ಅತ್ತೆ ಜೊತೆ ಅಕ್ರಮ ಸಂಬಂಧ | ಸ್ನೇಹಿತ ಮಾಡಿದ ಮೋಸ, ನಡೆದೇ ಹೋಯ್ತು ಭಯಾನಕ ಕೃತ್ಯ
ಸ್ನೇಹಿತನೋರ್ವನ ಅಕ್ರಮ ಸಂಬಂಧಕ್ಕೆ ಕುಪಿತಗೊಂಡ ಇನ್ನೋರ್ವ ಸ್ನೇಹಿತ ಬರ್ಬರವಾಗಿ ಕೊಚ್ಚಿ ಕೊಂದ ಘಟನೆಯೊಂದು ನಡೆದಿದೆ. ಈ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ನಡೆದಿದೆ.
ಹೌದು. ಅತ್ತೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ. ರವಿ ( 28 ವರ್ಷ) ಎಂಬಾತನೆ ಸ್ನೇಹಿತನಿಂದಲೇ ಹತನಾಗಿದ್ದು, ಸ್ನೇಹಿತ ಶರತ್ ರವಿಯ ಕುತ್ತಿಗೆ ಕೂಯ್ದು ಭೀಕರ ಕೊಲೆ ಮಾಡಿದ್ದಾನೆ.
ಜುಲೈ 27ರ ರಾತ್ರಿ 8:30ರ ಸಮಯದಲ್ಲಿ ಬೆಳಗೊಳ ಗ್ರಾಮದ ಸವಿತಾ ವೈನ್ ಸ್ಟೋರ್ ಬಳಿ ಈ ಘಟನೆ ನಡೆದಿದೆ. ಬಾರ್ ಮುಂಭಾಗ ನಿಂತಿದ್ದ ರವಿಯನ್ನು ಮಾತನಾಡಿಸುವ ನೆಪದಲ್ಲಿ ಬಂದ ಶರತ್ ರವಿ ಹಿಂಭಾಗ ತೆರಳಿ ಮೊದಲಿಗೆ ಕತ್ತು ಕೂಯ್ದಿದ್ದಾನೆ. ನಂತರ ಕೆಳಗೆ ಬಿದ್ದ ರವಿ ತಲೆ ಭಾಗಕ್ಕೆ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ಸ್ಥಳೀಯರು ಹಿಡಿಯಲು ಬಂದಾಗ, ಅವರಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಕೊಲೆಯ ಭಯಾನಕ ದೃಶ್ಯಗಳು ಬಾರ್‌ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಘಟನೆ ವಿವರ : ರವಿ ಮತ್ತು ಶರತ್ ಇಬ್ಬರು ಆತ್ಮೀಯ ಸ್ನೇಹಿತರು. ಜವಾಬ್ದಾರಿ ಹೊತ್ತು ಹಗಲಿರುಳು ದುಡಿಯುತ್ತಿದ್ದ ರವಿ. ಹಗಲಿನಲ್ಲಿ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಶಾಲಾ ಮಕ್ಕಳನ್ನು ಡ್ರಾಪ್ ಪಿಕಪ್ ಮಾಡಿ ಸಂಜೆ ಬೆಳಗೊಳ ಗ್ರಾಮದಲ್ಲಿರುವ ಬಾರ್‌ನಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದ. 10 ತಿಂಗಳ ಹಿಂದೆ ಸ್ನೇಹಿತ ಶರತ್‌ಗೆ, ಕೊಟ್ಟಷ್ಟು ಬಾಡಿಗೆ ಕೊಡು ಅಂತ ಹೇಳಿ ತನ್ನ ಮನೆಯನ್ನೇ ಬಾಡಿಗೆ ಕೊಟ್ಟಿದ್ದ. ಶರತ್ ತನ್ನ ಅತ್ತೆ ಮಾವನ ಜೊತೆಯಲ್ಲಿ ಬಂದಿದ್ದು, ರವಿ ನೀಡಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದನು.
ರವಿ ಬಾರ್ ಕೆಲಸ ಮಾಡುತ್ತಿದ್ದರೆ, ಆ ಬಾರ್ ಮುಂಭಾಗ ಕಬಾಬ್ ಅಂಗಡಿ ನಡೆಸುತ್ತಾ ಶರತ್ ಬದುಕು ಸಾಗಿಸುತ್ತಿದ್ದ. ಆದರೆ ದಿನ ಕಳೆದಂತೆ ರವಿ ಶರತ್ ಅತ್ತೆ ಜೊತೆ ಸ್ನೇಹ ಸಂಬಂಧ ಬೆಳೆಸಿದ್ದ. ಆಕೆ ಜೊತೆ ಲವ್ವಡವ್ವಿ ಶುರುವಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಅವರ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಬಾರ್‌ನಲ್ಲಿ ಕೆಲಸ ಮುಗಿಸಿ ಶರತ್ ಮನೆಯಲ್ಲಿ ರವಿ ದಿನನಿತ್ಯ ಪಾರ್ಟಿ ಮಾಡ್ತಿದ್ದ. ಆದರೆ ಶರತ್ ರವಿಯನ್ನು ನಂಬಿದ್ದ. ಶರತ್ ಗೆ ಆತ ಮನೆಗೆ ಬರ್ತಿರೋದು ತನ್ನ ಅತ್ತೆಗಾಗಿ ಅನ್ನೋದು ತಿಳಿದಿರಲಿಲ್ಲ. ರವಿಯ ಪಲ್ಲಂಗದಾಟ ಇತ್ತೀಚೆಗೆ ಬಯಲಾಗಿದೆ. ತನ್ನ ಅತ್ತೆ ಜೊತೆಗೆ ಮಂಚವೇರುತ್ತಿದ್ದ ವಿಷಯ ಶರತ್‌ಗೆ ತಿಳಿದಿತ್ತು. ಈ ವಿಚಾರವಾಗಿ ಗಲಾಟೆ ಕೂಡ ಮಾಡಿದ್ದ. ಆದರೆ ಮಾತುಕೇಳದ ಸ್ನೇಹಿತ ರವಿ ತನ್ನ ಚಾಳಿ ಮುಂದುವರೆಸಿದ್ದನು.
ಜುಲೈ 27ರ ಮಧ್ಯಾಹ್ನ ತನ್ನ ಅತ್ತೆ ಜೊತೆ ರವಿ ಜಗಳವಾಡಿದ್ದನು. ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಶರತ್ ಇದೇ ನೆಪಮಾಡಿಕೊಂಡು ಈ ಬಾರಿ ಸ್ನೇಹಿತನನ್ನು ಮುಗಿಸುವ ಪ್ಲಾನ್ ಮಾಡಿದ್ದ. ರಾತ್ರಿ ವೇಳೆ ಬಾರ್ ಬಳಿ ರವಿ ಇರುವುದನ್ನು ತಿಳಿದಿದ್ದ ಶರತ್ ಮಚ್ಚು ಹಿಡಿದು ಕೊಲೆ ಮಾಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಆರ್‌ಸ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿದ್ದ ಹಂತಕ ಶರತ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.