ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿದೆ ಬಗೆ ಬಗೆಯ ಕಾಂಡೋಮ್!! ವಿದ್ಯಾರ್ಥಿಗಳೇ ಖರೀದಿದಾರರಾಗಿರುವ ಹಿಂದಿದೆ ಆತಂಕದ ಕಾರಣ!??

Share the Article

ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ಕಾಂಡೋಮ್ ಗಳ ಬಳಕೆ ಹಾಗೂ ಮಾರಾಟ ಹೆಚ್ಚಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.ಲೈಂಗಿಕ ಕ್ರಿಯೆಯ ಸಂದರ್ಭ ಗರ್ಭನಿರೋಧಕವಾಗಿ, ರೋಗ ನಿರೋಧಕವಾಗಿ ಬಳಕೆಯಾಗುತ್ತಿದ್ದ ಕಾಂಡೋಮ್ ಸದ್ಯ ಹೆಚ್ಚು ಮಾರಾಟವಾಗುತ್ತಿದೆ ಎನ್ನುವ ವಿಚಾರದ ಹಿಂದೆ ನಶೆಯೊಂದರ ನೆರಳು ಬಿದ್ದಿರುವುದು ಆಶ್ಚರ್ಯಕ್ಕೆ ಕಾರಣವಾದಂತಿದೆ.

ಹೌದು. ಕಾಂಡೋಮ್ ಗಳಲ್ಲಿ ಆರೋಮ್ಯಾಟಿಕ್ ಸಂಯುಕ್ತವಿದ್ದು,ಅದರಲ್ಲಿ ಡೆಂಡ್ರೈಟ್ ಅಂಟುಗಳು ಇರುವ ಹಿನ್ನೆಲೆಯಲ್ಲಿ ಮದ್ಯದ ಅಂಶ ಇರುತ್ತದೆ. ಇದೇ ಕಾರಣಕ್ಕಾಗಿ ನಶೆ ಏರಿಸಿಕೊಳ್ಳಲು ವ್ಯಸನಿಗಳು ಬಳಸುತ್ತಾರೆ ಎನ್ನಲಾಗಿದೆ.

ಅದಲ್ಲದೇ ಕಾಂಡೋಮ್ ಮೂಲ ಉದ್ದೇಶದ ಹೊರತು ನಶೆಯ ಅಂಗವಾಗಿ ಬದಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು,ಸುವಾಸನೆಯುಕ್ತ ಕಾಂಡೋಮ್ ಗಳನ್ನು ಹೆಚ್ಚು ಕಾಲ ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಸೇವನೆ ಮಾಡಿ ನಶೆ ಏರಿಸಿಕೊಳ್ಳುವುದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ ಸಮೀಕ್ಷೆ ನಡೆಸಿದ ವರದಿ ಹೇಳಿದೆ.

Leave A Reply

Your email address will not be published.