ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್ | ಅಷ್ಟಕ್ಕೂ ಮಾರ್ಡನ್ ರೈತನ ಕೈ ಹಿಡಿಯುವಾಕೆ ಯಾರು ಗೊತ್ತೇ?

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಶೋ ಸಕ್ಕತ್ ಹಿಟ್ ಆಗುತ್ತಲೇ ಬಂದಿದೆ. ಈ ಶೋನಿಂದಾಗಿ ಹಲವಾರು ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆತಂತಾಗಿದೆ. ಸಿನಿಮಾ, ಸೀರಿಯಲ್ ನಟ-ನಟಿಯರಿಗೆ ಮಾತ್ರವಲ್ಲದೇ, ಸಾಮಾನ್ಯ ಜನರಿಗೂ ಅವಕಾಶ ನೀಡುತ್ತಿರುವುದು ಹೆಮ್ಮೆಯ ವಿಚಾರವೇ ಸರಿ. ಇದು ನೋಡುಗರಿಗೆ ಮನೋರಂಜನೆಯ ಜೊತೆಗೆ ಕಂಟೆಸ್ಟೆಂಟ್ ಗಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲಿರುವ ಮುಕ್ತ ವೇದಿಕೆಯಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇಂತಹ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6 ರಲ್ಲಿ ಮಾರ್ಡನ್ ರೈತ ಎಂದೇ ಪ್ರಸಿದ್ದಿ ಪಡೆದಿದ್ದ ಶಶಿಕುಮಾರ್ ಭಾಗವಹಿಸಿ, ವಿಜೇತರಾಗಿದ್ದರು. ರೈತ ಅಂದಾಗ ಮೂಡೋ ಭಾವನೆಯೇ ಬೇರೆ. ಅದೇ ರೀತಿ ಇವರಿಗೂ ಉತ್ತಮವಾದ ರೆಸ್ಪೋನ್ಸ್ ದೊರೆತಿತ್ತು. ಎಲ್ಲರ ಮನ ಗೆದ್ದಿರುವ ಶಶಿಕುಮಾರ್ ಬಿಗ್ ಬಾಸ್ ನಂತರನೂ ಸುದ್ದಿಯಲ್ಲೇ ಇದ್ದಾರೆ. ಸದ್ಯ, ರೈತ ಕಮ್ ನಟನಾಗಿ ಮಿಂಚುತ್ತಿರುವ ಶಶಿಕುಮಾರ್ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಅದುವೇ ಅವರ ಮದುವೆಯ ಸುದ್ದಿ. ಹೌದು, ಶಶಿಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 6 ಮತ್ತು 7 ರಂದು ಶಶಿ ಕುಮಾರ್ ಮದುವೆ ನಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ಶಶಿ ಕುಮಾರ್ ಅಧಿಕೃತವಾಗಿ ಹೇಳಬೇಕಿದೆ. ಅಷ್ಟಕ್ಕೂ ಈ ಹ್ಯಾಂಡ್ ಸಮ್ ನ ಕೈ ಹಿಡಿಯುವ ಹುಡುಗಿ ಬಗ್ಗೆ, ಮೆಲ್ಲ ಮೆಲ್ಲಗೆ ಸುದ್ದಿ ಹರಡುತ್ತಿದೆ. ಸದ್ಯ ಲಭಿಸಿರುವ ಮಾಹಿತಿ ಪ್ರಕಾರ ದೊಡ್ಡಬಳ್ಳಾಪುರ ಮೂಲದ ಸ್ವಾತಿ ಎನ್ನುವವರನ್ನು ಶಶಿ ಕುಮಾರ್ ನನ್ನು ಮದುವೆಯಾಗಲಿದ್ದಾರೆ.

ಇನ್ನು ಶಶಿ ಕುಮಾರ್ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರಾಗಿದ್ದು, ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಶಶಿ ಕುಮಾರ್ ಪದವಿ ಪಡೆದಿದ್ದು, ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಚಿಂತನೆ ಮಾಡುತ್ತಿರುತ್ತಾರೆ. ಹಾಗೆಯೇ ಸದ್ಯ ಅವರು ಸಿನಿಮಾಗಳಲ್ಲಿ ಸಹ ಬ್ಯುಸಿ ಇದ್ದಾರೆ. ಶುಗರ್ ಫ್ಯಾಕ್ಟರಿ’ ಹಾಗೂ ‘ಮೆಹಬೂಬ’ ಸಿನಿಮಾಗಳಲ್ಲಿ ಶಶಿ ನಟಿಸುತ್ತಿದ್ದು, ಅದಕ್ಕಾಗಿ ಸಖತ್ ತಯಾರಿ ಮಾಡಿಕೊಂಡಿದ್ದು, ಸಿಕ್ಸ್​ ಪ್ಯಾಕ್​ ಅನ್ನು ಮಾಡಿಕೊಂಡಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಇರುವ ಶಶಿ ಆಗಾಗ ಅಭಿಮಾನಿಗಳ ಜೊತೆ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಒಟ್ಟಾರೆ, ಇವರ ಮದುವೆಯ ಕ್ಷಣಕ್ಕಾಗಿ ಅಭಿಮಾನಿಗಳು ಕಾದುಕೂತಿರೋದು ಮಾತ್ರ ಸತ್ಯ..

error: Content is protected !!
Scroll to Top
%d bloggers like this: