ಬೆಳ್ಳಾರೆ ಮಸೀದಿಯಲ್ಲಿ ನಡೆಯಲಿದೆ ಮೃತ ಮಸೂದ್ ದಫನ ಕಾರ್ಯ | ಬೆಳ್ಳಾರೆ ಸುತ್ತ ಮುತ್ತ, ಸವಣೂರಿನಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ !!!

Share the Article

ಬೆಳ್ಳಾರೆ : ಕ್ಷುಲಕ ಕಾರಣ ವಿಚಾರವಾಗಿ ತಂಡದಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕ ಮಸೂದ್ ಅವರ ದಫನ‌ ಕಾರ್ಯ ಬೆಳ್ಳಾರೆ ಝಕಾರಿಯ ಮಸೀದಿಯಲ್ಲಿ ನಡೆಯಲಿದೆ.

ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕನ ಮೃತದೇಹವನ್ನು ಕೆಲ ಕಾಲ ಹೊರತೆಗೆಯಲು ಅವಕಾಶ ನೀಡಿಲ್ಲ.ಮೃತ ಯುವಕನ ಕುಟುಂಬಕ್ಕೆ ಪರಿಹಾರ ದೊರಕಿಸಬೇಕು ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ದೊರಕಿಸಿ ಕೊಡುವ ಎಂದು ಭರವಸೆ ನೀಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಬಂದ ನಂತರ ಮೃತದೇಹವನ್ನು ಪೋಸ್ಟ್ ಮಾಟಂ ಗಾಗಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಯಿತು.

ಆಸ್ಪತ್ರೆ ಬಳಿ ಇನ್ನೂರಕ್ಕಿಂತಲೂ ಅಧಿಕ ಮಂದಿ ಜಮಾಯಿಸಿದ್ದರು.ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಕಾರ್ಯ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮೃತ ದೇಹ 12.30 ಗಂಟೆ ರಾತ್ರಿ ಗೆ ಬೆಳ್ಳಾರೆಗೆ ತಲುಪಿ ,ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬೆಳ್ಳಾರೆ ಸುತ್ತ ಮುತ್ತ ಹಾಗೂ ಸವಣೂರಿನಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Leave A Reply