ಜಗತ್ತನ್ನೇ ತಲ್ಲಣಗೊಳಿಸಲಿದೆ ನಾಸ್ಟ್ರಾಡಾಮಸ್‌ನ 2022ರ ಭವಿಷ್ಯವಾಣಿ!!

ಖ್ಯಾತ ಫ್ರೆಂಚ್‌ ಜ್ಯೋತಿಷಿ, ಭೌತಜ್ಞಾನಿ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ಅತ್ಯಂತ ಜನಪ್ರಿಯ. ‘ಲೆಸ್‌ ಪ್ರೊಫೆಟಿಸ್’ ಎಂಬುದು ಆತ ಬರೆದ ಪುಸ್ತಕವಾಗಿದ್ದು, ಇದು 1555ರಲ್ಲಿ ಪ್ರಕಟವಾಗಿದೆ. ಅದರಲ್ಲಿ ವಿಶ್ವದಲ್ಲಿ ಮುಂದೆ ಏನಾಗಲಿದೆ ಎಂಬ ಭವಿಷ್ಯವಾಣಿಗಳು ಇದ್ದು, ಯುದ್ಧಗಳು, ಸೋಕು ರೋಗಗಳು, ಅಣ್ವಸ್ತ್ರ ದಾಳಿಗಳು, ರಾಷ್ಟ್ರನಾಯಕರ ಹತ್ಯೆ, ಕ್ರಾಂತಿಗಳೆಲ್ಲದರ ಬಗ್ಗೆ ಅದರಲ್ಲಿ ಹೇಳಿದ್ದಾನೆ. ಈ ಪುಸ್ತಕದಲ್ಲಿ ಒಟ್ಟು 6338 ಭವಿಷ್ಯವಾಣಿಗಳು ಇದ್ದು, 2022ರಲ್ಲಿ ವಿಶ್ವದಲ್ಲಿ ನಡೆಯಲಿರುವ ಹಲವಾರು ಪ್ರಮುಖ ಸಂಗತಿಗಳ ಬಗ್ಗೆ ಜ್ಯೋತಿಷಿ ನಾಸ್ಟ್ರಾಡಾಮಸ್‌ ಮುನ್ಸೂಚನೆ ನೀಡಿದ್ದಾರೆ.

2022ರ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ ಜಗತ್ತನ್ನೇ ತಲ್ಲಣಗೊಳಿಸುವಂತಿದೆ. ವಿಶ್ವದ ಶ್ರೇಷ್ಠ ಪ್ರವಾದಿಯಾದ ನಾಸ್ಟ್ರಾಡಾಮಸ್ ತನ್ನ ಭವಿಷ್ಯಗಳಿಂದಲೇ ಪ್ರಖ್ಯಾತಿಯಾಗಿದ್ದಾನೆ. ಹಿಟ್ಲರನ ಆಳ್ವಿಕೆ, ವಿಶ್ವ ಸಮರ II, 9/11 ದಾಳಿಗಳು ಮತ್ತು ಫ್ರೆಂಚ್ ಕ್ರಾಂತಿ ಸೇರಿದಂತೆ ಅವರು ನುಡಿದ ಭವಿಷ್ಯವಾಣಿಗಳ ಪೈಕಿ ಶೇ.85ರಷ್ಟು ನಿಜವಾಗಿದೆ. ಭಯಾನಕ ಭವಿಷ್ಯ ಹೇಳಿದ್ದ ನಾಸ್ಟ್ರಾಡಾಮಸ್ ಜರ್ಮನಿಯಲ್ಲಿ 14 ಡಿಸೆಂಬರ್ 1503ರಂದು ಜನಿಸಿದರು ಮತ್ತು 2 ಜುಲೈ 1566ರಂದು ನಿಧನರಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

2022ರ ವರ್ಷಕ್ಕೆ ಸಂಬಂಧಿಸಿದಂತೆ ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ ಈ ವರ್ಷದಲ್ಲಿ ಪರಮಾಣು ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದಾನೆ. ಇದರಿಂದಾಗಿ ಹವಾಮಾನ ವೈಪರಿತ್ಯವಾಗಲಿದ್ದು, ಅಣುಬಾಂಬ್ ಸ್ಫೋಟದಿಂದ ಭೂಮಿಯ ಸ್ಥಿತಿಯೂ ಬದಲಾಗಬಹುದು ಎನ್ನಲಾಗಿದೆ.

