ಮದುವೆಯಾಗಲು ರೆಡಿಯಾದ ಸ್ಯಾಂಡಲ್ ವುಡ್ ನ ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ…ಮದುವೆ ಯಾವಾಗ? ಹುಡುಗಿ ಯಾರು ಗೊತ್ತೇ ?

ಸ್ಯಾಂಡಲ್ ವುಡ್ ನ ಹಾಸ್ಯ ನಟ ಚಿಕ್ಕಣ್ಣನ ಮದುವೆ ವಿಚಾರವಾಗಿ ತುಂಬಾ ಗಾಸಿಪ್ ಗಳು ಬಂದಿದೆ. ನಿರೂಪಕಿ ಅನುಶ್ರೀಯಿಂದ ಹಿಡಿದು ನಾನಾ ನಟಿಯರ ಹೆಸರಿನ ಅವರ ಮದುವೆಯ ಮಾತು ಬಂದಿದೆ‌. ಆದರೆ ಅವೆಲ್ಲ ಸುಳ್ಳು ಸುದ್ದಿಯಾಗಿತ್ತು.

ಆದರೆ ಈ ಬಾರಿ ನಿಜ ವಿಷಯವೊಂದು ತೇಲಿ ಬಂದಿದೆ. ಮುಂದಿನ ವರ್ಷ ಚಿಕ್ಕಣ್ಣ ಪಕ್ಕಾ ಮದುವೆಯಾಗಲಿದ್ದಾರಂತೆ. ಅದಕ್ಕೆ ಕಾರಣ ಅವರ ಕುಟುಂಬದ ಒತ್ತಡವಂತೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಚಿಕ್ಕಣ್ಣ ಮದುವೆ ಆಗುತ್ತಿರುವ ಹುಡುಗಿ ಯಾರು? ಅವರು ಸಿನಿಮಾ ರಂಗದವರಾ ಅಥವಾ ತನ್ನ ಕುಟುಂಬ ಮಂದಿ ನೋಡಿದ ಹುಡುಗಿಯನ್ನು ಮದುವೆಯಾಗುತ್ತಾರಾ? ಈ ಕುರಿತು ಪಕ್ಕಾ ಮಾಹಿತಿ ದೊರಕಿಲ್ಲ. ಆದರೆ, ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಮದುವೆ ಖಂಡಿತ ಎಂದು ಮಾತ್ರ ಹೇಳಿಕೊಂಡಿದ್ದಾರೆ. ಹಲವು ದಿನಗಳಿಂದ ಚಿಕ್ಕಣ್ಣ ಮದುವೆ ವಿಚಾರ ಓಡಾಡುತ್ತಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡಲು ಅವರು ನಿರ್ಧಾರ ಮಾಡಿದ್ದಾರೆ.

ಚಿಕ್ಕಣ್ಣ ಅವರು ಸದ್ಯಕ್ಕೆ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಅವರು, ಎರಡನೇ ಹಂತದ ಶೂಟಿಂಗ್ ಗಾಗಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ದೊರಕಿದಂತಾಗಿದೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಅವರು ಹಸೆಮಣೆ ಏರುವುದು ಪಕ್ಕಾ. ಇನ್ನೊಂದು ಮಾತು ಈ ಸಲ ಮಾತ್ರ ಮದುವೆ ವಿಚಾರ ಯಾವುದೇ ಕಾರಣಕ್ಕೂ ಗಾಸಿಪ್ ಆಗಲ್ಲ ಎಂಬ ಮಾತನ್ನು ಒತ್ತಿ ಹೇಳಿದ್ದಾರೆ ಚಿಕ್ಕಣ್ಣ.

error: Content is protected !!
Scroll to Top
%d bloggers like this: