ಮಲ್ಪೆ : ಮೀನುಗಾರನ ಬಲೆಗೆ ಬಿತ್ತು ಭಾರೀ ಅಪರೂಪದ ಮೀನುಗಳು | ಜನ ಹಾತೊರೆಯುವ ಈ ಮೀನಿಗಿದೆ ಭಾರೀ ಬೇಡಿಕೆ
ಉಡುಪಿ: ಮಳೆಗಾಲ ಪ್ರಾರಂಭ ಆದಾಗಿನಿಂದ ಮೀನಿಗೆ ಭಾರೀ ರೇಟ್ ಉಂಟಾಗಿತ್ತು. ಮೀನು ತಿನ್ನುವುದೇ ಕಷ್ಟ ಎನ್ನುವ ಪರಿಸ್ಥಿತಿಯಾಗಿತ್ತು. ಆದರೆ ಈಗ ಮತ್ತೆ ಮೀನುಗಾರರು ಸಮುದ್ರಕ್ಕೆ ಇಳಿದಿದ್ದು, ಮೀನುಗಳ ಔತಣವನ್ನೇ ನಮಗೆ ನೀಡಲಿದ್ದಾರೆ. ಮಂಗಳೂರು ಮತ್ತು ಮಲ್ಪೆ ಬೀಚಿನಲ್ಲಿ ಮೀನುಗಳ ಭರಾಟೆ ಹೆಚ್ಚಾಗಿದೆ.
ಆದರೆ ಇತ್ತೀಚೆಗೆ ಮಲ್ಪೆ ಬೀಚಿನಲ್ಲಿ ಮೀನು ಹಿಡಿದ ಮೀನುಗಾರರೊಬ್ಬರಿಗೆ ಒಂದೇ ದಿನದಲ್ಲಿ ಎರಡು ಅಪರೂಪದ ಮೀನುಗಳು ದೊರಕಿದೆ. ಹೌದು, ಈ ಮೀನುಗಳನ್ನು ಕಂಡ ಮೀನುಗಾರ ಭಾರೀ ಸಂತೋಷಗೊಂಡಿದ್ದಾರೆ.
ಈ ಆಳೆತ್ತರದ ಮೀನನ್ನು ಗಾಳದ ಸಹಾಯದಿಂದ ಎಳೆದ ನಂತರ, ಈ ಮೀನುಗಳನ್ನು ನೋಡಿ ಮೀನುಗಾರ ಆಶ್ಚರ್ಯಗೊಂಡಿದ್ದಾನೆ. ಏಕೆಂದರೆ ಈ ಮೀನು ಬರೋಬ್ಬರಿ 25 ಕೆಜಿ ಹಾಗೂ 15 ಕೆಜಿ ತೂಕವಿದೆ. 25 ಕೆಜಿ ತೂಕದ ಮುರು ಜಾತಿಯ ಮೀನು ಮತ್ತೊಂದು ಗಾಳಕ್ಕೆ 15 ಕೆಜಿ ತೂಕದ ಕೊಕ್ಕರ್ ಮೀನು ಬಲೆಗೆ ಬಿದ್ದಿದೆ.
ಈ ಮೀನು ಒಲಿದಿರುವುದು ಮೀನುಗಾರ, ನಾಗೇಶ್ ಅವರ ಬಲೆಗೆ. ಬಿಡುವು ಸಿಕ್ಕಾಗಲೆಲ್ಲಾ ಮೀನು ಹಿಡಿಯುವುದು ನಾಗೇಶ್ ಅವರ ಹವ್ಯಾಸಗಳಲ್ಲಿ ಒಂದು. ಮೀನು ಹಿಡಿಯುವ ಹವ್ಯಾಸ ಮಾಡಿಕೊಂಡಿದ್ದರೂ ಇಷ್ಟು ತೂಕದ ಮೀನು ಜೊತೆಗೆ ಮಾರುಕಟ್ಟೆಯಲ್ಲಿ ಈ ಮೀನಿಗೆ ಇರುವ ಬೇಡಿಕೆ ಕಂಡು ನಾಗೇಶ್ ಅವರು ಭಾರೀ ಸಂತಸಗೊಂಡಿದ್ದಾರೆ.