ಒಂಟಿ ಮಹಿಳೆಯರೇ ಎಚ್ಚರ | ತಲೆ ಒಡೆದು, ಹೊಟ್ಟೆ ಹರಿದು…ಕೊಲೆ ಮಾಡುವ ಈ ಗ್ಯಾಂಗ್ ನ ಟಾರ್ಗೆಟ್ ಕೇವಲ ಒಂಟಿ ಮಹಿಳೆಯರು

ಒಂಟಿ ಮಹಿಳೆಯರೇ ನೀವು ಖಂಡಿತ ಇದನ್ನು ಓದಬೇಕು. ಏಕೆಂದರೆ ಒಂಟಿ ಮಹಿಳೆಯರನ್ನು, ಅಥವಾ ದನಕರು ಮೇಯಿಸುತ್ತ ಹೊಲಕ್ಕೆ ಒಬ್ಬರೇ ಹೋಗುವವರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡುವ ಗ್ಯಾಂಗ್ ಒಂದು ಹುಟ್ಟಿದೆ. ಹೌದು ಈ ಈ ಗ್ಯಾಂಗ್ ಯಾವುದೇ ದಂಡುಪಾಳ್ಯ ಗ್ಯಾಂಗ್ ಗಿಂತ ಕಡಿಮೆ ಇಲ್ಲ. ಅಷ್ಟೊಂದು ಪೈಶಾಚಿಕವಾಗಿ ಹೆಣ್ಣು ಮಕ್ಕಳ ಕೊಲೆ ಮಾಡಿತ್ತಿದೆ ಈ ಗ್ಯಾಂಗ್.

ಹೆಣ್ಣುಮಕ್ಕಳು ತಾಳಿ, ಬೆಂಡೋಲೆ, ಮೂಗುತಿಯನ್ನು ಕೂಡಾ ಧರಿಸೊಕೊಂಡು ಹೋಗದ ಹಾಗೆ ಆಗಿದೆ ಎಂದೇ ಹೇಳಬಹುದು. ಅಂದರೆ ಕಾಲ ಕೆಟ್ಟಿದೆ ಎಂದೃ ಹೇಳಬಹುದು.

ಹೌದು ಇದಕ್ಕೆ ಸಾಕ್ಷಿ ಎನ್ನುವಂತೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಕಳೆದ ಎರಡು ತಿಂಗಳಿನಲ್ಲಿ ಇಬ್ಬರು ಮಹಿಳೆಯರನ್ನು ಅಪಹರಿಸಿ ಕೊಲೆ ಮಾಡಿ ಅವರ ಮೈಮೇಲೆ ಇದ್ದ ಬಂಗಾರದ ಆಭರಣ ಕದ್ದು ಅವರ ಶವವನ್ನು ಸುಟ್ಟು ಹಾಕಿದ ಪ್ರಕರಣವನ್ನು ಧಾರವಾಡ ಜಿಲ್ಲೆಯ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೇಧಿಸಿದ್ದಾರೆ. ಇಂತಹ ಪೈಶಾಚಿಕ ಕೃತ್ಯ ವೆಸಗಿದ ಆರು ಆರೋಪಿಗಳನ್ನು ಈಗ ಪೊಲೀಸರು ಒದ್ದು ಒಳಗಾಕಿದ್ದಾರೆ.

