ರಸ್ತೆಬದಿಯಲ್ಲಿ ಯುವತಿಯರ “ಲಿಪ್ ಲಾಕ್” | ಕೋಪಗೊಂಡ ಸನ್ಯಾಸಿನಿ ಮಾಡಿದ್ದೇನು?

ಚುಂಬನ…ಇಬ್ಬರು ಹುಡುಗ ಹುಡುಗಿ ಮಧ್ಯೆ ನಡುವೆ ನಡೆಯೋ ಈ ಪ್ರೀತಿ ಕ್ರಿಯೆ ಬಟಾಬಯಲಾಗಿ ದಾರಿ ಮಧ್ಯೆ ನಡೆದರೆ ನೋಡಿದ ಜನ ಏನು ಹೇಳುತ್ತಾರೆ? ಅದೇ ಈ ವೈರಲ್ ವೀಡಿಯೋದಲ್ಲಿ ನಡೆದಿದೆ.

ಇಬ್ಬರು ಮಹಿಳೆಯರು ಬೀದಿಯಲ್ಲಿ ಚುಂಬಿಸುತ್ತಿದ್ದಾರೆ. ಅಲ್ಲಿಗೆ ಸನ್ಯಾಸಿನಿ ಓಡೋಡಿ ಬಂದು ಬೇರ್ಪಡಿಸುತ್ತಾರೆ. ಹೌದು ರಸ್ತೆ ಬದಿ ಇಬ್ಬರು ಯುವತಿಯರು ತಬ್ಬಿಕೊಂಡು ಲಿಪ್‌ಲಾಕ್ ಮಾಡಲು ಆರಂಭಿಸಿದಾಗ ವೃದ್ಧೆ ಸನ್ಯಾಸಿನಿಯ ಎಂಟ್ರಿ ಆಗಿಬಿಡುತ್ತದೆ, ನೀವು ಏನು ಮಾಡುತ್ತಿದ್ದೀರಿ? ಏನು ಮಾಡುತ್ತಿದ್ದೀರಿ ಎಂದು ಗದಿರುಸುತ್ತಾ ಪರಪಸ್ಪರ ಚುಂಬಿಸುತ್ತಿದ್ದ ಯುವತಿಯರನ್ನು ದೂರದೂರ ಮಾಡಿಯೇ ಬಿಡುತ್ತಾರೆ ಆ ವೃದ್ಧೆ ಸನ್ಯಾಸಿನಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಸಂಪೂರ್ಣ ಸುದ್ದಿ ಇಲ್ಲಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಟಿವಿ ಶೋ ಶೂಟಿಂಗ್‌ಗಾಗಿ ಇಬ್ಬರು ಮಹಿಳಾ ಮಾಡೆಲ್‌ಗಳು ಬೀದಿಯಲ್ಲಿ ಚುಂಬಿಸುತ್ತಿರುವಾಗ ಸನ್ಯಾಸಿನಿ ಬಂದು ಬೇರ್ಪಡಿಸಿದ್ದಾರೆ. ನೇಪಲ್ಸ್‌ನ ಸ್ಪ್ಯಾನಿಷ್ ಕ್ವಾರ್ಟ‌ರ್ ನಲ್ಲಿ ಮಾಡೆಲ್‌ಗಳಾದ ಸೆರೆನಾ ಡಿ ಫೆರಾರಿ ಮತ್ತು ಕಿಶನ್ ವಿಲ್ಸನ್ ಅವರು ನಟಿಸುತ್ತಿದ್ದ ಜಾಹೀರಾತಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದ್ದು, ದೃಶ್ಯವನ್ನು ಸೆರೆಹಿಡಿಯಲಾಗಿದೆ.

ಇಟಾಲಿಯನ್ ಶೋ ಚಿತ್ರೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಾಡೆಲ್ ಗಳಾದ ಸೆರೆನಾ ಡಿ ಫೆರಾರಿ ಮತ್ತು ಕಿಶನ್ ವಿಲ್ಸನ್ ರಸ್ತೆ ಪಕ್ಕದಲ್ಲಿ ನಿಂತುಕೊಂಡು ಲಿಪ್ ಲಾಕ್ ಮಾಡುತ್ತಿರುತ್ತಾರೆ. ಈ ವೇಳೆ ರಸ್ತೆ ಮೂಲಕ ಬರುತ್ತಿದ್ದ ಬಿಳಿ ಬಟ್ಟೆ ಧರಿಸಿದ್ದ ವೃದ್ಧೆ ಸನ್ಯಾಸಿನಿಯೊಬ್ಬರು ಕೋಪಗೊಂಡು ನೀವು ಏನು ಮಾಡುತ್ತಿದ್ದೀರಿ? ನೀವು ಏನು ಮಾಡುತ್ತಿದ್ದೀರಿ ಎಂದು ಹೇಳುತ್ತಾ ಲಿಪ್‌ಲಾಕ್ ಮಾಡುತ್ತಿದ್ದ ಯುವತಿಯರನ್ನು ಬೇರ್ಪಡಿಸಿ ಗದರಿಸಿದ್ದಾರೆ. ಈ ರೀತಿಯ ಸನ್ನಿವೇಶಗಳನ್ನು ಕಂಡು ಮಾಡೆಲ್‌ಗಳು ನಗುತ್ತಾರೆ. ಈ ಎಲ್ಲಾ ದೃಶ್ಯಾವಳಿಗಳನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಕೊರೋನಾ ವೈರಸ್ ಇರುವ ಕಾರಣವನ್ನು ಮುಂದಿಟ್ಟುಕೊಂಡು ವೃದ್ಧೆ ಸನ್ಯಾಸಿನಿ ದೂಷಿಸುತ್ತಿದ್ದರು.
ಶೂಟಿಂಗ್‌ಗೆ ಸನ್ಯಾಸಿನಿ ಅಡ್ಡಿಪಡಿಸಿದ ಸನ್ನಿವೇಶದ ದೃಶ್ಯಾವಳಿಯನ್ನು Redditನಲ್ಲಿ ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಅಪ್ಲೋಡ್ ಆಗಿ ವೈರಲ್ ಪಡೆದುಕೊಂಡಿದೆ.

error: Content is protected !!
Scroll to Top
%d bloggers like this: