ಮಗಳು ಅಳಿಯನನ್ನು ಬರ್ಬರವಾಗಿ ಕೊಚ್ಚಿ ಕೊಂದ ಅಪ್ಪಾ!

Share the Article

ಅಪ್ಪನ ಒಪ್ಪಿಗೆ ಇಲ್ಲದೆಯೇ ಸಪ್ತಪದಿ ತುಳಿದು ಮದುವೆ ಮಾಡಿಕೊಂಡ ಮಗಳು ಮತ್ತು ಅಳಿಯನನ್ನು ತಂದೆಯೊಬ್ಬ ಕತ್ತಿಯಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ವೀರಪಟ್ಟಿಯ ಕೊವಿಲ್ಪಟ್ಟಿ ಎಂಬಲ್ಲಿ ನಡೆದಿದೆ.

ತಂದೆ ಮುತ್ತುಕುಟ್ಟಿ ಎಂಬುವವರು ಮಗಳು ರೇಷ್ಮಾ (20) ಹಾಗೂ ಅಳಿಯ ಮನಿಕರಾಜ್(26)‌ ನನ್ನು ಕೊಲೆ ಮಾಡಿದ್ದಾರೆ.

ರೇಷ್ಮಾ ಮತ್ತು ಮನಿಕರಾಜ್ ಆಳವಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ, ಇವರ ಪ್ರೀತಿಗೆ ರೇಷ್ಮಾಳ ತಂದೆ ವಿಲನ್ ಆಗಿದ್ದರು. ಹೀಗಾಗಿ, ತಂದೆ ಮುತ್ತು ಕುಟ್ಟಿ ತೀವ್ರ ವಿರೋಧ ವ್ಯಕ್ಯಪಡಿಸಿದ್ದರು. ಇದರ ನಡುವೆಯೂ ರೇಷ್ಮಾ ಹಾಗೂ ಮನಿಕರಾಜ್ ಕೆಲ ದಿನಗಳ ಹಿಂದೆ ಮದುವೆಯಾಗಿ, ಕಳೆದ ಎರಡು ದಿನದ ಹಿಂದೆ ಊರಿಗೆ ಆಗಮಿಸಿದ್ದರು.

ಬಳಿಕ ಪಂಚಾಯತ್‌ ನ ಮಾತುಕತೆ ಮೂಲಕ ದಂಪತಿಗೆ ಗ್ರಾಮದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಯಿತು. ಆದರೂ ತನ್ನ ವಿರೋಧದ ನಡುವೆಯೂ ಮದುವೆ ಆದ ಮಗಳ ಮೇಲೆ ತಂದೆಗೆ ಇನ್ನಿಲ್ಲದ ಸಿಟ್ಟಿತ್ತು. ಹೀಗಾಗಿ, ಸೋಮವಾರ ಸಂಜೆ ಇದೇ ಸಿಟ್ಟಿನಲ್ಲಿ ಮನೆಯಲ್ಲಿ ಮಗಳು ಮತ್ತು ಅಳಿಯ ಇಬ್ಬರೇ ಇದ್ದ ಸಂದರ್ಭದಲ್ಲಿ ಮುತ್ತುಕಟ್ಟಿ ಇಬ್ಬರ ಮೇಲೆ ಹಲ್ಲೆ ಮಾಡಿ, ಬಳಿಕ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿ ಆಗಿದ್ದಾನೆ.

ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಮುತ್ತು ಕುಟ್ಟಿಯನ್ನು ಬಂಧಿಸಿದ್ದಾರೆ. ಪ್ರೀತಿಗಾಗಿ ತಂದೆಯನ್ನೇ ಎದುರಾಕಿಕೊಂಡ ಮಗಳು, ಸಾವಿನ ಕದ ತಟ್ಟುವಂತೆ ಆಗಿದೆ..

Leave A Reply