ಮೋಜು ಮಸ್ತಿಯ ಒಂದೇ ಉದ್ದೇಶಕ್ಕಾಗಿ ಹುಬ್ಬಳ್ಳಿಯ ಈಶ್ವರ ನಗರ ನಿವಾಸಿ ಇಂದಿರಾಬಾಯಿ ಪವಾರ, (73) ಎಂಬ ಮಹಿಳೆಯನ್ನು ಮೇ 11 ರಂದು ಅಪಹರಿಸಿ ಕಾಡನಕೊಪ್ಪ ಬಳಿ ಸುಟ್ಟು ಹಾಕಿದ್ದರು. ನಂತರ ಜು.2 ರಂದು ಇದೇ ಮಾದರಿಯಲ್ಲೇ ಈಶ್ವರ ನಗರ ಇನ್ನೋರ್ವ ನಿವಾಸಿ ಮಹಾದೇವಿ ನೀಲಣ್ಣವರ(52) ಎಂಬ ಮಹಿಳೆಯನ್ನು ಕೂಡ ಭೀಕರವಾಗಿ ಕೊಲೆ ಮಾಡಿ ಕಲಘಟಗಿ ತಾಲೂಕಿನ ತಂಬೂರು ಕ್ರಾಸ್ ಬಳಿ ಸುಟ್ಟು ಹಾಕಿದ್ದರು. ಇದು ನಿಜಕ್ಕೂ ಜನರಲ್ಲಿ ತೀವ್ರ ಆತಂಕವನ್ನುಂಟು ಮಾಡಿತ್ತು.

ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಸಾಗರ ಮೂಲದ ದೇವರಾಜ ಮೊಗಲೇರ, ಅದರಗುಂಚಿ ಗ್ರಾಮದ ಕಾಳಪ್ಪ ರಘುವೀರ ರೋಗಣ್ಣವರ, ಬಸವರಾಜ ಶಂಕರಪ್ಪ ವಾಳದ, ಮಹಮ್ಮದ ರಫೀಕ ಬಡಿಗೇರ, ಶಿವಾನಂದ ಕೆಂಚಣ್ಣವರ ಮತ್ತು ಗಂಗಪ್ಪ ಮರತಂಗಿ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲರೂ 30-40 ವಯಸ್ಸಿನ ಆಸುಪಾಸಿನ ವಯಸ್ಸಿನವರಾಗಿದ್ದಾರೆ ಎಂದರು.

ಕೇವಲ ಮೋಜು ಮಸ್ತಿಗಾಗಿ ಬೇಕಾಗುವ ಹಣಕ್ಕಾಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಬಹಳ ಎಚ್ಚರಿಕೆಯಿಂದ ಸಾಕ್ಷಿಗಳನ್ನು ನಾಶ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಈ ಗ್ಯಾಂಗ್‌ನ್ನು ಕಷ್ಟು ಪಟ್ಟು ಹಿಡಿದು ಹಾಕಿದ್ದೇವೆ. ನಾವು ರಚಿಸಿದ ತನಿಖಾ ತಂಡದಲ್ಲಿನ ಎಲ್ಲರೂ ಅಭಿನಂದನಾರ್ಹರು ಎಂದು ಲೋಕೇಶ ಜಗಲಾಸರ ಹೇಳಿದರು.

ಇವರ ಉದ್ದೇಶ ಕೇವಲ ಹಣ. ಮೋಜು ಮಸ್ತಿ ಮಾಡುವ ಉದ್ದೇಶದಿಂದ ಕೊಲೆ ಮಾಡುವ ನಿರ್ಧಾರ ಮಾಡಿ ಎಲ್ಲಿ ಒಂಟಿ ಮಹಿಳೆಯರು ಸಿಗುತ್ತಾರೋ ಅವರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಿತ್ತಿತ್ತು ಈ ಗ್ಯಾಂಗ್. ಇವರು ಕೊಲೆ ಮಾಡುವ ರೀತಿ ಕಂಡರೆ ಎಂತವರಿಗೂ ಇವರು ಮನುಷ್ಯರಾ ಅನ್ನೋದು ನಿಜಕ್ಕೂ ಅನುಮಾನ ಮೂಡಬಹುದು. ಯಾವ ಮಹಿಳೆ ಟಾರ್ಗೆಟ್ ಆಗುತ್ತಾಳೋ ಆ ಮಹಿಳೆಯ ಮೊದಲು ತಲೆ ಒಡೆದು ನಂತರ ಹೊಟ್ಟೆ ಹರಿದು ಕೈ, ಕಾಲುಗಳನ್ನು ಕತ್ತರಿಸಿ ಮುರಿದು ಚೀಲದಲ್ಲಿ ತುಂಬಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ 63 ರ ಅಕ್ಕಪಕ್ಕ ಪೆಟ್ರೋಲ್ ಸುರಿದು ಸುಡಲಾಗಿದೆ. ಅಷ್ಟೇಯಲ್ಲ, ಕೊಲೆ ಮಾಡಿದ್ದಕ್ಕೆ ಯಾವುದೇ ದಾಖಲೆ,ಸಾಕ್ಷಿಗಳು ಸಿಕ್ಕದಂತೆ ಮಾಡಲು ಯತ್ನ ಕೂಡಾ ಮಾಡಿದ್ದಾರೆ.

ಇವರ ಮೊದಲ ಪ್ರಕರಣ ಮೇ 11,2022 ರಂದು ನಡೆದಿದೆ. ಮಹಿಳೆಯನ್ನು ಅವಳ ಮನೆಯಲ್ಲೆ ಕೊಲೆ ಮಾಡಿ ಸಾಗಿಸಿದ್ದರೆ, ಎರಡನೇ ಮಹಿಳೆಯನ್ನು ಜು 2 ರಂದು ಎಮ್ಮೆ ಮೇಯಿಸುತ್ತಿರುವ ಸಂದರ್ಭದಲ್ಲಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಚೀಲದಲ್ಲಿ ತುಂಬಿಕೊಂಡು ಮಾರುತಿ ವ್ಯಾನ್‌ನಲ್ಲಿ ಸಾಗಿಸಿ ತಂಬೂರು ಕ್ರಾಸ್ ಬಳಿ ಸುಡಲಾಗಿತ್ತು. ಮಹಿಳೆಯರನ್ನು ಇಷ್ಟೊಂದು ಕ್ರೂರವಾಗಿ ಕೊಲೆ ಮಾಡಿದ ಪಾತಕರಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಮಾತುಗಳು ನಿಜಕ್ಕೂ ಸಾರ್ವಜನಿಕ ವಲಯದಲ್ಲಿ ದೊಡ್ಡದಾಗಿ ಕೇಳಿ ಬರುತ್ತಿವೆ.

ಆದರೆ ಎಸ್‌ಪಿ ಲೋಕೇಶ ಅವರು, ಎಲ್ಲರೂ ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ಪೊಲೀಸರೂ ಇದಕ್ಕೆ ಹೊರತಾಗಿಲ್ಲ. ಆರೋಪಿಗಳನ್ನು ಬಂಧಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಕಾನೂನು ಅನ್ವಯ ಅವರಿಗೆ ಕಠಿಣ ಶಿಕ್ಷೆಯಾಗಲಿದೆ. ಎಂದು ಹೇಳಿದರು.

ಈ ಆರು ಜನ ಆರೋಪಿಗಳು ಮೋಜಿಗೆ ಹಣ ಬೇಕಾದಾಗಲೆಲ್ಲ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿತ್ತಿದ್ದು, 2 ನೇ ಪ್ರಕರಣ ಆಗುತ್ತಿದ್ದಂತೆಯೇ ತೀವ್ರ ಜಾಗೂರುಕತೆಯಿಂದ, ಎಚ್ಚರಿಕೆ ವಹಿಸಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದೇವೆ. ಇಲ್ಲವಾದರೆ 3ನೇ ಮಹಿಳೆಯೂ ಕೊಲೆಯಾಗುವ ಸಂಭವವಿತ್ತು. ಹಾಗೆನೇ ಈ ತನಿಖೆಗೆ ಅತ್ಯಂತ ಉತ್ತಮ ಸಹಕಾರ ನೀಡಿದ ಈಶ್ವರ ನಗರ ನಿವಾಸಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಎಸ್ ಪಿ ಹೇಳಿದ್ದಾರೆ.

Leave A Reply

Your email address will not be published.