ಈಗ ಸಂಸ್ಕಾರದ ನಂತರ ಸಂಘಪರಿವಾರದಿಂದ 50 ಲಕ್ಷ ಘೋಷಣೆ|ಬಿಜೆಪಿಗೆ ಒಂದೊಂದೇ ಬೀಳುತ್ತಿರುವ ರಾಜೀನಾಮೆ|ಕೊನೆಯಲ್ಲಿ ಉಳಿಯುವುದು ಮಾತ್ರ ನೋವು…ಅದು ನಿರಂತರ

ಸುಳ್ಯ: ಬೆಳ್ಳಾರೆಯಲ್ಲಿ ಜು.26ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು (34) ರವರ ಕುಟುಂಬಕ್ಕೆ ಸಂಘ ಪರಿವಾರದ ವತಿಯಿಂದ 50 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಕರ್ನಾಟಕ ದಕ್ಷಿಣ ಪ್ರಾಂತ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸೇವಾ ಪ್ರಮುಖ್ ನಾ. ಸೀತಾರಾಮ ರವರು ಘೋಷಿಸಿದ್ದಾರೆ.

ನೆರವು ನೀಡುವಂತೆ ಮನವಿ :

ಈಗಾಗಲೇ ಹಿಂದೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ನೀಡುವಂತೆ ಒತ್ತಾಯಿಸಿದ್ದರೂ ಕೂಡಾ ಸರಕಾರವಾಗಲೀ, ಜನಪ್ರತಿನಿಧಿಗಳಾಗಲೀ ಈವರೆಗೆ ಯಾವುದೇ ರೀತಿಯ ಆರ್ಥಿಕ ನೆರವು ಘೋಷಿಸಿಲ್ಲ. ಈ ನಿಟ್ಟಿನಲ್ಲಿ ಪ್ರವೀಣ್ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.

50ಲಕ್ಷ ಪರಿಹಾರ: ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದ ಪ್ರವೀಣ್ ಕುಟುಂಬಕ್ಕೆ ರಾ.ಸ್ವಸೇ ಸಂಘದಿಂದ 50ಲಕ್ಷ ಪರಿಹಾರ ನೀಡುವುದಾಗಿ ಪ್ರಮುಖರಾದ ನ.ಸೀತಾರಾಮ ಹೇಳಿದ್ದಾರೆ. ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿರುವ ಅವರು ಈ ವಿಷಯ ತಿಳಿಸಿದ್ದಾರೆ.

Leave A Reply