ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ | ಹೆಚ್ಚು ಉಷ್ಣತೆಯಲ್ಲಿ ಎಣ್ಣೆ ಪ್ಯಾಕಿಂಗ್ ಮಾಡಿ ಲೀಟರ್ ನಲ್ಲಿ ಮಾಡುತ್ತಿದ್ದ ಮೋಸಕ್ಕೆ ಇನ್ನು ಕಡಿವಾಣ !
ನವದೆಹಲಿ: ಇನ್ನು ಮುಂದೆ ಅಡುಗೆ ಎಣ್ಣೆಯಲ್ಲಿ ಗ್ರಾಹಕರಿಗೆ ಹಲವು ದಶಕಗಳಿಂದ ಆಗುತ್ತಿದ್ದ ಮೋಸಕ್ಕೆ ಕಡಿವಾಣ ಬೀಳಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಇನ್ನು ಮುಂದೆ ಅಡುಗೆ ಎಣ್ಣೆಯ ಪ್ಯಾಕ್ ಮೇಲೆ ತಾಪಮಾನ ನಮೂದಿಸದೆ ಸರಕುಗಳನ್ನು ಪ್ಯಾಕ್ ಮಾಡಲು ಎಲ್ಲಾ ಖಾದ್ಯ/ಅಡುಗೆ ಎಣ್ಣೆ ತಯಾರಕರು, ಪ್ಯಾಕರ್ ಗಳು ಮತ್ತು ಆಮದುದಾರರಿಗೆ ಕೇಂದ್ರ ಸರ್ಕಾರ ಸೂಚಿಸಿದೆ.ಅಲ್ಲದೆ ಪರಿಮಾಣ ಅಥವಾ ದ್ರವ್ಯರಾಶಿಯಲ್ಲಿ ಪ್ಯಾಕೇಜ್ ನಲ್ಲಿ ಘೋಷಿಸಲಾದ ಪ್ರಮಾಣವು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಲಹೆ ನೀಡಿದೆ.
ಮೋಸ ಹೇಗೆ ಆಗುತ್ತಿತ್ತು ಗೊತ್ತೇ ?
ಎಲ್ಲಾ ಅಡುಗೆ ಎಣ್ಣೆ ಮಾರಾಟಗಾರರು ಮತ್ತು ಪ್ಯಾಕಿಂಗ್ ಮಾಡುವವರು ಕೆಜಿ ಯಲ್ಲಿ ಮಾರಾಟ ಮಾಡದೆ ಲೀಟರ್ಗಳಲ್ಲಿ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿಯೇ ಮಾಡುತ್ತಿರುವ ಕೆಲಸ. ನಮಗೆಲ್ಲಾ ಗೊತ್ತಿರುವಂತೆಯೇ, ದ್ರವ ವಸ್ತುವಿನ ಸಾಂದ್ರತೆಯು ಉಷ್ಣತೆಯ ಮೇಲೆ ವಿಲೋಮ ಅನುಪಾತದಲ್ಲಿರುತ್ತದೆ. ಅಂದರೆ, ಉಷ್ಣತೆ ಹೆಚ್ಚಿದಂತೆಲ್ಲ ಸಾಂದ್ರತೆ ಕಮ್ಮಿಯಾಗಿ ಎಣ್ಣೆಯ ಪರಿಮಾಣ ( ವಾಲ್ಯೂಮ್) ಹೆಚ್ಚುತ್ತದೆ. ಆದರೆ ತೂಕವು ಸ್ಥಿರವಾಗಿರುತ್ತದೆ, ಪ್ಯಾಕೇಜಿಂಗ್ ಮಾಡುವವರು ಹೆಚ್ಚಿನ ತಾಪಮಾನದಲ್ಲಿ ಪ್ಯಾಕಿಂ್ ಮಾಡುತ್ತಾರೆ. ಆಗ ಸಾಂದ್ರತೆ ಕಮ್ಮಿಯಾಗಿ (ದ್ರವ ಉಬ್ಬಿಕೊಂಡು) ಜಾಸ್ತಿ ಲೀಟರ್ ಪರಿಮಾಣ ಗೋಚರಿಸುತ್ತದೆ. ಗ್ರಾಹಕರು ತಾವು ಒಂದು ಲೀಟರ್ ಎಣ್ಣೆಯನ್ನು ಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತಾರೆ ಆದರೆ ಆ ಒಂದು ಲೀಟರ್ ಎಣ್ಣೆ ಹೆಚ್ಚಿನ ಉಷ್ಣತೆಯಲ್ಲಿ ಪ್ಯಾಕ್ ಮಾಡಿದಾಗ ಇದ್ದ ಒಂದು ಲೀಟರ್. ಅದು ತಣಿದಾಗ ಅದರ ಲೀಟರ್ ಪರಿಮಾನವು ಕುಗ್ಗಿಬಿಡುತ್ತದೆ. ಅಂದರೆ ನಾವಿಷ್ಟು ದಿನ ಒಂದು ಲೀಟರ್ ಎಣ್ಣೆ ಎಂದು ಕೊಂಡುಕೊಂಡಿದ್ದರೆ ಅದರಲ್ಲಿ ಒಂದು ಲೀಟರ್ಗಿಂತ ಒಂದಿಷ್ಟು ಕಮ್ಮಿ ಲೀಟರ್ ಪರಿಮಾಣವು ಇರುತ್ತದೆ. ಹಾಗೆ ಗ್ರಾಹಕರು ಮೋಸ ಹೋಗುತ್ತಾರೆ.
