ಚರಂಡಿಗೆ ಸೈಕಲ್ ಬಿದ್ದು ಬಾಲಕ ಸಾವು!

Share the Article

ಕೇರಳ: ಚರಂಡಿಗೆ ಸೈಕಲ್ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಕಲ್ಲಿಕೋಟೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಚೆರುವನ್ನೂರಿನ ಮುಹಮ್ಮದ್ ಮಿರ್ಶಾದ್ (13) ಎಂದು ಗುರುತಿಸಲಾಗಿದೆ.

ಬಾಲಕ ಸೈಕಲ್ ನಲ್ಲಿ ತೆರಳುತ್ತಿದ್ದಾಗ, ಸೈಕಲ್ ಆಕಸ್ಮಿಕವಾಗಿ ಮನೆಯ ಬಳಿ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದಿದೆ. ಬಳಿಕ ಮನೆಯವರು ಬಾಲಕ ವಾಪಸ್ ಬಾರದೇ ಇದ್ದುದನ್ನು ಗಮನಿಸಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಸಮೀಪದ ಸಿಸಿಟಿವಿಯಲ್ಲಿ ಬಾಲಕ ಚರಂಡಿಗೆ ಬೀಳುವ ದೃಶ್ಯ ಸೆರೆಯಾಗಿದೆ.

ಬಳಿಕ ಬಾಲಕನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

Leave A Reply