ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್, ವಾಹನಗಳ ವಾಯುಮಾಲಿನ್ಯ ತಪಾಸಣೆ ದರ ಏರಿಕೆ!

ದುಬಾರಿ ಆಗುತ್ತಿದೆ ದುನಿಯಾ. ಸೋಮವಾರವಷ್ಟೇ GST ದರ ಏರಿಕೆಯಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಕಂಗೆಟ್ಟಿ ಹೋದ ಜನತೆಗೆ, ವಾಹನಗಳ ವಾಯು ಮಾಲಿನ್ಯ ತಪಾಸಣೆ ದರಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ.

 

ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತೀ ಆರು ತಿಂಗಳಿಗೊಮ್ಮೆ ವಾಹನದ ಹೊಗೆ ತಪಾಸಣೆ ಮಾಡುವುದು ಕಡ್ಡಾಯ. ಅತಿ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಆದರಿಂದ ಎಲ್ಲಾ ವಾಹನಗಳು ವಾಯು ಮಾಲಿನ್ಯ ತಪಾಸಣೆ ಮಾಡಿಸಬೇಕು.ಪೊಲೀಸ್ ತಪಾಸಣೆ ವೇಳೆ ವಾಹನ ಸವಾರರು ವಾಯು ಮಾಲಿನ್ಯ ತಪಾಸಣೆ ದಾಖಲೆಯನ್ನು  ತೋರಿಸಬೇಕು. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದ್ದು ಚಾಲಕರಿಗೆ ದೊಡ್ಡ ಹೊರೆಯಾಗಿದೆ.

“ಕೋವಿಡ್ ಬಳಿಕ ಆರ್ಥಿಕ ಚಟುವಟಿಕೆಗಳು ಚೇತರಿಕೆಯತ್ತ ಸಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಹೊಡೆತ ಜನರನ್ನು ಆರ್ಥಿಕವಾಗಿ ಕುಗ್ಗಿಸುತ್ತಿದೆ” ಎಂದು ಕ್ಯಾಬ್ ಚಾಲಕರು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

“ಬೆಲೆ ಏರಿಕೆ ಕುರಿತು ಅಧಿಕಾರಿಗಳು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳ ಎಮಿಷನ್ ಟೆಸ್ಟ್ ಮಾಡಿಸಬೇಕು. ದಿಢೀರ್ ಅಂತ ಬೆಲೆ ಏರಿಕೆ ಮಾಡಿದ್ದು ತಪ್ಪು. ಈ ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಾಹನಗಳ ತಪಾಸಣೆಯ ಹಳೆ ದರ ಮತ್ತು ಹೊಸ ದರ:
ದ್ವಿಚಕ್ರ ವಾಹನಗಳು 50 ರೂಪಾಯಿ , 65 ರೂಪಾಯಿ
ಕಾರ್ (ಪೆಟ್ರೋಲ್) 90 ರೂಪಾಯಿ, 115 ರೂಪಾಯಿ
ಕಾರ್ (ಡೀಸೆಲ್) 115 ರೂಪಾಯಿ, 160 ರೂಪಾಯಿ

ಕೆಎಂಎಫ್ ನಿಂದ ನೂತನ ದರ ಜಾರಿ ಮಾಡಲಾಗಿದೆ. ಹಾಲಿನ ಉತ್ಪನ್ನಗಳಾದ ಮೊಸರು, ಲಸ್ಸಿ, ಮಜ್ಜಿಗೆ ಬೆಲೆ ಮರುಪರಿಷ್ಕರಣೆ ಮಾಡಲಾಗಿದೆ. ನಿನ್ನೆ GST 5% ನಿಂದ ಮೂರು ಉತ್ಪನ್ನಗಳ‌ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಬೆಲೆ ಏರಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ, ಹಾಲಿನ ಉತ್ಪನ್ನಗಳ ಬೆಲೆಯಲ್ಲಿ  KMF ಮತ್ತೆ ದರದಲ್ಲಿ ಮರುಪರಿಷ್ಕರಣೆ ಮಾಡಿದೆ. 5% ಜಿಎಸ್​ಟಿ ಸೇರಿಸಿ ನೂತನ ದರ ಪಟ್ಟಿ ಬಿಡುಗಡೆ ಮಾಡಿದೆ.

ಮೊಸರು 200 ಎಂಎಲ್
ನಿನ್ನೆ- 10 ರೂಪಾಯಿ ಇಂದು , 12 ರೂಪಾಯಿ, ನಾಳೆಯಿಂದ – 10.50 ಪೈಸೆ

ಮೊಸರು 500 ಎಂಎಲ್
ನಿನ್ನೆ- 22 ರೂಪಾಯಿ, ಇಂದು – 24 ರೂಪಾಯಿ, ನಾಳೆಯಿಂದ- 23 ರೂಪಾಯಿ

ಒಂದು ಲೀಟರ್ ಮೊಸರು
ನಿನ್ನೆ 43 ರೂಪಾಯಿ, ಇಂದು- 46 ರೂಪಾಯಿ, ನಾಳೆಯಿಂದ- 45 ರೂಪಾಯಿ

ಮಜ್ಜಿಗೆ 200 ಎಂಎಲ್
ನಿನ್ನೆ- 7 ರೂಪಾಯಿ, ಇಂದು 8 ರೂಪಾಯಿ, ನಾಳೆಯಿಂದ- 7.50 ಪೈಸೆ

ಲಸ್ಸಿ 200 ಎಂಎಲ್
ನಿನ್ನೆ- 10 ರೂಪಾಯಿ, ಇಂದು 11 ರೂಪಾಯಿ, ನಾಳೆಯಿಂದ – 10.50 ಪೈಸೆ ಇರಲಿದೆ ಎಂದು KMF ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.