ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮನೀಡಿದ ಮಹಿಳೆ! – ಹೃದಯವಿದ್ರಾಯಕ ವೀಡಿಯೋ ವೈರಲ್

0 14

ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷದಿಂದ ಅದೆಷ್ಟೋ ರೋಗಿಗಳು ನರಳಾಡಿದಂತಹ, ನವಜಾತ ಶಿಶುಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಸಾವನ್ನಪ್ಪಿದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಅದೇ ಪ್ರಕರಣಕ್ಕೆ ಸೇರಿದಂತೆ ಮನಕಲಕುವ ಘಟನೆಯೊಂದು ನಡೆದಿದೆ.

ಹೌದು. 30 ವರ್ಷದ ಮಹಿಳೆಯೊಬ್ಬರು ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವಂತಹ ಘಟನೆ ನಡೆದಿದ್ದು, ಇದೀಗ ಈ ಘಟನೆಯ ವೀಡಿಯೊ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯು ಸೋಮವಾರ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ, ರಾತ್ರಿಯಿಡಿ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ ಕಳೆದಿದ್ದಾರೆ. ಈ ವೇಳೆ  ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಕೆಲವು ದಾದಿಯರು ಸೇರಿದಂತೆ ಮಹಿಳೆಯರು ಗರ್ಭಿಣಿ ಮಹಿಳೆಯ ಹೆರಿಗೆಯ ಸಮಯದಲ್ಲಿ ಸುತ್ತಲೂ ಸೀರೆಯೊಂದಿಗೆ ನಿಂತಿದ್ದಾರೆ.

ಈ ವಿಚಾರದಿಂದ ಕೋಪಗೊಂಡ ಸಂಬಂಧಿಕರು, ಮಹಿಳೆ ಇಡೀ ರಾತ್ರಿ ಆಸ್ಪತ್ರೆಯ ಹೊರಗೆ ನೋವಿನಿಂದ ನರಳುತ್ತಿದ್ದಳು. ಆದರೂ ಕೂಡಾ ಆಸ್ಪತ್ರೆಯವರು ಅವಳನ್ನು ದಾಖಲಿಸಲಿಲ್ಲ ಎಂದು ಆರೋಪಿಸಿದರು.

ಆರೋಪಗಳ ಪ್ರಕಾರ, “ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ, ಅವಳು ಆಸ್ಪತ್ರೆಯ ಆವರಣದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ” ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ಐಎಎನ್ಎಸ್ಗೆ ತಿಳಿಸಿದ್ದಾರೆ.

‘ಈಗ ಮಹಿಳೆ ಮತ್ತು ಮಗು  ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯವಾಗಿದ್ದಾರೆ. ಸ್ತ್ರೀರೋಗ ವಿಭಾಗದ ಹಿರಿಯ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ .ಆಸ್ಪತ್ರೆಯ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಪ್ರಸ್ತುತ ವಿಷಯದಲ್ಲಿ ನಮಗೆ ಯಾವುದೇ ದೂರು ಬಂದಿಲ್ಲ’ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಸಹ ಆಸ್ಪತ್ರೆಗೆ ನೋಟಿಸ್ ನೀಡಿದ್ದು, ಜುಲೈ 25 ರೊಳಗೆ ಈ ಬಗ್ಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಕೋರಿದೆ. ಒಟ್ಟಾರೆ, ಆಸ್ಪತ್ರೆಯ ನಿರ್ಲಕ್ಷದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಕ್ಕೂ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋಗುವುದರಲ್ಲಿ ಸಂಶಯವಿಲ್ಲ. ಇನ್ನು, ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೆ ಇರಲು ಕಾರಣ ಏನೆಂಬುದು ವರದಿಯಾಗಿಲ್ಲ.

Leave A Reply