ಕೂಲ್ ಕ್ಯಾಪ್ಟನ್ ಧೋನಿಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ | ಕಾರಣ…

0 10

ಅಮ್ರಪಾಲಿ ಗ್ರೂಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಧೋನಿ 2016ರಲ್ಲಿ ಆಮ್ರಪಾಲಿ ಗ್ರೂಪ್‌ನಿಂದ ಬೇರ್ಪಟ್ಟ ನಂತರ, ತನಗೆ ಶುಲ್ಕದ ರೀತಿಯಲ್ಲಿ ಬರಬೇಕಾದ 40 ಕೋಟಿ ರೂ.ಗಳನ್ನು ಕೊಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಮ್ರಪಾಲಿ ಗ್ರೂಪ್‌ನ ವಿವಿಧ ಯೋಜನೆಗಳಲ್ಲಿ ಮನೆಗಳನ್ನು ಖರೀದಿಸಿದ ಧೋನಿ ಸೇರಿದಂತೆ 1800 ಜನರಿಗೆ ಸುಪ್ರೀಂ ಕೋರ್ಟ್‌ ನೇಮಿಸಿರುವ ರಿಸೀವರ್ ನೋಟಿಸ್ ಕಳುಹಿಸಿದ್ದಾರೆ. ಇವರೆಲ್ಲರಿಗೂ 15 ದಿನದೊಳಗೆ ಹಣ ಜಮಾ ಮಾಡುವಂತೆ ಸೂಚಿಸಲಾಗಿದೆ.

ಧೋನಿ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಮಧ್ಯಸ್ಥಿಕೆಗೆ ಆದೇಶಿಸಿತ್ತು. ಅಮ್ರಪಾಲಿ ಗ್ರೂಪ್ ತನ್ನ ಶುಲ್ಕವನ್ನು ಪಾವತಿಸಿಲ್ಲ ಎಂದು ಧೋನಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಹೈಕೋರ್ಟ್‌ನಲ್ಲಿ ಮಧ್ಯಸ್ಥಿಕೆ ಕೋರಿದ್ದರು. ಇದೀಗ ಈ ಪ್ರಕರಣದಲ್ಲಿ ಧೋನಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಧೋನಿ ಆ ಅರ್ಜಿಯ ನಂತರ ಆಮ್ರಪಾಲಿ ಗ್ರೂಪ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಹಾಗಾಗಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಅಮ್ರಪಾಲಿ ಪ್ರಕರಣದಲ್ಲಿ ಈ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲ, ಆಮ್ರಪಾಲಿ ಗ್ರೂಪ್ ಪ್ರಕರಣದಲ್ಲಿ ಆರಂಭಿಸಲಾಗಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ.

Leave A Reply