ನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ಇನ್ನೊಬ್ಬ ವ್ಯಕ್ತಿ ಮೇಲೆ ಚೂರಿ ಇರಿತ

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಕನ್ಹಯ್ಯ ಲಾಲ್ ಬರ್ಬರ ಹತ್ಯೆ ನಡೆದಿದ್ದು, ಈ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ. ನೂಪುರ್ ಶರ್ಮಾ ಹೇಳಿಕೆ ವಿಡಿಯೋ ನೋಡುತ್ತಿದ್ದ ವ್ಯಕ್ತಿ ಮೇಲೆ ಚೂರಿ ಇರಿತ ನಡೆಸಿದ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ನಡೆದಿದೆ.

 

ಅಂಕಿತ್ ಝಾ (23) ಹಲ್ಲೆಗೊಳಗಾದವರು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜುಲೈ 15ರ ಸಂಜೆ ಪಾನ್ ಶಾಪ್‍ನಲ್ಲಿ ಗುಂಪೊಂದು ಅಂಕಿತ್ ಝಾ ಜೊತೆಗೆ ಜಗಳವಾಡಿದ್ದು, ಈ ವೇಳೆ ಚಾಕು ಇರಿದು ಪರಾರಿಯಾಗಿದೆ.ಅಂಕಿತ್ ಝಾ ದರ್ಭಾಂಗಾದ ಸ್ಥಳೀಯ ನರ್ಸಿಂಗ್ ಹೋಮ್‍ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೂಪುರ್ ಶರ್ಮಾ ಅವರ ವೀಡಿಯೊವನ್ನು ವಾಟ್ಸಾಪ್ ಸ್ಟೇಟಸ್ ಗೆ ಅಂಕಿತ್ ಝಾ ಅಪ್‍ಲೋಡ್ ಮಾಡಿದ್ದರು. ಇದೇ ವೀಡಿಯೋವನ್ನು ವೀಕ್ಷಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ತನ್ನೊಂದಿಗೆ ಗಲಾಟೆ ಮಾಡಿದ್ದು, ನಂತರ ಯಾರೋ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಅಂಕಿತ್ ಝಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಮೊಹಮ್ಮದ್ ನಿಹಾಲ್, ಮೊಹಮ್ಮದ್ ಬಿಲಾಲ್ ಸಹಿತ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

Leave A Reply

Your email address will not be published.