ರಸ್ತೆ ಬದಿ ಜೋಳ ಕೊಂಡಾಗ ಚೌಕಾಶಿ ಮಾಡಿದ ಕೇಂದ್ರ ಸಚಿವ | ಟೀಕಿಸಿದ ಕಾಂಗ್ರೆಸ್, ಚೌಕಾಶಿ ಸರೀನಾ ತಪ್ಪಾ ಚರ್ಚೆ !!
ರಸ್ತೆ ಬದಿ ಜೋಳ ಹಬೆಯಾಡಿಸುವ ವ್ಯಾಪಾರಿಯ ಬಳಿ ಜೋಳದ ಬೆಲೆ ಕೇಳಿ ಇದು ‘ ತುಂಬಾ ದುಬಾರಿಯಾಯ್ತು ‘ ಎಂದ ಕೇಂದ್ರ ಸಚಿವರ ಮಾತು ಈಗ ರಾಜಕೀಯ ಕೆಸರೆರೆಚಾಟಕ್ಕೆ ಕಾರಣ ಆಗಿದೆ. ರಸ್ತೆ ಬದಿಯ ಜೋಳದ ಮಾತು ಈಗ ಸಂಸತ್ತು ಭವನ ತಲುಪುತ್ತಿದೆ.
ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ, ಮೂರು ಜೋಳದ ಪೀಸ್ಗಳಿಗೆ 45 ರೂಪಾಯಿ ಪಾವತಿಸಬೇಕಾದಾಗ ಚೌಕಾಸಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಅವು ಸ್ವತಃ ಟ್ವಿಟರ್ನಲ್ಲಿ ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಜೋಳವನ್ನು ಹೇಗೆ ತಯಾರಿಸಬೇಕೆಂಬುದರ ಬಗ್ಗೆ ವಿವರವಾದ ಸೂಚನೆಗಳನ್ನು ಜೋಳ ಬೇಯಿಸುವವರಿಗೆ ನೀಡುತ್ತಿದ್ದಾರೆ. ಆದರೆ ಜೋಳ ಮಾರಾಟಗಾರರು ಮೂರು ತುಂಡುಗಳಿಗೆ 45 ರೂಪಾಯಿ ಕೇಳಿದಾಗ ದಿಗ್ಭ್ರಮೆಗೊಂಡ ಸಚಿವರು ಚೌಕಾಸಿ ಮಾಡಿದ್ದಾರೆ.
“45 ರೂಪಾಯಿಯಾ? ಇದು ತುಂಬಾ ದುಬಾರಿಯಾಗಿದೆ ಎಂದು ಉಕ್ಕು ಸಚಿವಾಲಯದ ರಾಜ್ಯ ಸಚಿವ ಕುಲಾಸ್ತೆ ಹೇಳಿದರು. ಅದಕ್ಕೆ ಜೋಳ ಮಾರುವವರು ನಗುಮುಖದಿಂದ, “ಇದು ಸ್ಟಾಂಡರ್ಡ್ ದರ. ನೀವು ಕಾರಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂಬ ಕಾರಣಕ್ಕೆ ನಾನು ಬೆಲೆ ಏರಿಕೆ ಮಾಡಿಲ್ಲ” ಎಂದು ಧೈರ್ಯದಿಂದಲೇ ಉತ್ತರಿಸಿದ್ದಾನೆ.
“ಇಂದು ಸಿಯೋನಿಯಿಂದ ಮಾಂಡ್ಲಾಗೆ ಹೋಗುತ್ತಿದ್ದೇನೆ. ಸ್ಥಳೀಯ ಜೋಳದ ರುಚಿ ನೋಡಿದೆವು. ನಾವೆಲ್ಲರೂ ಸ್ಥಳೀಯ ರೈತರು ಮತ್ತು ಅಂಗಡಿಯವರಿಂದ ಆಹಾರ ಪದಾರ್ಥಗಳನ್ನು ಖರೀದಿಸಬೇಕು. ಇದು ಅವರಿಗೆ ಉದ್ಯೋಗವನ್ನು ಮತ್ತು ಕಲಬೆರಕೆಯಿಲ್ಲದ ಸರಕುಗಳನ್ನು ಖಾತ್ರಿಗೊಳಿಸುತ್ತದೆ” ಎಂದು ಕುಲಸ್ತೆ ಗುರುವಾರ ಟ್ವೀಟ್ ಮಾಡಿದ್ದಾರೆ. ರಸ್ತೆ ಬದಿ ಮಾರಾಟಗಾರನ ಜತೆ ಸಚಿವರು ಚೌಕಾಸಿ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
“ಅವರು ಎಷ್ಟು ಬಡವರೆಂದರೆ, ಅವರಿಗೆ 15 ರೂಪಾಯಿಯ ಜೋಳದ ತುಂಡು ತುಂಬಾ ದುಬಾರಿಯಾಗಿದೆ. ಇನ್ನು ಸಾಮಾನ್ಯ ನಾಗರಿಕರ ಪರಿಸ್ಥಿತಿಯನ್ನು ಯೋಚಿಸಿ ಎಂದು ಮಧ್ಯಪ್ರದೇಶ ಕಾಂಗ್ರೆಸ್ನ ಮಾಧ್ಯಮ ವಿಭಾಗದ ಅಧ್ಯಕ್ಷ ಕೆಕೆ ಮಿಶ್ರಾ ಟ್ವೀಟ್ ಮಾಡಿದ್ದಾರೆ.
ಸಚಿವರು ರಸ್ತೆ ಬದಿಯಲ್ಲಿ ಚೌಕಾಶಿ ಮಾಡಿದ್ದು ಸರಿಯಾದ ತಪ್ಪಾ ? ಚೌಕಾಸಿ ಮಾಡದೆ ಯಾವುದನ್ನು ಕೊಳ್ಳಬಾರದು ಎನ್ನು ಎನ್ನುತ್ತಾರೆ ಆರ್ಥಿಕ ಸಲಹೆಗಾರರು. ಹಾಗಂತ ವಿಪರೀತ ಚೌಕಾಶಿಗೆ ಇಳೀಬಾರದು ಅಂತಿದ್ದಾರೆ ಕೆಲವರು. ಸರಿ ತಪ್ಪು ನೀವೇ ನಿರ್ಧರಿಸಿ.
आज सिवनी से मंडला जाते हुए। स्थानीय भुट्टे का स्वाद लिया। हम सभी को अपने स्थानीय किसानों और छोटे दुकानदारों से खाद्य वस्तुओं को ख़रीदना चाहिए। जिससे उनको रोज़गार और हमको मिलावट रहित वस्तुएँ मिलेंगी। @MoRD_GoI @BJP4Mandla @BJP4MP pic.twitter.com/aNsLP2JOdU
— Faggan Singh Kulaste (@fskulaste) July 21, 2022