ಪುತ್ತೂರು ಉದ್ವಿಗ್ನ | ಪ್ರವೀಣ್ ನೆಟ್ಟಾರ್ ಮರ್ಡರ್ ಹಿನ್ನೆಲೆಯಲ್ಲಿ ಬಸ್ ಗೆ ಕಲ್ಲು

ಪುತ್ತೂರು ಬೊಳುವಾರಿನಲ್ಲಿ ಬಸ್‌‌ಗೆ ಕಲ್ಲೆಸೆತದ ಬಗ್ಗೆ ವರದಿಯಾಗಿದೆ.

ಮಂಗಳೂರಿಗೆ ಹೋಗುತ್ತಿದ್ದ ಬಸ್ ಗೆ ಬೊಳುವಾರಿನಲ್ಲಿ ಜು.27 ರ ಬೆಳಿಗ್ಗೆ ಕಲ್ಲೆಸೆಯಲಾಗಿದೆ. ಕಲ್ಲೆಸೆದ ಪರಿಣಾಮ ಬಸ್ ನ ಎದುರಿನ ಗಾಜು ಹುಡಿಯಾಗಿದೆ.

ಬಿಜೆಪಿ ಯುವ ಪ್ರವೀಣ್ ನೆಟ್ಟಾರ್ ಮರ್ಡರ್ ಆದ ನಂತರ ಪುತ್ತೂರು ಸುಳ್ಯ ಉದ್ವಿಗ್ನಗೊಂಡಿದೆ. ಪರಿಸ್ಥಿತಿಯ ಮುನ್ಸೂಚನೆ ಇರುವ ಆಡಳಿತ ವ್ಯವಸ್ಥೆ ನಿನ್ನೆ ರಾತ್ರಿಯಿಂದಲೇ ಸೆಕ್ಷನ್ 144 ಜಾರಿಗೊಳಿಸಿದೆ. ಕೋಮು ಸೂಕ್ಷ್ಮ ಪ್ರದೇಶ ಆದ ಕಾರಣ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಅದರ ಮಧ್ಯೆಯೂ ಬಸ್ ಗೆ ಕಲ್ಲು ತೂರಿ ಅಮಾಯಕನ ಕೊಲೆಗೆ ಆಕ್ರೋಶ ಹೊರಹಾಕಲಾಗಿದೆ.

ಇಂದು ಬೆಳಿಗ್ಗೆ ಎಂಎಲ್ ಎ ಮತ್ತು ಎಂಪಿ ಬೆಳ್ಳಾರೆ ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.