ನಕಲಿ ಹೆಸರಿನ ಮೂಲಕ ಹಿಂದೂ ಯುವತಿಯ ಬಲೆಗೆ ಬೀಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಮುಸ್ಲಿಂ ಯುವಕ | ಕಂಪ್ಲೇಂಟ್ ಕೊಟ್ಟಾಗ ತಿಳಿಯಿತು ಈತನ ಅಸಲಿ ಮುಖವಾಡ

ಮುಸ್ಲಿಂ ಯುವಕನೊಬ್ಬ ತನ್ನ ಅಸಲಿ ಗುರುತು ಮರೆಮಾಚಿ ನಕಲಿ ಗುರುತಿನಿಂದ ಹಿಂದೂ ಯುವತಿಯೋರ್ವಳ ಸ್ನೇಹ ಬೆಳೆಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಶಾಹಿದ್ ಖಾನ್ ಎಂಬಾತನೇ ಈ ಕೃತ್ಯ ಎಸಗಿದವನು.

ಈತ ‘ಮನೀಷ್ ಸೇನ್’ ಎಂಬ ನಕಲಿ ಗುರುತಿನಿಂದ ಹಿಂದೂ ಹುಡುಗಿಯ ಸ್ನೇಹ ಬೆಳೆಸಿದ್ದ. ನಂತರ ಹುಡುಗಿಯನ್ನು ತನ್ನ ಮನೆಗೆ ಆಹ್ವಾನಿಸಿ ಅಲ್ಲಿ ಆಕೆಗೆ ಅಮಲು ಪದಾರ್ಥ ಕುಡಿಸಿ ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದಿದ್ದಾನೆ. ನಂತರ ಆರೋಪಿ ಈ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದಾನೆ. ಅಷ್ಟು ಮಾತ್ರವಲ್ಲದೇ ಆಕೆಯ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ.

ಮೊಬೈಲ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಈತ ಕೆಲಸ ಮಾಡುತ್ತಿದ್ದು, ಕಾಲೇಜಿನ ವಿದ್ಯಾರ್ಥಿ ರಾಜಕಾರಣದಲ್ಲೂ ಸಕ್ರಿಯನಾಗಿದ್ದ. ಇದಲ್ಲದೆ ಯುವಕ ಎನ್‌ಎಸ್‌ಯುಐನ (NSUI) ಸಕ್ರಿಯ ಕಾರ್ಯಕರ್ತ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಈತ ಕಳೆದ 10 ವರ್ಷಗಳಲ್ಲಿ ಪಾಲಿ ಮತ್ತು ಭಿಲ್ವಾರದಲ್ಲಿ ಬೇರೆ ಬೇರೆ ಹೆಸರುಗಳೊಂದಿಗೆ ವಾಸಿಸುತ್ತಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಈತ ಸಂತ್ರಸ್ತ ಹುಡುಗಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಆರೋಪಿಯ ಸ್ನೇಹ ಬೆಳಸಿದ್ದಾನೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯಿಂದ ಆರೋಪಿ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದು, 5 ತಿಂಗಳಿಂದ ಇಬ್ಬರೂ ಚಾಟ್ ಮಾಡುತ್ತಿದ್ದರು’ ಎಂದು ಕೊತ್ವಾಲಿ ಪೊಲೀಸ್ ತಿಳಿಸಿದ್ದಾರೆ.

ಆರೋಪಿ ಯುವತಿಯನ್ನು ತನ್ನ ಕೋಣೆಗೆ ಬರುವಂತೆ ಮಾಡಿ, ಬಲವಂತವಾಗಿ ಮದ್ಯಪಾನ ಮಾಡಿಸಿ ನಂತರ ಆಕೆಯ ಅಶ್ಲೀಲ ಫೋಟೋ ತೆಗೆದಿದ್ದಾನೆ. ಅಷ್ಟು ಮಾತ್ರವಲ್ಲದೇ ಬೆದರಿಕೆ ಕೂಡಾ ಹಾಕಿದ್ದಾನೆ. ಈತನ ಬೆದರಿಕೆಗೆ ಹೆದರಿದ ಯುವತಿ ಮನೆಯವರಿಗೆ ತಿಳಿಸಿದ್ದು, ನಂತರ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಮತ್ತು ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರು ಯುವಕನ ಕೊಠಡಿಯನ್ನು ತಪಾಸಣೆ ಮಾಡಿದಾಗ, ನಕಲಿ ದಾಖಲೆ ಪತ್ರಗಳು ಹಾಗೂ ಆಧಾರ್ ಕಾರ್ಡ್ ಪತ್ತೆಯಾಗಿವೆ. ಆರೋಪಿಯನ್ನು ಮೊಬೈಲ್ ಕಂಪನಿ ಕಚೇರಿಯಿಂದ ವಶಕ್ಕೆ ಪಡೆದಾಗ, ಅವನ ನಿಜವಾದ ಗುರುತು ಮತ್ತು ಹೆಸರು ಪತ್ತೆಯಾಗಿದೆ. ಆರೋಪಿ ಭಿಲ್ವಾರದ ಪಂಚವಟಿಯಲ್ಲಿ ಮನೀಶ್ ಎಂಬ ಹೆಸರಿನಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆದಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

Leave A Reply