ಭಾರತದ ರಾಷ್ಟ್ರಪತಿಗಳ ಸಂಬಳ ಎಷ್ಟು? ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆಯಾಗಿರುತ್ತಾರೆ. ಅದರಂತೆ ಅವರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಜತೆಗೆ ಸಕಲ ಸವಲತ್ತುಗಳು ಕೂಡಾ ಅವರಿಗೆ ದೊರೆಯುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ ಸ್ಥಾನ ಕೂಡಾ ಇವರೇ ಆಗಿರುತ್ತಾರೆ. ರಾಷ್ಟ್ರಪತಿಗಳೂ ಸಂವಿದಾನದ ಮುಖ್ಯಸ್ಥರೂ, ಕಾರ್ಯಾಂಗದ ಮುಖ್ಯಸ್ಥರೂ, ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು, ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗ. ಅಲ್ಲದೆ ಸಂವಿಧಾನದ ರಕ್ಷಕರು ಕೂಡಾ. ಭಾರತೀಯ ಸಂವಿಧಾನದ 52 ನೇ ಪರಿಚ್ಛೇದದಲ್ಲಿ ರಾಷ್ಟ್ರಪತಿ ಪದವಿಯ ಬಗ್ಗೆ ತಿಳಿಸಲಾಗಿದೆ. ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಭಾರತದ ಅಧ್ಯಕ್ಷರಾಗಿರುತ್ತಾರೆ.

ಇವು ಭಾರತದ ರಾಷ್ಟ್ರಪತಿಗಳಿಗೆ ಇರುವ ಸೌಲಭ್ಯಗಳು:


Ad Widget

Ad Widget

Ad Widget

Ad Widget

Ad Widget

Ad Widget

ರಾಷ್ಟ್ರಪತಿಗಳ ವೇತನ ತಿಂಗಳಿಗೆ ಸುಮಾರು 5 ಲಕ್ಷ ರೂಪಾಯಿ. ಉಚಿತ ವೈದ್ಯಕೀಯ, ವಸತಿ ಮತ್ತು ಚಿಕಿತ್ಸಾ ಸೌಲಭ್ಯ (ಇಡೀ ಜೀವನ) ಸೇರಿದಂತೆ ಇತರೆ ಭತ್ಯೆಗಳನ್ನು
ನೀಡಲಾಗುತ್ತದೆ. ಭಾರತದ ರಾಷ್ಟ್ರಪತಿ ಮತ್ತು ಅವರ ಪತ್ನಿ ವಿಶ್ವದ ಯಾವುದೇ ಭಾಗಕ್ಕೆ ಉಚಿತವಾಗಿ ಪ್ರಯಾಣಿಸಬಹುದು. ಅಧ್ಯಕ್ಷರು ಐದು ಜನರ ಕಾರ್ಯದರ್ಶಿ ಸಿಬ್ಬಂದಿಯನ್ನು ಹೊಂದಿದ್ದಾರೆ. ಇದಲ್ಲದೆ, ರಾಷ್ಟ್ರಪತಿ ಭವನದ ಮೇಲ್ವಿಚಾರಣೆಯಲ್ಲಿ 200 ಜನರು ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ.

ಪ್ರಥಮ ಪ್ರಜೆಯ ವಾಸ ಭವ್ಯ ನಿವಾಸದಲ್ಲಿ ಏನಿದೆ ?

ರಾಷ್ಟ್ರಪತಿ ಭವನ ಸುಮಾರು 330 ಎಕೆರೆ ಜಾಗದಲ್ಲಿ ಬರೋಬ್ಬರಿ 340 ಕೊಠಡಿಗಳಿವೆ. ಈ ಪೈಕಿ 63 ಲಿವಿಂಗ್ ರೂಮ್‌ಗಳಾಗಿವೆ. ಸ್ವಾಗತ ಕೊಠಡಿಗಳು, ವಸತಿ ಗೃಹಗಳು, ಕಚೇರಿಗಳು ಇವೆ. ಇದರಲ್ಲಿ ಸುಂದರ ಉದ್ಯಾನವನ, ಬಯಲು, ಅಂಗರಕ್ಷಕರು ಮತ್ತು ಸಿಬ್ಬಂದಿ ವಸತಿ ಗೃಹಗಳು ಸೇರಿದಂತೆ ಹಲವು ಸೌಕರ್ಯಗಳು ಇವೆ. ರಾಷ್ಟ್ರಪತಿಗಳ ಸೇವೆಗಾಗಿ ಮತ್ತು ನಿರ್ವಹಣೆಗಾಗಿ 200 ಸಿಬ್ಬಂದಿಗಳಿದ್ದಾರೆ.

