ಬೆಳ್ತಂಗಡಿ : ತುಂಬಿದ ಬಸ್ಸಿನಿಂದ ಕೆಳಗೆ ಬಿದ್ದ ವಿದ್ಯಾರ್ಥಿ | ಆಸ್ಪತ್ರೆಗೆ ದಾಖಲು

ನಾಳ: ಖಾಸಗಿ ಬಸ್ಸೊಂದರಲ್ಲಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್ಸಿನಿಂದ ಕೆಳಗೆ ಬಿದ್ದು ವಿದ್ಯಾರ್ಥಿಯೋರ್ವ ಗಾಯಗೊಂಡಿರುವ ಘಟನೆ ಜು.19ರಂದು ನಾಳ ದೇವಸ್ಥಾನದ ಹತ್ತಿರ ನಡೆದಿದೆ.

ಮಳೆ ವಿಪರೀತ ಬರುತ್ತಿದ್ದರೂ ಕೂಡ ಇಷ್ಟೊಂದು ಪ್ರಯಾಣಿಕರನ್ನು ಈ ರೀತಿ ಬಸ್ಸಿನಲ್ಲಿ ಯಾಕೆ ತುಂಬಿಸಿಕೊಂಡು ಹೋಗುತ್ತಾರೆ. ಇದರ ಬಗ್ಗೆ ಸರ್ಕಾರ ನಮ್ಮ ಪೊಲೀಸ್ ರು ಯಾಕೆ ಸರಿಯಾದ ಕ್ರಮ ಕೈಕೊಳ್ಳುತ್ತಿಲ್ಲ. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಇಂತಹ ಅನಾಹುತ ನಡೆಯುತ್ತಲೇ ಇರುತ್ತದೆ.


Ad Widget

Ad Widget

Ad Widget

Ad Widget

Ad Widget

Ad Widget

ಪೊಲೀಸ್ ಉಳಿದ ವಾಹನಗಳನ್ನು ತಪಾಸಣೆ ಮಾಡುವುದು ಮಾತ್ರವಲ್ಲ ಬೆಳ್ಳಿಗೆ ಮತ್ತು ಸಂಜೆ ಹೊತ್ತು ಬಸ್ಸಿನಲ್ಲಿ ಈ ರೀತಿಯಲ್ಲಿ ಜನ ತುಂಬಿಸಿಕೊಳ್ಳದಂತೆ ಮತ್ತು ಬಸ್ಸಿನಲ್ಲಿ ಯಾರೂ ಕೂಡ ನೇತಾಡಿಕೊಂಡು ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶದಿಂದ ಹೇಳಿದ್ದಾರೆ.

ಈಗಾಗಲೇ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top
%d bloggers like this: