ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬರ್!!!

ಸೋಷಿಯಲ್ ಮೀಡಿಯಾಗಳಲ್ಲಿ ಯುವಕ ಯುವತಿಯರು ಹೆಚ್ಚು ಸಕ್ರಿಯರಾಗಿರುತ್ತಾರೆ. ಕೊರೊನಾ ಮಾಹಾಮಾರಿ ಸಂದರ್ಭ ಜನರು ಆರ್ಥಿಕ ಸಂಕಷ್ಟ ಎದುರಿಸಿದಾಗ ಎಲ್ಲರೂ ಮೊರೆ ಹೋದದ್ದೇ ಈ ಯೂಟ್ಯೂಬ್ ಚಾನೆಲ್ ಮಾಡಲು. ಹಾಗಾಗಿ ಈಗ ಎಲ್ಲಾ ಕಡೆ ಯೂಟ್ಯೂಬರ್ಸ್ ದೇ ಹಾವಳಿ.

ಅಂಥದ್ದೇ ಒಬ್ಬ ಯೂಟ್ಯೂಬರ್ ಕೇವಲ ಕ್ಷುಲ್ಲಕ ಕಾರಣಕ್ಕಾಗಿ ಈಗ ತನ್ನ ಜೀವ ತೆಗೆದಿದ್ದಾನೆ. ತನ್ನ ಚಾನೆಲ್‌ಗೆ ವೀಕ್ಷಕರು ಕಡಿಮೆಯಾದರು ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, 23 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಯೂಟ್ಯೂಬ್ ಚಾನೆಲ್‌ಗೆ ವೀಕ್ಷಕರು ಕಡಿಮೆಯಾದರು ಎಂಬ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ವಾಲಿಯರ್ ಮೂಲದ ವಿದ್ಯಾರ್ಥಿ ಹೈದರಾಬಾದ್ ಐಐಟಿಎಂ ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಯೂಟ್ಯೂಬ್‌ನಲ್ಲಿ ತನ್ನ ಚಾನೆಲ್‌ಗೆ ವೀಕ್ಷಕರು ಕಡಿಮೆಯಾಗಿದ್ದಾರೆ ಮತ್ತು ಪೋಷಕರು ನನ್ನ ಈ ಕೆಲಸಕ್ಕೆ ತನಗೆ ಮಾರ್ಗದರ್ಶನ ನೀಡುತ್ತಿಲ್ಲ. ಇದರಿಂದಾಗಿ ನಾನು ತೊಂದರೆಗೀಡಾದೆ ಎಂದು ಮೃತ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿದ್ದಾನೆ.

ತನ್ನ ವಸತಿ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಬಿದ್ದ ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನ ಪಟ್ಟರೂ, ಆತ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿದ್ಯಾರ್ಥಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ-ಗೇಮ್‌ಗಳ ವಿಷಯವನ್ನು ಅಪ್‌ಲೋಡ್ ಮಾಡುತ್ತಿದ್ದ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Leave A Reply

Your email address will not be published.