ಈಶ್ವರಮಂಗಲ : ಹಿಂ.ಜಾ.ವೇ.ಯಿಂದ ಕಾರ್ಗಿಲ್ ವಿಜಯ ದಿವಸ್

ಪುತ್ತೂರು : ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಇದರ ವತಿಯಿಂದ ಈಶ್ವರಮಂಗಲದ ಹೃದಯ ಭಾಗದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದ ಬಳಿ ನೂರಾರು ದೇಶ ಭಕ್ತ ಕಾರ್ಯಕರ್ತರ ಸಮ್ಮುಖದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಜು.26ರ ಸಂಜೆ ನಡೆಯಿತು.

 

ಕಾರ್ಯಕ್ರಮ ದಲ್ಲಿ ನಿವೃತ್ತ ಯೋಧರಿಗೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ದಲ್ಲಿ ಪೂರ್ಣತ್ಮಾ ರಾಮ್, ಶ್ರೀ ಕೃಷ್ಣ ಭಟ್ ಮುಂಡ್ಯ, ಶಿವರಾಮ ಪಿ, ಆನಂದ ರೈ ಸಾಂತ್ಯ ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಪರಿವಾರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಕ್ಷಣ ಮತ್ತು ಅರ್ಪಣ ಸಹೋದರಿಯರಿಂದ ವಂದೇ ಮಾತರಂ ಗೀತೆ ಯೊಂದಿಗೆ ಕಾರ್ಯಕ್ರಮವನ್ನು ಪೂರ್ಣ ಗೊಳಿಸಲಾಯಿತು…

Leave A Reply

Your email address will not be published.