ಗಂಡ ಹೆಂಡತಿ ಮಧ್ಯೆ ಜಗಳ ಕಾಮನ್. ಜಗಳ ಇದ್ದಲ್ಲಿ ಪ್ರೀತಿನೂ ಹೆಚ್ಚು ಅನ್ನೋ ಮಾತಿದೆ. ಆದ್ರೆ ಕೆಲವೊಂದು ದಂಪತಿಯ ಜಗಳ ಉಂಡು ಮಲಗುವವರೆಗೆ ಮಾತ್ರ ಇರುತ್ತೆ. ಆದ್ರೆ, ಇನ್ನೂ ಕೆಲವರಿದ್ದು ಅತಿರೇಕಕ್ಕೆ ಹೋಗಿರುತ್ತದೆ. ಇಂತಹ ಪ್ರಕರಣಗಳು ಹೊಸದೇನು ಅಲ್ಲ. ಇದೀಗ ಅದೇ ರೀತಿಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪತ್ನಿಯ ಜೊತೆಗೆ ಜಗಳ ಮಾಡಿಕೊಂಡಿದ್ದ ಪತಿರಾಯ, ಸಿಟ್ಟಿನಲ್ಲಿ ಸಾಯಲು ಹೋಗಿದ್ದಾನೆ. ಹೌದು. ಜಿಲ್ಲೆಯ ಬೀಳಗಿ ತಾಲೂಕಿನ ವೀರಾಪುರ ಗ್ರಾಮದ ನಿವಾಸಿ ಚನ್ನಬಸಪ್ಪ ಎಂಬಾತ ಪತ್ನಿಯ ಜೊತೆಗೆ ಜಗಳ ಮಾಡಿಕೊಂಡಿದ್ದನು. ಇದೇ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ಮನೆಯ ಸಮೀಪವೇ ಇದ್ದಂತ ನದಿಗೆ ಹಾರಿದ್ದಾನೆ.
ಆದ್ರೆ, ಅದೊಂದು ಮಾತಿದೆ ನೋಡಿ, ಆಯುಷ್ಯ ಎಂಬುದು ಇದ್ದರೇ ಎಂತಹ ದೊಡ್ಡ ಅಪಾಯದಿಂದಲೂ ಪಾರಾಗಬಹುದೆಂದು. ಅದೇ ರೀತಿ ಈತನಿಗೆ ಬದುಕುವ ಆಯುಷ್ಯ ಗಟ್ಟಿಯಿತ್ತು ನೋಡಿ. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡರೂ ಬದುಕುಳಿದಿದ್ದಾನೆ ಈತ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನೆಂದು ಮುಂದೆ ಓದಿ..
ಸತ್ತೇ ಹೋಗುತ್ತೇನೆಂದು ಮನೆಯಿಂದ ಓಡೋಡಿ ಬಂದ ವ್ಯಕ್ತಿ ಅನಗವಾಡಿ ಬಳಿಯ ಘಟಪ್ರಭಾ ಸೇತುವೆ ಮೇಲಿನಿಂದ ನದಿಗೆ ಹಾರಿದ್ದನು. ಈ ವೇಳೆ, ಅಲ್ಲೇ ಇದ್ದ ಸ್ಥಳೀಯರು ಗಮನಿಸಿದರಿಂದ ಬಚಾವಾಗಿದ್ದಾನೆ ನೋಡಿ. ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಂತ ಚನ್ನಬಸಪ್ಪನನ್ನು ರಕ್ಷಿಸಿದ್ದಾರೆ.
You must log in to post a comment.