ಡಿಕೆಶಿ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣ | ಸಿಕ್ಕಿಬಿದ್ದ ಬಾಲಕ!!!

ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಪ್ರಕರಣದಲ್ಲಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸರು ಬಾಲಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ‌.

 

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಲೀಕತ್ವದ ಹಿಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಕೃತ್ಯ ಎಸಗಿದ ಬಾಲಕನನ್ನು ಪತ್ತೆ ಮಾಡಿದ ಪೊಲೀಸರು ಬಾಲಕನ ಕರೆದು ವಿಚಾರಣೆ ನಡೆಸಿದ್ದಾರೆ. ಅದೇ ಶಾಲೆಯ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಈ ಕೃತ್ಯವೆಸಗಿದ್ದಾನೆ.

ಶಾಲೆಯಲ್ಲಿ ಇದೇ ಜುಲೈ ತಿಂಗಳು 21 ರಂದು 10 ನೇ ತರಗತಿಯ ಮೊದಲನೆಯ ಸೆಮಿಸ್ಟರ್ ಪರೀಕ್ಷೆ ಇತ್ತು. ಹೀಗಾಗಿ ಪರೀಕ್ಷೆ ಮುಂದೂಡಲೆಂದು ಬಾಲಕ ಈ ರೀತಿಯ ಪ್ಲ್ಯಾನ್ ಮಾಡಿ, ಬೆದರಿಕೆ ಹಾಕುವ ಪ್ಲ್ಯಾನ್ ಮಾಡಿದ್ದನಂತೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಆರ್ ಆರ್ ನಗರ ಪೊಲೀಸರು ಹುಡುಗನನ್ನ ವಿಚಾರಣೆ ನಡೆಸಿ ಬಾಲ ಅಪರಾಧಿಗಳ ಪುನಃಶ್ವೇತನ ಕೇಂದ್ರಕ್ಕೆ ಕಳುಹಿಸಿದ್ದಾರೆ.

Leave A Reply

Your email address will not be published.