ಈಗ ಈ ವಿಚಾರವು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು,
ಖಾದ್ಯ ತೈಲ ಉದ್ಯಮ ಸಂಸ್ಥೆ ಸಾಲ್ವೆಂಟ್ ಎಕ್ಸ್ ಟ್ರಾಕ್ಟರ್ಸ್
ಅಸೋಸಿಯೇಷನ್ ಆಫ್ ಇಂಡಿಯಾ ಕೆಲವು ಖಾದ್ಯ ತೈಲ
ಕಂಪನಿಗಳು ಲೀಟರ್ ಪ್ಯಾಕ್ ಅನ್ನು ಕೋಣೆಯ 1 ಉಷ್ಣಾಂಶಕ್ಕಿಂತ(30 ಡಿಗ್ರಿ ಸಿ) ಹೆಚ್ಚಿನ ತಾಪಮಾನದಲ್ಲಿ ಪ್ಯಾಕ್
ಮಾಡುವ ಮೂಲಕ ಕಡಿಮೆ ತೂಕವನ್ನು ನೀಡುವ ಮೂಲಕ
ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದರ ಬಗ್ಗೆ
ಕಾನೂನು ಮಾಪನಶಾಸ್ತ್ರದ ಗಮನಕ್ಕೆ ತಂದಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆಯಡಿಯಲ್ಲಿ ಉಪನಿರ್ದೇಶಕರು(ಕಾನೂನು ಮಾಪನಶಾಸ್ತ್ರ) ಎಲ್ಲಾ ರಾಜ್ಯಗಳಿಗೆ ಬರೆದ ಪತ್ರದಲ್ಲಿ ಖಾದ್ಯ ತೈಲ ತಯಾರಕರು ತಮ್ಮ ಲೇಬಲಿಂಗ್ ನಿವ್ವಳ ಪ್ರಮಾಣವನ್ನು ಮುಂದಿನ 6 ತಿಂಗಳ ಒಳಗೆ ಸರಿಪಡಿಸಲು ಸಲಹೆ ನೀಡಬೇಕು ಎಂದು ಹೇಳಿದ್ದಾರೆ. ಅಸೋಸಿಯೇಶನ್ ಪ್ಯಾಕಿಂಗ್ ಪರಿಸ್ಥಿತಿಗಳನ್ನು ಪ್ರಮಾಣೀಕರಿಸಲು ಸಲಹೆ ನೀಡಿದೆ.
ಕಾನೂನು ಮಾಪನಶಾಸ್ತ್ರ ಇಲಾಖೆಯು ಅಸೋಸಿಯೇಷನ್ ನೀಡಿದ ಸಲಹೆಯನ್ನು ಪರಿಗಣಿಸಿದೆ. ಖಾದ್ಯ ತೈಲ, ವನಸ್ಪತಿ,
ಖಾದ್ಯವಲ್ಲದ ಸಸ್ಯಜನ್ಯ ಎಣ್ಣೆಗಳ ತಯಾರಕರು ಇನ್ನು ಮುಂದೆ ಹೆಣ್ಣೇಯ ತೂಕ ಮತ್ತು ಲೀಟರ್ ಪರಿಮಾಣಗಳನ್ನು ನಮೂದಿಸಬೇಕೆಂದು ಜುಲೈ 15, 2022 ರಂದು ಆದೇಶವನ್ನು ಹೊರಡಿಸಿದೆ. ಇದರಿಂದ ಗ್ರಾಹಕರಿಗೆ ಈತನಕ ಆಗುತ್ತಿದ್ದ ಮೋಸವನ್ನು ತಪ್ಪಿಸಬಹುದಾಗಿದೆ.