್‌ನಲ್ಲೇ ನೇಣಿಗೆ ಶರಣಾಗಿದ್ದಾಳೆ. ನಾಜಿಯಾ ಸಾವನಪ್ಪಿದ್ದ ಸುದ್ದಿ ತಿಳಿಯುತ್ತಿದ್ದಂತೆ ಕಳೆದ 3 ದಿನಗಳಿಂದ ಮಂಕಾಗಿದ್ದ ಪ್ರೇಮಿ ಮಂಜುನಾಥ ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ್ದಾನೆ. ತನ್ನಿಂದಾಗಿಯೇ ಅವಳ ಪ್ರಾಣ ಹೋಯ್ತು. ಅವಳ ಸಾವಿಗೆ ನಾನೇ ಕಾರಣ ಎಂದು ಕೊರಗಿದ ಪ್ರೇಮಿ ಮಂಜುನಾಥ 6 ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವನಪ್ಪಿದ್ದಾನೆ. ನನ್ನ ಮಗ ನನ್ನ ಬಿಟ್ಟು ಹೋದ ಅಂತಾ ಮಂಜುನಾಥ ತಾಯಿ ಶಂಕ್ರಮ್ಮ ಕಣ್ಣೀರಿಡುತ್ತಿರೋ ದೃಶ್ಯ ಮಾತ್ರ ಎಲ್ಲರ ಮನಸ್ಸನ್ನು ಕರಗುವಂತೆ ಮಾಡುತ್ತಿತ್ತು.

Leave A Reply