ಒಂದು ಚೂರೂ ಮನಸ್ಸು ವಿಚಲಿತ ಮಾಡಿಕೊಳ್ಳದೆ ರಸ್ತೆಯಲ್ಲಿ ಸಿಕ್ಕ ಲಕ್ಷಾಂತರ ಹಣ ಪೊಲೀಸ್ ಠಾಣೆಗೆ ತಂದ ಪೇದೆ, ಅಲ್ಲಿ ಎಷ್ಟು ದುಡ್ಡಿತ್ತು ಎಂದು ತಿಳಿದರೆ ನಿಮಗೆ ಅಚ್ಚರಿ ಮೂಡದೆ ಇರದು

0 35

ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದ ವೇಳೆ ಲಕ್ಷಾಂತರ ರೂಪಾಯಿ ಉಳ್ಳ ಬ್ಯಾಗ್ ಸಿಕ್ಕಿದೆ. ಈ ಬ್ಯಾಗ್ ಅನ್ನು ಅವರು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಅಪರ ನೈತಿಕತೆ ಮೆರೆದಿದ್ದಾರೆ.

ರಸ್ತೆಯಲ್ಲಿ ಯಾರಿಗಾದರೂ ಹಣದ ಪರ್ಸ್ ಅಥವಾ ಬ್ಯಾಗು ಸಿಕ್ಕರೆ, ಆ ಹಣವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆಯುತ್ತಿರುವ ಘಟನೆಗಳನ್ನು ಆಗಾಗ ಕೇಳುತ್ತಿದ್ದೇವೆ. ಅದೇ ರೀತಿ, ಇಲ್ಲೊಂದು ಕಡೆ ಒಂದಲ್ಲ ಎರಡಲ್ಲ ಒಟ್ಟು 45 ಲಕ್ಷ ದುಡ್ಡು ರಸ್ತೆಯಲ್ಲಿ ಸಿಕ್ಕಿದೆ. ಅಷ್ಟು ದುಡ್ಡು ಕಷ್ಟದಲ್ಲಿರುವ ವ್ಯಕ್ತಿ ಒಬ್ಬನು ಕೈಗೆ ಸಿಕ್ಕಿದಾಗ ಮನಸ್ಸು ಚಂಚಲ ಗೊಳ್ಳುವುದು ಸಹಜ. ಆದರೆ ಈ ಟ್ರಾಫಿಕ್ ಪೊಲೀಸ್ ಒಬ್ಬರು, ಪರರ ದುಡ್ಡು ಪಾಷಣ ಎನ್ನುವಂತೆ ನಿರ್ಲಿಪ್ತತೆಯಿಂದ ಅಷ್ಟೂ ದುಡ್ಡನ್ನು ಪೋಲಿಸ್ ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಅಂದರೆ ಏನು ಅನ್ನುವುದನ್ನು ನಿರೂಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಶನಿವಾರ ಟ್ರಾಫಿಕ್ ಪೊಲೀಸ್‌ ಅಧಿಕಾರಿಯೊಬ್ಬರು 45 ಲಕ್ಷ ಇರುವ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಮಾತನಾಡಿ, ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ ಅನ್ನು ಕಂಡುಕೊಂಡಿದ್ದಾರೆ.

ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ 2000 ಮತ್ತು 500 ರೂ. ನೋಟುಗಳ ಕಂತೆ ಕಂಡುಬಂದಿದೆ. ಈ ಬ್ಯಾಗ್​ನಲ್ಲಿ ಒಟ್ಟು 45 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್ ಅನ್ನು ಹಸ್ತಾಂತರಿಸಿದ್ದಾರೆ ಎಂದರು.

Leave A Reply