Big News | ಗೋಮೂತ್ರವನ್ನು ಲೀಟರ್‌ ಗೆ 4 ರೂ.ಗೆ ಖರೀದಿಗೆ ಮುಂದಾದ ಸರ್ಕಾರ, ಹಾಲಿಗಿಂತ ಗೋಮೂತ್ರದಿಂದಲೇ ಜಾಸ್ತಿ ಗಳಿಸಲಿದ್ದಾರೆ ರೈತರು !!

ರೈತರು ಹೆಚ್ಚಿನ ಆದಾಯ ಗಳಿಸುವಂತೆ ಮಾಡಿ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಮೂತ್ರವನ್ನು ಖರೀದಿಸಲು ಈ ಸರ್ಕಾರ ಯೋಜನೆ ರೂಪಿಸಿದೆ. ಇನ್ನು ಮುಂದೆ ಹಾಲಿಗಿಂತ ಗೋಮೂತ್ರ ಮಾರಿ ಹೆಚ್ಚು ದುಡ್ಡು ಸಂಪಾದಿಸಲಿದ್ದಾರೆ ರೈತಾಪಿ ವರ್ಗ.

 

ಪ್ರತಿ ಲೀಟರ್‌ಗೆ 4 ರೂ. ದರದಲ್ಲಿ ಗೋಮೂತ್ರ ಖರೀದಿಸಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ ಸುಸ್ಥಿರ ಗೋಸಂರಕ್ಷಣೆ ಉತ್ತೇಜಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಛತ್ತೀಸಗಡದ ಕಾಂಗ್ರೆಸ್‌ ಸರ್ಕಾರ ತಿಳಿಸಿದೆ.

ʼಗೋದಾನ ನ್ಯಾಯ ಯೋಜನೆʼ ಅಂಗವಾಗಿ, ಜುಲೈ 28 ರಂದು ನಡೆಯಲಿರುವ ‘ಹರೇಲಿ ತಿಹಾರ್’ ಹಬ್ಬದ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು. ನಮ್ಮ ಸರ್ಕಾರವು ಗೋದಾನ್‌ ನ್ಯಾಯ ಯೋಜನೆಯಡಿ ಗೋಮೂತ್ರ ಖರೀದಿ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಹೇಳಿದೆ. ಗೋದಾನ್ ನ್ಯಾಯ ಮಿಷನ್ ನಿರ್ದೇಶಕ ಅಯ್ಯಾಜ್ ತಾಂಬೋಳಿ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿರುವ ಗೋಶಾಲೆಗಳು ಗೋಮೂತ್ರ ಖರೀದಿಸಲಿವೆ. ಆಯಾ ಜಿಲ್ಲೆಯ ರೈತರು ಸಂಗ್ರಹಿಸಿ ಗೋಮೂತ್ರವನ್ನು ಈ ಗೋಠಾಣೆಗಳಿಗೆ ತಂದು ನೀಡಬೇಕು. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳಿಂದ ಗೋಮೂತ್ರ ಖರೀದಿಗೆ ಕನಿಷ್ಠ ಬೆಲೆ ಲೀಟರ್‌ಗೆ 4 ರೂ.ಗೆ ಪ್ರಸ್ತಾವಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಗೆ ಜನರಿಂದ ಸಂಗ್ರಹಿಸಿದ ಗೋಮೂತ್ರವನ್ನು ಸ್ವ-ಸಹಾಯ ಮಹಿಳಾ ಗುಂಪುಗಳ ಸಹಾಯದಿಂದ ಕೀಟ ನಿಯಂತ್ರಣ ಉತ್ಪನ್ನಗಳು ಮತ್ತು ನೈಸರ್ಗಿಕ ದ್ರವ ಗೊಬ್ಬರವನ್ನು ತಯಾರಿಸಲು ಬಳಸಲಾಗುತ್ತದೆ. ಇದರಿಂದ ಬೇಸಾಯದಲ್ಲಿ ರಸಗೊಬ್ಬರದ ವೆಚ್ಚ ಮತ್ತು ಹೊಲಗಳಲ್ಲಿ ದ್ರವ ಗೊಬ್ಬರಗಳ ಬಳಕೆ ಕಡಿಮೆಯಾಗುತ್ತದೆ.

Leave A Reply

Your email address will not be published.