ಸೊಳ್ಳೆಗಳ ಮೂಲಕ ಕಳ್ಳನನ್ನು ಪತ್ತೆ ಹಚ್ಚಿದ ಪೊಲೀಸರು !

ಚೀನಾದ ಪೊಲೀಸರು ಫೌಂಗ್ಜು ಪ್ರಾಂತ್ಯದಲ್ಲಿನ ಫ್ಲಾಟ್ ಒಂದರಲ್ಲಿ ಕಳತನ ಮಾಡಿದ್ದವನನ್ನು ಪತ್ತೆಹಚ್ಚಲು ಎರಡು ಸೊಳ್ಳೆಗಳು ನೆರವಾಗಿವೆ!

 

ಕಳ್ಳನೊಬ್ಬ ಬೀಗ ಹಾಕಿದ್ದ ಫ್ಲಾಟ್‌ನೊಳಕ್ಕೆ ನುಗ್ಗಿ ಬೇಕಾದ್ದನ್ನು ದೋಚಿ, ಒಂದು ರಾತ್ರಿಯನ್ನು ಅಲ್ಲೇ ಕಳೆದಿದ್ದ, ಆ ಸಂದರ್ಭದಲ್ಲಿ ಆತನನ್ನು ಕಚ್ಚಿದ ಎರಡು ಸೊಳ್ಳೆಗಳನ್ನು ಅವು ಫ್ಲಾಟ್‌ನ ಹಾಲ್‌ನಲ್ಲಿರುವ ಗೋಡೆಯ ಮೇಲೆ ಹೋಗಿ ಕೂತಿದ್ದಾಗ ಅದನ್ನೂ ಸಾಯಿಸಿದ್ದ ಅಷ್ಟೇ.

ಅದೇ ಪೊಲೀಸರಿಗೆ ಆತನ ರಕ್ತದ ಡಿಎನ್‌ಎ ಮಾದರಿ ಸಿಗುವಂತೆ ಮಾಡಿತು. ಆದರ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು 19 ದಿನಗಳ ನಂತರ ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Leave A Reply

Your email address will not be published.