ನಾಸ್ಟ್ರಾಡಾಮಸ್ 500 ವರ್ಷಗಳ ಹಿಂದೆ 2022ರ ಹಣದುಬ್ಬರದ ಸಮಸ್ಯೆ ಬಗ್ಗೆ ಊಹಿಸಿದ್ದರು. ನಾಸ್ಟ್ರಾಡಾಮಸ್ ಭವಿಷ್ಯ ನುಡಿದಂತೆ ಈ ವರ್ಷ ಹಣದುಬ್ಬರ ನಿಯಂತ್ರಣಕ್ಕೆ ಬರುವುದಿಲ್ಲ. ಇದಲ್ಲದೇ ಅಮೆರಿಕದ ಡಾಲರ್ ಮೌಲ್ಯವೂ ತೀವ್ರವಾಗಿ ಕುಸಿಯಲಿದೆ. ಇದರೊಂದಿಗೆ 2022ರಲ್ಲಿ ಜನರು ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್‌ನಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ನಾಸ್ಟ್ರಾಡಾಮಸ್ ಭವಿಷ್ಯವಾಣಿಯ ಪ್ರಕಾರ, 2022ರಲ್ಲಿ ಕ್ಷುದ್ರಗ್ರಹವು ಭೂಮಿಗೆ ಭಾರೀ ಹಾನಿಯನ್ನುಂಟುಮಾಡುತ್ತದಂತೆ. ಒಂದು ದೊಡ್ಡ ಬಂಡೆಯು ಸಮುದ್ರಕ್ಕೆ ಬೀಳುತ್ತದೆ ಎಂದು ನಾಸ್ಟ್ರಾಡಾಮಸ್ ಹೇಳಿದ್ದಾನೆ. ಇದರಿಂದಾಗಿ ಭೀಕರ ಅಲೆಗಳು ಏಳುತ್ತವೆ ಮತ್ತು ಎಲ್ಲಾ ಕಡೆಯಿಂದ ಭೂಮಿಯನ್ನು ಸುತ್ತುವರೆಯುತ್ತವೆ. ಈ ವೇಳೆ ಸಮುದ್ರದ ನೀರು ಭೂಮಿಗೆ ದೊಡ್ಡ ಹಾನಿ ಉಂಟುಮಾಡುತ್ತದೆ.

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯ ಪ್ರಕಾರ, ಈ ವರ್ಷ ಫ್ರಾನ್ಸ್‌ನಲ್ಲಿ ದೊಡ್ಡ ಚಂಡಮಾರುತವಿರುತ್ತದೆ. ಇದರಿಂದಾಗಿ ಪ್ರಪಂಚದ ಅನೇಕ ಭಾಗಗಳು ತೀವ್ರ ಸಮಸ್ಯೆಗಳ ಜೊತೆಗೆ ಬರ ಮತ್ತು ಪ್ರವಾಹ ಪರಿಸ್ಥಿತಿಗಳನ್ನು ಎದುರಿಸಬಹುದು.

2022ರಲ್ಲಿ ಬೃಹತ್ ವಿನಾಶದ ನಂತರ ಶಾಂತಿ ಬರುತ್ತದೆ ಎಂದು ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ ಹೇಳಿದ್ದಾನೆ. ಆದರೆ ಈ ಶಾಂತಿಯ ಮೊದಲು ಇಡೀ ಜಗತ್ತು 3 ದಿನಗಳು ಅಂದರೆ 72 ಗಂಟೆಗಳ ಕಾಲ ಕತ್ತಲೆಯಲ್ಲಿರುತ್ತದಂತೆ.

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯ ಪ್ರಕಾರ, 2022ರಲ್ಲಿ ಕೃತಕ ಬುದ್ಧಿಮತ್ತೆಯು ಮಾನವಕುಲದ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ವೈಯಕ್ತಿಕ ಕಂಪ್ಯೂಟರ್‌ನ ಮೆದುಳು ಮನುಷ್ಯರನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಅಲ್ಲದೆ ರೋಬೋಟ್‌ಗಳು ಮಾನವ ಜನಾಂಗವನ್ನು ನಾಶಮಾಡುತ್ತವಂತೆ.

error: Content is protected !!
Scroll to Top
%d bloggers like this: