ನವೋದಯ ವಿದ್ಯಾಲಯದಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ – 1616, ಅರ್ಜಿ ಸಲ್ಲಿಸಲು ನಾಳೆಯೇ ಕೊನೆದಿನ
ಕೇಂದ್ರ ಸರ್ಕಾರದ ಅಡಿಯಲ್ಲಿ ಶಿಕ್ಷಕ ವೃತ್ತಿಯಲ್ಲಿ ಕೆಲಸ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದ್ದು, ಪ್ರಸಕ್ತ ಸಾಲಿನ ಹುದ್ದೆಗಳ ಭರ್ತಿಗೆ ನವೋದಯ ವಿದ್ಯಾಲಯ ಸಮಿತಿ ಮುಂದಾಗಿದೆ. ಪ್ರಾಂಶುಪಾಲರು, ಮ್ಯೂಸಿಕ್ ಟೀಚರ್, ಪ್ರೋಸ್ಟ್ ಗ್ರಾಜುಯೇಟ್ ಟೀಚರ್, ಟ್ರೈನ್ಡ್ ಗ್ರಾಜುಯೇಟ್ ಟೀಚರ್, ಇತರೆ ಹಲವು ಗ್ರೂಪ್ ಬಿ ಬೋಧಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಸಂಸ್ಥೆಯ ಹೆಸರು: ನವೋದಯ ವಿದ್ಯಾಲಯ ಸಮಿತಿ (NVS)
ಹುದ್ದೆಗಳ ಸಂಖ್ಯೆ: 1616
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಪಿಜಿಟಿ, ಟಿಜಿಟಿ
ವೇತನ: 44900-209200 ರೂ. ಪ್ರತಿ ತಿಂಗಳು
ಹುದ್ದೆ , ಹುದ್ದೆ ಸಂಖ್ಯೆ, ವಿದ್ಯಾರ್ಹತೆ , ವಯೋಮಿತಿ:
ಪ್ರಾಂಶುಪಾಲರು, 12, ಸ್ನಾತಕೋತ್ತರ ಪದವಿ, ಬಿಎಡ್ 50 ವರ್ಷ
ಪಿಜಿಟಿ, 397, ಸ್ನಾತಕೋತ್ತರ ಪದವಿ, ಬಿಎಡ್ 40 ವರ್ಷ
ಟಿಜಿಟಿ, 683, ಪದವಿ, ಬಿಎಸ್ಸಿ ಬಿಎಡ್ 35 ವರ್ಷ
ಟಿಜಿಟಿ (ತೃತೀಯ ಭಾಷೆ) 343 ಪದವಿ, ಬಿಎಡ್ 35 ವರ್ಷ
ಸಂಗೀತ ಶಿಕ್ಷಕ, 33 ಪದವಿ, ಸಂಗೀತದಲ್ಲಿ ಸ್ನಾತಕೋತ್ತರ ಪದವಿ 35 ವರ್ಷ
ಕಲಾ ಶಿಕ್ಷಕ, 43 ಡಿಪ್ಲೊಮಾ, ಫೈನ್ ಆರ್ಟ್ಸ್ನಲ್ಲಿ ಬಿಎಡ್, ಕ್ರಾಫ್ಟ್ 35 ವರ್ಷ
ಪಿಇಟಿ ಪುರುಷ, 21 , ಡಿಪ್ಲೊಮಾ, ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ 35 ವರ್ಷ
ಪಿಇಟಿ ಸ್ತ್ರೀ , 31 , ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ 35 ವರ್ಷ
ಗ್ರಂಥಪಾಲಕ, 53 , ಲೈಬ್ರರಿ ಸೈನ್ಸ್ನಲ್ಲಿ ಪದವಿ, ಡಿಪ್ಲೊಮಾ, ಪದವಿ 35 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು: 05 ವರ್ಷಗಳು
ವಿಕಲಚೇತನ (ಸಾಮಾನ್ಯ)/ಮಹಿಳಾ ಅಭ್ಯರ್ಥಿಗಳು: 10 ವರ್ಷಗಳು
ವಿಕಲ ಚೇತನ ಒಬಿಸಿ ಅಭ್ಯರ್ಥಿಗಳು: 13 ವರ್ಷಗಳು
ವಿಕಲಚೇತನ (ಪ.ಜಾ, ಪ.ಪಂ) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
ಪ.ಜಾ, ಪ.ಪಂ ಮತ್ತು ಒಬಿಸಿ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಪ್ರಧಾನ ಹುದ್ದೆ: ಎಲ್ಲಾ ಇತರ ಅಭ್ಯರ್ಥಿಗಳು: 2000 ರೂ
ಪಿಜಿಟಿ ಹುದ್ದೆ: ಎಲ್ಲಾ ಇತರ ಅಭ್ಯರ್ಥಿಗಳು: 1800 ರೂ
ಟಿಜಿಟಿ, ಸಂಗೀತ/ಕಲಾ ಶಿಕ್ಷಕ,ಪಿಇಟಿ ಗ್ರಂಥಪಾಲಕ ಹುದ್ದೆಗಳು:
ಎಲ್ಲಾ ಇತರ ಅಭ್ಯರ್ಥಿಗಳು: 1500 ರೂ.
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ, ವೈಯಕ್ತಿಕ ಸಂವಹನ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02 ಜುಲೈ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 22 ಜುಲೈ 2022
ಅರ್ಜಿ ಸಲ್ಲಿಕೆ ವಿಧಾನ:
*ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
*ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
*ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
*ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: navodaya.gov.in