ಯುವತಿಯ ಒಂದು ಫೋಟೋ ಕದ್ದು 19 ಲಕ್ಷ ಎಗರಿಸಿದ ಖತರ್ನಾಕ್!

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ಸ್ಟಾಗ್ರಾಮ್ ಗಳಲ್ಲಿ ಫೋಟೋ ಅಪ್ಲೋಡ್ ಮಾಡುವುದರಿಂದ ಹಿಡಿದು ಮಕ್ಕಳಿಗೆ ಬರುವ ಲೈಕುಗಳೂ ಟ್ರೆಂಡ್ ಆಗಿ ಹೋಗಿದೆ. ಆದರೆ ಇದೇ ಟ್ರೆಂಡನ್ನು ಸದುಪಯೋಗಪಡಿಸಿಕೊಂಡು ಇರುವ ಖತರನಾಕ ಗಳು ಹಣ ಲೂಟಿ ಮಾಡುತ್ತಿದ್ದಾರೆ.

 

ಹೌದು. ಇಂತಹವೊಂದು ಪ್ರಕರಣಗಳು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದೇ ಯುವತಿಯ ಪೋಟೋ ಬಳಸಿಕೊಂಡು ಕಿರಾತಕರು 19 ಲಕ್ಷ ಎಗರಿಸಿದ್ದಾನೆ. ಇದೀಗ ಪೋಟೊಗಳನ್ನೇ ಬಳಸಿಕೊಂಡು ಹಣ ಮಾಡುವ ಖದೀಮನ ಸ್ಟೋರಿಗೆ ಬೆಳಗಾವಿ ಸಿಇಎನ್ ಪೊಲೀಸರು ಫುಲ್ ಸ್ಟಾಪ್ ಇಟ್ಟಿದ್ದು, ಕಾರ್ಯಾಚರಣೆ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಮಾಡಿ ಹಣ ಪೀಕುತ್ತಿದ್ದ ಯುವಕನ ಬಂಧಿಸಿದ್ದಾರೆ.

ಸ್ನೇಹಾ.ಎಂ ಹೆಸರಿನಲ್ಲಿ ಫೇಕ್ ಐಡಿ ಮಾಡಿದ್ದ ಮಹಾಂತೇಶ್ ಮುಡಸೆ ಬಂಧಿತ ಆರೋಪಿ. ಈತ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್ ಗ್ರಾಮದ ನಿವಾಸಿಯಾಗಿದ್ದಾನೆ. ಅಲ್ಲದೇ ಮಹಾಂತೇಶ್ ಮೂಡಸೆ ಪಿಎಸ್‌ಐ ದೈಹಿಕ ಪರೀಕ್ಷೆ ಕೂಡ ಪಾಸ್ ಆಗಿದ್ದನು.‌ ಧಾರವಾಡದಲ್ಲಿದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಹಾಂತೇಶ್, ಯುವತಿ ಹೆಸರಲ್ಲಿ ಹಣ ವಸೂಲಿ ಮಾಡಿ ಗೋವಾಕ್ಕೆ ತೆರಳಿ ಎಂಜಾಯ್ ಮಾಡುತ್ತಿದ್ದ.

ಬೆಳಗಾವಿ ನಗರದ ಯುವತಿ ಪೋಟೊ ಬಳಸಿ ಸ್ನೇಹಾ ಹೆಸರು ಹಾಕಿ ಫೇಕ್ ಅಕೌಂಟ್ ಮಾಡಿದ್ದ ಮಹಾಂತೇಶ್, ಕಳೆದ ಮೂರು ವರ್ಷದ ಹಿಂದೆ ಫೇಕ್ ಐಡಿ ಮಾಡಿ 19 ಲಕ್ಷ ವಸೂಲಿ ಮಾಡಿದ್ದಾನೆ. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಯುವಕರೊಂದಿಗೆ ಸ್ನೇಹ ಮಾಡಿಕೊಂಡು ಯುವಕರಿಗೆ ತಾನೂ ಸ್ನೇಹಾ ಅಂತಾ ನಂಬಿಸಿ ಅವರ ನಂಬರ್ ಪಡೆಯುತ್ತಿದ್ದ ಮಹಾಂತೇಶ್. ಹೀಗೆ ನಂಬರ್ ಪಡೆದು ನಂತರ ಪೋನ್ ನಲ್ಲಿ ಮಾತನಾಡದೇ ಬರೀ ಚಾಟ್ ಮಾಡುತ್ತಿದ್ದ. ಈ ವೇಳೆ ಕೆಲವು ಪೋಟೋಗಳನ್ನ ವಾಟ್ಸಪ್ ಮಾಡುತಿದ್ದನು. ಯುವತಿ ಅಂತಾ ನಂಬಿದ ಕೆಲವರಿಗೆ ಪಂಗನಾಮ ಹಾಕಿದ್ದಾನೆ.

ಹಣದ ಅವಶ್ಯಕತೆ ಇದೆ ಅಂತಾ ಹತ್ತು, ಇಪ್ಪತ್ತು, ಐವತ್ತು ಸಾವಿರವರೆಗೂ ಹಣ ಹಾಕಿಸಿಕೊಂಡು ನಂಬರ್ ಬ್ಲಾಕ್ ಮಾಡುತ್ತಿದ್ದ. ಹೀಗೆ ಯುವತಿ ಪೋಟೋ ಹಾಕಿ ಯುವತಿ ಹೆಸರಲ್ಲಿ ಮಾಡಿದ್ದ ಅಕೌಂಟ್‌ಗೆ ಹದಿನೈದು ಸಾವಿರ ಪಾಲೋವರ್ಸ್ ಇದ್ದರು.

ಬಳಿಕ ದುಬೈನಲ್ಲಿ ಸೆಟ್ಲ್ ಆಗಿದದ್ದ ಹುಡುಗಿಯ ಪೋಟೋ ಮಿಸ್‌ ಯೂಸ್ ಆಗಿದ್ದನ್ನ ಕಂಡು ಶಾಕ್ ಆಗಿದ್ದಾಳೆ. ಖುದ್ದು ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲಿಟ್ ಮಾಡುವಂತೆ ಮನವಿ ಮಾಡಿದ್ದಾರೆ‌. ಇಷ್ಟಾದರೂ ಆತ ಕೇಳದ ಹಿನ್ನೆಲೆ ಜು. 4ರಂದು ಬೆಳಗಾವಿಗೆ ಆಗಮಿಸಿ ದೂರು ಸಲ್ಲಿಸಿದ್ದರು. ನಕಲಿ ಖಾತೆಯಿಂದ ಯುವತಿಯ ಕುಟುಂಬದಲ್ಲಿ ಜಗಳವಾಗಿತ್ತು. ಬೇಸತ್ತು ಯುವತಿ‌ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಇದೀಗ ಯುವತಿಯ ದೂರಿನ ಮೇರೆಗೆ ಗೋವಾದಲ್ಲಿ ಮಸ್ತ್ ಮಜಾ ಮಾಡುತ್ತಿದ್ದವನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.