ಗುರುಪೂಜೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ!!

0 15

ಸಿಪಿಎಂ ಕಾರ್ಯಕರ್ತರು ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಆರ್ ಎಸ್ ‌ಎಸ್ ಕಾರ್ಯಕರ್ತ ಅಸುನೀಗಿದ ಘಟನೆ ನಡೆದಿದೆ.

ಕಣ್ಣೂರಿನ ಪಿಣರೈ ಪನುಂಡದಲ್ಲಿ ಗುರು ಪೂಜಾ ಉತ್ಸವ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆ ಜಿಮ್ಮೇಶ್ ಮತ್ತು ಅವರ ಸಹಚರರ ಮೇಲೆ ಕಮ್ಯೂನಿಸ್ಟ್ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ವಿಪರೀತ
ರಕ್ತಸ್ರಾವವಾಗಿದೆ. ಜಿಮ್ಮೇಶ್‌ನನ್ನು ತಲಕ್ಕೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಗುರುಪೂಜಾ ಉತ್ಸವ ಮುಗಿಸಿ ಹಿಂತಿರುಗುತ್ತಿದ್ದ ಸ್ವಯಂಸೇವಕರನ್ನು ಸಿಪಿಎಂ ಕಾರ್ಯಕರ್ತರು ಥಳಿಸಿದ್ದಾರೆ.
ಎ. ಆದರ್ಶ್, ಪಿ.ವಿ. ಜಿಷ್ಣು, ಟಿ. ಅಕ್ಷಯ್ ಮತ್ತು ಕೆ.ಪಿ.ಆದರ್ಶ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಲಕ್ಕೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಗಾಯಗೊಂಡಿರುವ ಆರ್ ಎಸ್ ಎಸ್ ಕಾರ್ಯಕರ್ತ ಅಕ್ಷಯ್ ಟಿ. ಅವರ ಮನೆ ಮೇಲೆ ದಾಳಿ ನಡೆದಿದೆ. ಪಿಣರಾಯಿ, ಪೆನಂಗಿಮೆಟ್ಟದಲ್ಲಿರುವ ಅಕ್ಷಯ್ ಅವರ ಮನೆ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕಲ್ಲಿನಿಂದ ಮನೆಯ ಕಿಟಕಿ ಗಾಜುಗಳು ಸಂಪೂರ್ಣ ಮುರಿದು ಬಿದ್ದಿವೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ಇಷ್ಟು ಮಾತ್ರವಲ್ಲದೆ ಸಿಪಿಎಂ ಕಾರ್ಯಕರ್ತರು ಆರ್ ಎಸ್ ಎಸ್ ಕಚೇರಿಯನ್ನೂ ಹಾನಿ ಮಾಡಿದ್ದಾರೆ. ಪಯ್ಯನ್ನೂರಿನ ಆರ್‌ಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರು ಸಿಪಿಎಂ ಕಾರ್ಯಕರ್ತರು ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಬಂಧಿತರನ್ನು ಗನಿಲ್, ಕಶ್ಯಪ್ ಎನ್ನಲಾಗಿದೆ.

Leave A Reply