ರಾಷ್ಟ್ರಪತಿಗಳ ವೇತನ : ಭಾರತದಲ್ಲಿ ಅತಿ ಹೆಚ್ಚು ವೇತನ ಪಡೆಯುವ ವ್ಯಕ್ತಿ ರಾಷ್ಟ್ರಪತಿಗಳು. ಅವರಿಗೆ ಪ್ರತಿ ತಿಂಗಳಿಗೆ ಐದು ಲಕ್ಷ ವೇತನ ನೀಡಲಾಗುತ್ತದೆ. 2018 ರಲ್ಲಿ ರಾಷ್ಟ್ರಪತಿ ವೇತನವನ್ನು 1.50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು. 1998 ಕ್ಕೂ ಮೊದಲು ರಾಷ್ಟ್ರಪತಿಗಳಿಗೆ ರೂ.10,000 ವೇತನ ನೀಡಲಾಗುತ್ತಿತ್ತು. 1998ರಲ್ಲಿ ಈ ಮೊತ್ತವನ್ನು 50,000ಕ್ಕೆ ಹೆಚ್ಚಿಸಲಾಯಿತು. ರಾಷ್ಟ್ರಪತಿಗಳು ವೇತನದ ಜೊತೆಗೆ ಹಲವು ಭತ್ಯೆಗಳನ್ನೂ ಸಹ ಸಿಗುತ್ತವೆ.

ವೈದ್ಯಕೀಯ ಮತ್ತು ಇತರೇ ಸೌಲಭ್ಯ : ಭಾರತದ ರಾಷ್ಟ್ರಪತಿಗಳು ಇಡೀ ಜೀವನ ಪರ್ಯಂತ ಉಚಿತ ವೈದ್ಯಕೀಯ ಸೇವೆಗಳಿಗೆ ಅರ್ಹರಾಗಿದ್ದಾರೆ. ಇವರ ಭದ್ರತೆಗಾಗಿ ಕಸ್ಟಮ್-ನಿರ್ಮಿತ ಕಪ್ಪು ಮರ್ಸಿಡಿಸ್ ಬೆಂಜ್ S600 (W221) ಪುಲ್‌ಮನ್ ಗಾರ್ಡ್ ನೀಡಲಾಗುತ್ತದೆ. ಅಧ್ಯಕ್ಷರು ಅಧಿಕೃತ ಭೇಟಿಗಳಿಗಾಗಿ ಹೆಚ್ಚು ಶಸ್ತ್ರಸಜ್ಜಿತ ಸ್ಟೆಚ್ ಲಿಮೋಸಿನ್ ಅನ್ನು ಹೊಂದಿದ್ದಾರೆ.

ಇನ್ನೂ ಎರಡು ಪ್ರತ್ಯೇಕ ನಿವಾಸ : ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಜೊತೆಗೆ ಇನ್ನೂ ಎರಡು ಪ್ರತ್ಯೇಕ ವಸತಿಗೃಹಗಳು ರಾಷ್ಟ್ರಪತಿಗಳಿಗಾಗಿ ಮೀಸಲಾಗಿರುತ್ತವೆ. ಈ ಪೈಕಿ ಒಂದು ಉತ್ತರ ಭಾರತದ ಶಿಮ್ಲಾದಲ್ಲಿದ್ದರೆ, ಮತ್ತೊಂದು ದಕ್ಷಿಣ ಭಾರತದ ಹೈದರಾಬಾದ್ ನಲ್ಲಿದೆ. ಶಿಷ್ಟಾಚಾರದಂತೆ ರಾಷ್ಟ್ರಪತಿಗಳು ಹೈದರಾಬಾದ್ ನಿವಾಸಕ್ಕೆ ವರ್ಷದಲ್ಲಿ ಕನಿಷ್ಠ ಒಮ್ಮೆಯಾದರು ಭೇಟಿ ನೀಡಿ ಅಲ್ಲಿಂದಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.

ನಿವೃತ್ತಿ ನಂತರ ಸೌಲಭ್ಯ: ರಾಷ್ಟ್ರಪತಿಗಳು ನಿವೃತ್ತರಾದ ಬಳಿಕ ತಿಂಗಳಿಗೆ 1.5 ಲಕ್ಷ ಪಿಂಚಣಿ ದೊರೆಯುತ್ತದೆ. ಅಧ್ಯಕ್ಷರ ಸಂಗಾತಿಗಳು ಕಾರ್ಯದರ್ಶಿಗೆ ಪಿಂಚಣಿಯಾಗಿ ತಿಂಗಳಿಗೆ 30,000 ರೂಪಾಯಿ ನೀಡಲಾಗುತ್ತದೆ. ಜೊತೆಗೆ ಒಂದು ಸುಸಜ್ಜಿತ ಬಾಡಿಗೆ ಮುಕ್ತ ಬಂಗಲೆ, ಎರಡು ಉಚಿತ ಲ್ಯಾಂಡ್‌ಲೈನ್‌ಗಳು ಮತ್ತು ಮೊಬೈಲ್ ಫೋನ್, ಐದು ವೈಯಕ್ತಿಕ ಸಿಬ್ಬಂದಿ, ಸಿಬ್ಬಂದಿ ವೆಚ್ಚಗಳು ವರ್ಷಕ್ಕೆ 60,000 ರೂ. ಹಾಗೂ ರೈಲು ಅಥವಾ ವಿಮಾನದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ.

ಸಂವಿಧಾನದ 61 ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು.

error: Content is protected !!
Scroll to Top
%d bloggers like this: