ಐಸ್ ಕ್ರೀಂ ಪೋಸ್ಟರನ್ನು ನೆಕ್ಕಿದ ಹಸಿದ ಶ್ವಾನ, ಹೃದಯಸ್ಪರ್ಶಿ Video Viral !

ಇಲ್ಲೊಂದು ವಿಡಿಯೋ ಹರಿದು ಬಂದಿದೆ. ಹಸಿವಿನ ಮಹತ್ವ ತಿಳಿಸುವ ಈ ವೀಡಿಯೋ ನೋಡಿದಾಗ, ಅಯ್ಯೋ ಪಾಪ ಅನ್ನಿಸದೇ ಇರದು.

ಈ ವಿಡಿಯೋ ನೋಡಿ. ನಾಯಿಯೊಂದು ಐಸ್ ಕ್ರೀಂನ ಪೋಸ್ಟರ್ ಅನ್ನು ನೆಕ್ಕುವುದರಲ್ಲಿ ನಿರತವಾಗಿದೆ. ಪೋಸ್ಟರ್ ನಲ್ಲಿ 3 ವಿವಿಧ ರೀತಿಯ ಐಸ್ ಕ್ರೀಮ್‌ಗಳು ಇವೆ. ಹಸಿವಿನ ಒಳಲುತ್ತಿದ್ದ ಈ ನಾಯಿ ಪೋಸ್ಟರ್‌ ಕಂಡು ಐಸ್ ಕ್ರೀಮ್ ಮತ್ತು ಸ್ಯಾಂಡ್‌ವಿಚ್ ಅನ್ನು ತಿನ್ನಲು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದಾಗ ಹತಾಶೆಯಿಂದ ನಾಯಿ ಹಲವು ಬಾರಿ ಜಾಹೀರಾತು ಫಲಕಕ್ಕೆ ಹೊಡೆದರೂ ಪ್ರಯೋಜನವಾಗಿಲ್ಲ ಎಂಬುವ ಹೃದಯ ಸ್ಪರ್ಶಿ ವಿಡಿಯೋ ನೋಡಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಬ್ಯುಟೆಂಗೆಬೀಡೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಪ್ರಾಣಿಗಳ ಹೃದಯಸ್ಪರ್ಶಿ ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ವೀಡಿಯೊಗೆ ಸರಳವಾಗಿ “ಬಡ ನಾಯಿ” ಎಂದು ಶೀರ್ಷಿಕೆ ನೀಡಲಾಗಿದೆ.

ವೀಡಿಯೊವು 5.2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ ಮತ್ತು 22,000 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಹೊಂದಿದೆ. ನಾಯಿಯ ಬಗ್ಗೆ ನೆಟ್ಟಿಗರು ಅನೇಕ ಕಮೆಂಟ್ಸ್‌ ಮಾಡಿದ್ದಾರೆ. ಹಸಿವಿನ ಮಹತ್ವ ತಿಳಿಸುವ ಈ ವೀಡಿಯೊ ಆಹಾರವನ್ನು ಮಿತವಾಗಿ ಬಯಸುವ ಪಾಠವನ್ನು ನಮಗೆ ತಿಳಿಸಿದೆ.

error: Content is protected !!
Scroll to Top
%d bloggers like this: